ಬ್ರೇಕಿಂಗ್ ನ್ಯೂಸ್
16-05-24 09:31 pm HK News Desk ಕ್ರೈಂ
ಹೈದರಬಾದ್, ಮೇ.16: ಸಾಕು ನಾಯಿಯನ್ನು ರಸ್ತೆಯಲ್ಲಿ ವಾಕಿಂಗ್ ಒಯ್ಯುತ್ತಿದ್ದಾಗ, ನಾಯಿ ಹತ್ತಿರ ಬಂತೆಂದು ನಾಲ್ವರು ಯುವಕರು ನಾಯಿ ಮತ್ತು ಅದರ ಮಾಲೀಕನಿಗೆ ದೊಣ್ಣೆ ಮತ್ತು ಕಬ್ಬಿಣದ ರಾಡ್ ನಲ್ಲಿ ಯದ್ವಾತದ್ವಾ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ನಗರದ ಮಧುರಾ ನಗರ್ ಎಂಬಲ್ಲಿ ನಡೆದಿದೆ.
ಮಮೇ 14ರಂದು ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ವರು ಯುವಕರು ಹಲ್ಲೆ ತಡೆಯಲು ಬಂದ ಮಹಿಳೆಯರಿಗೂ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಮಧುರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೆಹಮಾನ್ ನಗರ ಎಂಬಲ್ಲಿ ಘಟನೆ ನಡೆದಿದೆ. ಶ್ರೀನಾಥ್ ಮತ್ತು ಅವರ ಪತ್ನಿ ಸ್ವಪ್ನಾ, ತಾಯಿ ರಾಜೇಶ್ವರಿ ಗಂಭೀರ ಹಲ್ಲೆಗೀಡಾದವರು. ನಾಯಿ ತಲೆಗೆ ಗಂಭೀರ ಏಟಾಗಿದ್ದು, ಕೋಮಾ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಾಥ್ ನೆಲಕ್ಕೆ ಬಿದ್ದರೂ ದೊಣ್ಣೆಯಲ್ಲಿ ಎಗ್ಗಿಲ್ಲದೆ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಶ್ರೀನಾಥ್ ತಾಯಿ ಮತ್ತು ಪತ್ನಿ ಮನೆಯಿಂದ ಓಡಿ ಬಂದು ಹಲ್ಲೆಯನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಯುವಕರು ಮಹಿಳೆಯರ ಮೇಲೂ ದೊಣ್ಣೆ ಬೀಸಿದ್ದಾರೆ. ಅಷ್ಟರಲ್ಲಿ ಪರಿಸರದ ಇನ್ನಷ್ಟು ಮಹಿಳೆಯರು ಬಂದಿದ್ದು, ಹಲ್ಲೆಯನ್ನು ತಡೆದಿದ್ದಾರೆ. ಶ್ರೀನಾಥ್ ತಾಯಿ ಕೈಮುಗಿದು ಬಿಟ್ಟು ಬಿಡಿ ಎಂದು ಕೇಳಿಕೊಂಡರೂ, ಯುವಕರು ಮನ ಬಂದಂತೆ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧಿಸಿ ಪೊಲೀಸರು ಧನಂಜಯ, ಸೂರ್ಯನಾರಾಯಣ, ಪ್ರವೀಣ್ ಕುಮಾರ್, ಗೌರಿ ಶಂಕರ್, ಶ್ರೀರೆಡ್ಡಿ ರಾಮಬಾಬು ಎಂಬವರ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿದ್ದಾರೆ.
ಶ್ರೀನಾಥ್ ಸೋದರ ಮಧು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಮೇ 8ರಂದು ಶ್ರೀನಾಥ್ ಮನೆಯಲ್ಲಿದ್ದ ನಾಯಿ ಹೊರಗೆ ಹೋಗಿದ್ದು, ಆರೋಪಿ ಧನಂಜಯ ಹೊಸತಾಗಿ ಕಟ್ಟಿಸುತ್ತಿರುವ ಮನೆಯತ್ತ ಹೋಗಿತ್ತು. ಆನಂತರ ಶ್ರೀನಾಥ್ ಹೋಗಿ ನಾಯಿಯನ್ನು ಕರೆದುಕೊಂಡು ಬಂದಿದ್ದ. ಈ ವೇಳೆ, ನಾಯಿ ಮೇಲೆ ಆರೋಪಿಗಳು ದಾಳಿಗೆ ಯತ್ನಿಸಿದ್ದರು. ಮೇ 14ರಂದು ನಾಯಿಯನ್ನು ವಾಕಿಂಗ್ ಒಯ್ಯಲು ತೆರಳುತ್ತಿದ್ದಾಗ, ಧನಂಜಯ ಮತ್ತು ಆತನ ಗೆಳೆಯರು ಗುಂಪು ಕಟ್ಟಿಕೊಂಡು ಬಂದು ನಾಯಿ ಮೇಲಿನ ದ್ವೇಷದಲ್ಲಿ ಇಡೀ ಕುಟುಂಬದ ಮೇಲೆ ದೊಣ್ಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
⚠️: Viewers Discretion
— Ghar Ke Kalesh (@gharkekalesh) May 16, 2024
Horrible Scenes from Maduranagar HYD, The dog, the owner and his wife were attacked, Dhanunjay along with his two friends attacked and beat Srinath, Srinath's wife and pet dog with sticks.
pic.twitter.com/ZPrA8D6mVw
Five persons were booked by the Madhura Nagar police in Hyderabad on May 14, for brutally assaulting a family using iron rods and wooden logs. The accused also attacked their pet dog, which has suffered critical injuries. The entire incident was caught on camera. The premeditated attack was in response to a recent feud involving Srinath’s pet dog, police said. The accused have been charged for attempted murder.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm