ಬ್ರೇಕಿಂಗ್ ನ್ಯೂಸ್
28-09-20 05:20 pm Mangalore Correspondent ಕ್ರೈಂ
ಮಂಗಳೂರು, ಸೆಪ್ಟಂಬರ್ 28: ಲೇಡಿಸ್ ಹಾಸ್ಟೆಲ್ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಗೈದು ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಿಂದ ಏಳು ವರ್ಷಗಳ ಶಿಕ್ಷೆ ನೀಡಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈದುನ್ನೀಸಾ ಈ ತೀರ್ಪು ನೀಡಿದ್ದಾರೆ. ಅಪರಾಧಿ ಎಂದು ಪರಿಗಣಿಸಲ್ಪಟ್ಟ ನಾಗೇಶ್ (30) ಗೆ ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಲಾಗಿದೆ.

2007 ರಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಠೆಯ ಹಾಸ್ಟೇಲ್ ಒಂದರಲ್ಲಿ ಘಟನೆ ನಡೆದಿತ್ತು. ಕೇರಳ ಮೂಲದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸಂತ್ರಸ್ತೆಯಾಗಿದ್ದಳು.
ಮುಂಜಾನೆ 4.30 ರ ಸುಮಾರಿಗೆ ಹಾಸ್ಟೆಲ್ ಹಿಂಭಾಗದ ಪೈಪ್ ಮೂಲಕ ಕೊಠಡಿಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿಯ ಅತ್ಯಾಚಾರಗೈದು ಕೊಲೆ ಬೆದರಿಕೆಯೊಡ್ಡಿ 5 ಲಕ್ಷ ನಗದು ನೀಡುವಂತೆ ಒತ್ತಾಯಿಸಿದ್ದ. ಬಳಿಕ ವಿದ್ಯಾರ್ಥಿನಿಯ ಪರ್ಸ್ ನಿಂದ ಮೂರು ಸಾವಿರ ನಗದು, ಎಟಿಎಂ ಕಾರ್ಡ್ ಸಹಿತ ಪಿನ್ ನಂಬರ್ ಪಡೆದು ಮತ್ತೊಂದು ಕೊಠಡಿಗೆ ನುಗ್ಗಿ ಇನ್ನೊಬ್ಬಳು ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದ.
ಕೃತ್ಯದ ಬಳಿಕ ಆರೋಪಿ, ನಗರದ ಕಂಕನಾಡಿ ಎಟಿಎಂ ನಲ್ಲಿ ವಿದ್ಯಾರ್ಥಿನಿಯ ಕಾರ್ಡ್ ನಿಂದ ಹಣ ವಿತ್ ಡ್ರಾ ಮಾಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಬೆರಳಚ್ಚು ಮತ್ತು ಎಟಿಎಂ ಸಿಸಿ ಟಿವಿ ಆಧರಿಸಿ ಅಪರಾಧಿಯ ಪತ್ತೆ ಮಾಡಿದ ಪೊಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯ ಕೃತ್ಯ ಸಾಬೀತಾಗಿದ್ದರಿಂದ ಶಿಕ್ಷೆ ಘೋಷಣೆ ಮಾಡಿದೆ.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm