ಬ್ರೇಕಿಂಗ್ ನ್ಯೂಸ್
18-09-26 11:30 am HK News Staffer ಕರಾವಳಿ
ಮಂಗಳೂರು, ಸೆ.18: ಜೈಲು ಜಾಮರ್ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಕೀಲರನ್ನು ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಭೆ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವುದಾಗಿ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದು ವಕೀಲರು ಅಲ್ಲಿಂದ ಹೊರಡುವ ಮೊದಲೇ ತಡೆ ಹಾಕಿದ್ದಾರೆ. ಹೀಗಾಗಿ ಸ್ಥಳದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ತಳ್ಳಾಟ, ಜಟಾಪಟಿ ನಡೆದಿದೆ.


ಮಂಗಳೂರು ಜೈಲ್ ಆಸುಪಾಸಿನಲ್ಲಿ ಕಿಮೀ ಉದ್ದಕ್ಕೆ ಮೊಬೈಲ್ ಜಾಮರ್ ಸಮಸ್ಯೆ ಎರಡು ವರ್ಷಗಳಿಂದ ಎದುರಾಗಿದ್ದು ಪ್ರತಿಭಟನೆ, ಹೈಕೋರ್ಟ್ ಹೋರಾಟದ ನಡುವೆಯೂ ಬಗೆಹರಿದಿಲ್ಲ. ಹೀಗಾಗಿ ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದರೆ ಸುಲಭದಲ್ಲಿ ಬಗೆಹರಿಯಬಹುದು ಎನ್ನುವ ನೆಲೆಯಲ್ಲಿ ಜಗದೀಶ್ ಶೇಣವ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಕೋರ್ಟ್ ಆವರಣದಿಂದ ತೆರಳಿ ಸಚಿವ ಸಂಪುಟ ಸಭೆ ನಡೆಯುವ ಪಡೀಲ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಕೀಲರು ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ.
ಮುತ್ತಿಗೆ ಹಾಕಲು ಕೋರ್ಟ್ ಆವರಣದಿಂದ 300 ಮಂದಿ ವಕೀಲರ ತಂಡ ಹೊರಡುತ್ತೆ ಎಂದು ಜಗದೀಶ್ ಶೇಣವ ಹೇಳಿದ್ದಲ್ಲದೆ, ರಾಪಿಡ್ ಆಕ್ಷನ್ ಫೋರ್ಸ್ ಬರಲಿ ಅಥವಾ ಗೋಲಿಬಾರ್ ಆಗಲಿ. ನಮ್ಮ ಮುತ್ತಿಗೆ ಖಂಡಿತ ಎಂದು ಹೇಳಿದ್ದರಿಂದ ಸ್ಥಳದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು. ಭಿತ್ತಿಪತ್ರ ಹಿಡಿದು ನಿಂತ ವಕೀಲರನ್ನು ಅಲ್ಲಿಯೇ ವಶಕ್ಕೆ ಪಡೆದು ಬಸ್ಸಿಗೆ ತುಂಬಿಸಿ ಠಾಣೆಗೊಯ್ದರು.
Police detained a group of lawyers at the Mangaluru District Court premises on Thursday as they attempted to march towards the venue of the state Cabinet meeting, led by Chief Minister D.K. Shivakumar, demanding government action on the mobile jammer issue around Mangaluru prison.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am