ಬ್ರೇಕಿಂಗ್ ನ್ಯೂಸ್
16-09-21 11:55 am Mangaluru Correspondent ಕ್ರೈಂ
ಕೊಣಾಜೆ, ಸೆ.16: ಕರ್ನಾಟಕ - ಕೇರಳ ಗಡಿಪ್ರದೇಶ ಮರೀಕಳ ಎಂಬಲ್ಲಿರುವ ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಹಸುಗಳನ್ನು ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿಯಡಿ ಕೊಣಾಜೆ ಪೊಲೀಸರು ರಕ್ಷಿಸಿದ್ದಾರೆ.
ಮುಡಿಪು ಜವಾಹರಲಾಲ್ ನವೋದಯ ವಿದ್ಯಾಲಯದ ಬಳಿಯ ಪೂಪಾಡಿಕಲ್ಲು ಕ್ರಾಸ್ ನಲ್ಲಿ ಪೊಲೀಸರು ಸಮರ್ಪಕ ದಾಖಲೆ ಇಲ್ಲದೆ ಎರಡು ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನ ತಡೆದು ಹಸುಗಳನ್ನ ವಶಕ್ಕೆ ತೆಗೆದಿದ್ದಾರೆ. ಬಜರಂಗದಳದ ಸ್ಪಷ್ಟ ಮಾಹಿತಿಯ ಮೇರೆಗೆ ಕೊಣಾಜೆ ಪೊಲೀಸರು ಇಂದು ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಪಿಕ್ ಅಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.




ಹಸುಗಳನ್ನ ಹಾಲು ಉತ್ಪಾದಕ ಸಂಘದಿಂದ ಪೂಪಾಡಿ ಕಲ್ಲಿನ ಸ್ಥಳೀಯ ಕೃಷಿಕರೋರ್ವರು ಖರೀದಿಸಿದ್ದು ಅದನ್ನು ಸಾಗಾಟ ಮಾಡುತ್ತಿರುವುದಾಗಿ ಆರೋಪಿಗಳು ಪೊಲೀಸರಲ್ಲಿ ಸಬೂಬು ನೀಡಿದ್ದಾರೆ.
ಕೊಣಾಜೆ ಠಾಣೆ ವ್ಯಾಪ್ತಿಯ ಕರ್ನಾಟಕ- ಕೇರಳ ಗಡಿ ಪ್ರದೇಶದ ಮರೀಕಳ ಎಂಬಲ್ಲಿ ಕಸಾಯಿಖಾನೆಗೆ ನಿತ್ಯವೂ ಹೀಗೆ ಸುಳ್ಳು ದಾಖಲೆ ಸೃಷ್ಟಿಸಿ ಗೋವುಗಳನ್ನು ಸಾಗಾಟ ನಡೆಸುತ್ತಿರುವುದಾಗಿ ಬಜರಂಗದಳ ಜಿಲ್ಲಾ ಗೋರಕ್ಷ ಪ್ರಮುಖರಾದ ಪವಿತ್ರ ಕರೆಬೈಲ್ ಆರೋಪಿಸಿದ್ದಾರೆ. ಪೊಲೀಸರು ಇದರ ಬಗ್ಗೆ ಸಮರ್ಪಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Madipu Two Pickup Vans held for illegal cattle trafficking by VHP activists, two taken to custody by Konaje Police in Mangalore. VHP allege that everyday cattle trafficking is being taken place by showing fake documents and taking the cattle’s to slaughter house.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm