ಬ್ರೇಕಿಂಗ್ ನ್ಯೂಸ್
15-11-21 02:52 pm Mangaluru Correspondent ಕರಾವಳಿ
ಮಂಗಳೂರು, ನ.15: ನಾಗನ ಕಲ್ಲನ್ನು ಹಾನಿಗೊಳಿಸಿದ ಪ್ರಕರಣವನ್ನು ಖಂಡಿಸಿ ನಗರದ ಕೋಡಿಕಲ್ ನಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಬಂದ್ ನಡೆಸಿದ್ದಾರೆ. ಕೋಡಿಕಲ್ ವ್ಯಾಪ್ತಿಯಲ್ಲಿ ಬಸ್, ಇನ್ನಿತರ ವಾಹನಗಳಿಗೆ ತಡೆಯೊಡ್ಡಿದ್ದು ರಸ್ತೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಡಿಕಲ್ ನಾಗನ ಸನ್ನಿಧಿಯ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ, ಮಂಗಳೂರಿನಲ್ಲಿ ನಾಗನ ಕಲ್ಲಿಗೆ ಹಾನಿ, ದೈವಸ್ಥಾನಗಳಿಗೆ ಅಪವಿತ್ರಗೊಳಿಸುವ ಕೆಲಸ ಸರಣಿಯಂತೆ ನಡೆಯುತ್ತಲೇ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ಆರೋಪಿಗಳನ್ನು ಬಂಧಿಸಿಲ್ಲ. ಇತ್ತೀಚೆಗೆ ಬೈಕಂಪಾಡಿಯಲ್ಲಿ ನಡೆದ ಘಟನೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆತ ಕೃತ್ಯ ನಡೆಸಿದ್ದಾನೆ ಅನ್ನುವುದನ್ನು ನಂಬಲು ಆಗುತ್ತಿಲ್ಲ.
ಅಲ್ಲಿ ದೈವಸ್ಥಾನಕ್ಕೆ ಅಪಚಾರ, ಹಾನಿ ಎಸಗುವ ಕೃತ್ಯ ನಡೆದಿತ್ತು. ಮಾನಸಿಕ ಅಸ್ವಸ್ಥ ವ್ಯಕ್ತಿ ಮಾತ್ರದಿಂದ ಈ ರೀತಿ ಕೃತ್ಯ ಆಗಲು ಸಾಧ್ಯವಿಲ್ಲ. ಆನಂತರ ಕುಳೂರಿನಲ್ಲಿ ಅದೇ ರೀತಿ ನಾಗನ ಕಲ್ಲಿಗೆ ಹಾನಿ, ಅಪಚಾರ ಎಸಗಿದ ಕೃತ್ಯ ನಡೆದಿತ್ತು. ಅದರಲ್ಲಿಯೂ ಆರೋಪಿಗಳ ಬಂಧನ ಆಗಿಲ್ಲ. ಈ ರೀತಿಯ ಕೃತ್ಯ ಮರುಕಳಿಕೆ ಆಗುತ್ತಿರುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಇದಕ್ಕೂ ಮುನ್ನ ಮಂಗಳೂರು, ಉಳ್ಳಾಲ ಪರಿಸರದಲ್ಲಿ ಕೊರಗಜ್ಜ, ಬಬ್ಬುಸ್ವಾಮಿ ದೈವಸ್ಥಾನಕ್ಕೆ ಅಪಚಾರ, ಕಾಣಿಕೆ ಡಬ್ಬಿ ಒಡೆದು ಹಾಕುವ ಕೃತ್ಯಗಳು ನಡೆದಿದ್ದವು. ಆ ಪ್ರಕರಣದಲ್ಲಿಯೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ.
ನಾವು ಮೊನ್ನೆ 24 ಗಂಟೆಯ ಗಡುವು ಕೊಟ್ಟಿದ್ದೆವು. ಆದರೆ, ಈಗ 24 ದಿನಗಳ ಗಡುವನ್ನೇ ಕೊಡುತ್ತಿದ್ದೇವೆ. ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಪೂರ್ತಿ ಸ್ವಾತಂತ್ರ್ಯವನ್ನೂ ಕೊಟ್ಟಿದ್ದೇವೆ. ಯಾರು ಈ ಅಪಚಾರ ಎಸಗಿದ್ದಾರೋ ಅವರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸುವಂತೆ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. 24 ದಿನಗಳಲ್ಲಿ ಬಂಧನ ಆಗದೇ ಇದ್ದರೆ ಈ ಬಗ್ಗೆ ಹೋರಾಟವನ್ನು ಜಿಲ್ಲೆಯಾದ್ಯಂತ ಮಾಡಲಿದ್ದೇವೆ. ಇಡೀ ಜಿಲ್ಲೆ ಬಂದ್ ನಡೆಸುವುದಕ್ಕೂ ನಾವು ಹಿಂಜರಿಯಲ್ಲ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ಹಿಂದು ಸಮಾಜ ಸಾಕಷ್ಟು ತಾಳ್ಮೆ ವಹಿಸುತ್ತದೆ. ಆದರೆ, ಪದೇ ಪದೇ ಈ ರೀತಿಯ ಕೃತ್ಯಗಳು ಮರುಕಳಿಸಿದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ತಾಳ್ಮೆಗೂ ಮಿತಿ ಇರುತ್ತದೆ. ನಾಗನ ಸನ್ನಿಧಾನ ಪ್ರತಿ ಹಿಂದು ಕೈಮುಗಿಯುವ ಸ್ಥಳ. ನಾಗನಿಗೆ ಅಪಚಾರ ಆಗುವುದಂದ್ರೆ, ಹಿಂದುಗಳಿಗೆ ಅಪಮಾನ ಆದಂತೆ. ಪೊಲೀಸರು ನಮ್ಮ ಪ್ರತಿಭಟನೆಯನ್ನು ಎಚ್ಚರಿಕೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇವೆ ಎಂದು ಹೇಳಿದರು.
ನೂರಾರು ಕಾರ್ಯಕರ್ತರು, ಸ್ಥಳೀಯ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೋಡಿಕಲ್ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದಾರೆ.
ಕೋಡಿಕಲ್ ; ನಾಗನ ಕಲ್ಲನ್ನು ಹೊರಕ್ಕೆಸೆದು ದುಷ್ಕೃತ್ಯ, ಆರೋಪಿಗಳ ಬಂಧಿಸದಿದ್ದರೆ ಬಜರಂಗದಳ ಬಂದ್ ಎಚ್ಚರಿಕೆ
Vishwa Hindu Parishad (VHP) and Bajrang Dal staged a protest here at Kodikal ground on Monday November 15 condemning the incident of idol desecration at Nagabhramastana here on November 13. The protestors also took out a protest march from Kodikal ground to Nagabhramastana leading to a bandh. Shops in the vicinity were closed and vehicle movement is also restricted.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm