ಬ್ರೇಕಿಂಗ್ ನ್ಯೂಸ್
11-10-20 09:42 pm Mangaluru Correspondent ಕ್ರೈಂ
ವಿಟ್ಲ, ಅಕ್ಟೋಬರ್ 11: ಇಲ್ಲಿನ ಮೇಗಿನಪೇಟೆಯ ಒಂಟಿ ಮಹಿಳೆ ಮನೆಗೆ ದಾಳಿ ನಡೆಸಿ, ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.
ಉತ್ತರ ಪ್ರದೇಶ ಸಹರನಪುರ ಜಿಲ್ಲೆ ನಿವಾಸಿ ಜುಬೈರ್ ಅಹಮ್ಮದ್ (೨೪) ಬಂಧಿತ ಆರೋಪಿ. ಈತ ಕಳೆದ ಮೂರು ವರ್ಷಗಳಿಂದ ಮೇಗಿನಪೇಟೆಯ ರಮ್ಲಾ ಮರದ ಪೀಠೋಪಕರಣ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಮೂರು ದಿನಗಳಿಂದ ಮನೆ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಬಗ್ಗೆ ಮಹಿಳೆ ನೀಡಿದ ಮಾಹಿತಿ ಹಾಗೂ ವಿವಿಧ ಮಾಹಿತಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಇನ್ನೊಂದು ರೂಪ ಬರುವ ಮೊದಲೇ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಕೃತ್ಯದ ಸಮಯ ಬಳಸಿದ ವಸ್ತುಗಳನ್ನು ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಮಿಕನಾಗಿ ವಿಟ್ಲಕ್ಕೆ ಬಂದ ಈತ ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಹಣದ ಕೊರತೆಯಾಗಿ ಮೂರು ದಿನಗಳಿಂದ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಎಂದು ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ದಿನೇಶ್, ಜಯಕುಮಾರ್, ಪ್ರತಾಪ, ವಿನಾಯಕ, ಹೇಮರಾಜ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
ಇದನ್ನೂ ಓದಿ: ವಿಟ್ಲ ಒಂಟಿ ಮಹಿಳೆ ದರೋಡೆ ; ಕೊರೊನಾ ಲಾಕ್ಡೌನಲ್ಲಿ ಸಿಕ್ಕಿಬಿದ್ದ ಯುವಕನದ್ದೇ ಕೃತ್ಯ !
The Vitla police have succeeded in arresting the accused who assaulted woman, tied up her limbs and robbed her in the early hours of Friday, October 8. The accused has been identified as Jubair Ahmed from Uttar Pradesh.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am