ಬ್ರೇಕಿಂಗ್ ನ್ಯೂಸ್
18-06-24 09:47 pm HK News Desk ಕ್ರೈಂ
ಮುಂಬೈ, ಜೂ 18: ಪ್ರೀತಿಸಿದ ಯುವತಿಯನ್ನೇ ಯುವಕನೊಬ್ಬ ನಡುರೋಡಲ್ಲಿ, ಜನರ ಮಧ್ಯೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮುಂಬೈ ನಗರದ ವಾಸಯಿಯಲ್ಲಿ ನಡೆದಿದೆ. ಹತ್ಯೆಗೈದ ಯುವಕನನ್ನು ರೋಹಿತ್ ಮತ್ತು ಕೊಲೆಯಾದ ಯುವತಿಯನ್ನು 20 ವರ್ಷದ ಆರತಿ ಎಂದು ಗುರುತಿಸಲಾಗಿದೆ.
ಕೊಲೆಯಾದ ಆರತಿಯು ರೋಹಿತ್ ಗರ್ಲ್ ಫ್ರೆಂಡ್ ಆಗಿದ್ದಳು. ಕಳೆದ 6 ವರ್ಷಗಳಿಂದ ಇವರಿಬ್ಬರು ಪ್ರೀತಿಸಿದ್ದು ಇತ್ತೀಚೆಗೆ ಲವ್ ಬ್ರೇಕಪ್ ಆಗಿತ್ತು. ಆರತಿ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಯುವಕ ಇಂದು ಬೆಳಗ್ಗೆ ಕಬ್ಬಿಣದ ಸ್ಪ್ಯಾನರ್ ನಿಂದ 15 ಬಾರಿ ಹೊಡೆದು ಹತ್ಯೆ ಮಾಡಿದ್ದಾನೆ. ರೋಹಿತ್ ಯಾದವ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ.

6 ವರ್ಷಗಳಿಂದ ಲವ್ ಇನ್ ರಿಲೇಷನ್ಶಿಪ್ನಲ್ಲಿದ್ದ ರೋಹಿತ್, ಆರತಿ ಮಧ್ಯೆ ಮನಸ್ತಾಪ ಶುರುವಾಗಿತ್ತು. ಆರತಿ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ರೊಚ್ಚಿಗೆದ್ದ ರೋಹಿತ್ ಕಬ್ಬಿಣದ ಸ್ಪ್ಯಾನರ್ ನಿಂದ ಬಂದು ತಲೆಗೆ ಹೊಡೆದಿದ್ದಾನೆ. ವ್ಯಕ್ತಿಯೊಬ್ಬ ರೋಹಿತ್ನನ್ನು ತಡೆದರೂ ಬಿಡದೇ ರೋಹಿತ್, ಆರತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಹಾಡಹಗಲೇ ರೋಹಿತ್, ಆರತಿಯನ್ನ ಭೀಕರವಾಗಿ ಹತ್ಯೆ ಮಾಡಿ ನಡುರೋಡಲ್ಲಿ ನಿಂತಿದ್ದಾನೆ. ಕಬ್ಬಿಣದ ಸಲಾಕೆಯಲ್ಲಿ ಹೊಡೆಯುತ್ತಿದ್ದಂತೆ ಕೆಳಗೆ ಬಿದ್ದ ಯುವತಿ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾಳೆ. ಆರತಿ ಸಾವನ್ನಪ್ಪಿರೋದನ್ನು ಖಚಿತಪಡಿಸಿಕೊಳ್ಳುವವರೆಗೂ ರೋಹಿತ್ ಹಲ್ಲೆ ಮಾಡಿದ್ದಾನೆ.
ವ್ಯಕ್ತಿಯೋರ್ವ ರೋಹಿತ್ನನ್ನು ತಡೆಯಲು ಪ್ರಯತ್ನಿಸಿದ್ದು, ಆ ವ್ಯಕ್ತಿಯನ್ನು ದೂರ ತಳ್ಳಿ, ಆತನಿಗೂ ಸ್ಪ್ಯಾನರ್ನಲ್ಲಿ ಹೊಡೆಯುವ ಬೆದರಿಕೆ ಹಾಕಿದ್ದಾನೆ. ಆತಂಕಗೊಂಡ ವ್ಯಕ್ತಿ ದೂರ ಸರಿದಿರುವುದು ವಿಡಿಯೋದಲ್ಲಿ ಕಾಣಬಹುದು. ಇನ್ನು ಜನರು ಅತ್ತಿತ್ತ ಓಡಾಡುತ್ತಿದ್ದರೂ ಕೂಡಾ ಬೇರೆ ಯಾರೂ ದಾಳಿಯನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ.
ಇನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ರೋಹಿತ್ ಆಕೆ ಸತ್ತ ಬಳಿಕ ಶವವನ್ನು ಹಿಡಿದು ‘ನನಗೇಕೆ ಹೀಗೆ ಮಾಡಿದೆ, ಯಾಕೆ ಹೀಗೆ ಮಾಡಿದೆ’ ಎಂದು ಹಿಂದಿಯಲ್ಲಿ ಕಿರುಚಾಡಿ ಮತ್ತೊಮ್ಮೆ ಆಕೆಗೆ ಹೊಡೆದಿರುವುದು ಕಂಡುಬಂದಿದೆ. ಅದಾದ ಬಳಿಕ ರಕ್ತಸಿಕ್ತ ಸ್ಪ್ಯಾನರ್ ಅನ್ನು ಪಕ್ಕಕ್ಕೆ ಎಸೆದು ಹೋಗಿದ್ದಾನೆ.
ಪೊಲೀಸರು ಆರೋಪಿ ರೋಹಿತ್ ಯಾದವ್ನನ್ನು ಬಂಧಿಸಿದ್ದಾರೆ.
Horrified and heartbroken by the brutal murder of a 20-year-old girl in broad daylight on a busy street in Mumbai's Vasai.
— Piku (@risingsurbhi) June 18, 2024
Who is responsible for this ?
Kejriwal?
Aam Aadmi Party ? pic.twitter.com/cH4qjmaamL
In a disturbing incident, a 20-year-old woman was clobbered to death with an iron wrench by her boyfriend in full public view in Palghar district of Maharashtra on Tuesday. The brutal murder was caught on CCTV camera and showed the victim, Aarti Yadav, being bludgeoned to death by her boyfriend Rohit Yadav.
25-03-26 09:32 pm
HK News Staffer
13 ವರ್ಷಗಳ ಜೀವನ್ಮರಣ ಹೋರಾಟಕ್ಕೆ ಕೊನೆ ; ನಿಷ್ಕ್ರಿಯ...
25-03-26 03:25 pm
ಹಿಂದು, ಸಿಖ್, ಬೌದ್ಧರಲ್ಲಿ ಮಾತ್ರ ಪರಿಶಿಷ್ಟ ಮೀಸಲು,...
24-03-26 02:55 pm
ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜ...
23-03-26 12:48 pm
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
25-03-26 06:15 pm
HK News Staffer
ಟ್ರಂಪ್ ಯುದ್ಧ ವಿರಾಮ ನಡುವೆಯೂ ಇಸ್ರೇಲ್ ದಾಳಿ ಮುಂದು...
24-03-26 04:43 pm
ಅಮೆರಿಕಾ ಜೊತೆ ಯಾವುದೇ ಮಾತುಕತೆ ನಡೆದಿಲ್ಲ , ನಮ್ಮ ವ...
24-03-26 12:10 pm
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
25-03-26 08:44 pm
HK News Staffer
ಭಾರತೀಯ ನೌಕಾಪಡೆ ರಕ್ಷಣೆ, ಆತಂಕದಿಂದ ಪಾರಾಗಿದ್ದೇವೆ...
25-03-26 05:23 pm
ಟೋಲ್ ಪ್ಲಾಜಾಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ...
25-03-26 03:49 pm
ಗುಡ್ಡದಲ್ಲಿ ಹೊಳೆ ಬರುತ್ತಾ? ನಿವೇಶನ ರಹಿತರ ಜಮೀನು ಹ...
25-03-26 12:15 pm
ಹಣಕಾಸು ಮಸೂದೆ ಮೇಲಿನ ಚರ್ಚೆ ; ರಾಷ್ಟ್ರೀಯ ಭದ್ರತೆ,...
24-03-26 09:29 pm
24-03-26 02:04 pm
HK News Staffer
ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಪ್ರಚೋದಿಸುವ ವಿಡಿ...
23-03-26 09:44 pm
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm