ಬ್ರೇಕಿಂಗ್ ನ್ಯೂಸ್
07-11-21 08:39 pm Mangaluru Correspondent ಕರಾವಳಿ
ಮಂಗಳೂರು, ನ.7: ಮಿಲಿಟರಿ ಉಪಯೋಗಕ್ಕೆ ಬಳಕೆಯಾಗುವ ಹ್ಯಾಂಡ್ ಗ್ರೆನೇಡ್ ಬಾಂಬ್ ಉಪ್ಪಿನಂಗಡಿ ಬಳಿಯ ಇಳಂತಿಲ ಗ್ರಾಮದಲ್ಲಿ ಪತ್ತೆಯಾಗಿದ್ದು, ಪರಿಸರದಲ್ಲಿ ಆತಂಕ ಮೂಡಿಸಿರುವ ಮಧ್ಯೆಯೇ ಪೊಲೀಸ್ ಮತ್ತು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ.
ಮಿಲಿಟರಿ ಬಳಕೆಯ ಹ್ಯಾಂಡ್ ಗ್ರೆನೇಡನ್ನು ಸಾಮಾನ್ಯವಾಗಿ ಯೋಧರು ಯುದ್ಧ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಅದು ಬಿಟ್ಟರೆ ಮಿಲಿಟರಿ ಬಳಕೆಯ ಯಾವುದೇ ಸ್ಫೋಟಕ ವಸ್ತುಗಳು ಹೊರಗೆ ಬರುವಂತಿಲ್ಲ. ಅದರ ತಯಾರಿಗೆಂದೇ ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಕಾರ್ಖಾನೆಗಳಿದ್ದು, ಅಲ್ಲಿಂದ ನೇರವಾಗಿ ಮಿಲಿಟರಿ ನೆಲೆಗಳಿಗೆ ಮಾತ್ರ ಪೂರೈಕೆ ಇರುತ್ತದೆ. ಆದರೆ, ಈ ಮಾದರಿಯ ಹ್ಯಾಂಡ್ ಗ್ರೆನೇಡ್ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶ ಉಪ್ಪಿನಂಗಡಿಗೆ ಹೇಗೆ ಬಂದಿರುವುದು ಎನ್ನುವುದು ಆತಂಕ ಸೃಷ್ಟಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಎಸ್ಪಿ ಋಷಿಕುಮಾರ್ ಸೋನವಾಣೆ ಬಳಿ ಕೇಳಿದರೆ, ಹ್ಯಾಂಡ್ ಗ್ರೆನೇಡ್ ಭಾರತೀಯ ಮಿಲಿಟರಿಗೆ ಸೇರಿದ್ದು, 1978ರಿಂದ 83ರ ಮಧ್ಯೆ ತಯಾರಾಗಿರುವಂಥದ್ದು. ಇದು ಹೇಗೆ ಇಲ್ಲಿ ಪತ್ತೆಯಾಯ್ತು ಅನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಭಾರತೀಯ ಮಿಲಿಟರಿ ಆರ್ಡಿನೆನ್ಸ್ ಮತ್ತು ಸೇನಾ ವಿಭಾಗಕ್ಕೆ ಪತ್ರ ಬರೆದು ಮಾಹಿತಿ ಕೇಳುತ್ತೇವೆ. ಸದ್ಯಕ್ಕೆ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕರೆದೊಯ್ದು ಗ್ರೆನೇಡನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.
ಹ್ಯಾಂಡ್ ಗ್ರೆನೇಡ್ ಸಾಧಾರಣವಾಗಿ 15-20 ವರ್ಷಗಳಷ್ಟು ಬಾಳಿಕೆ ಬರುತ್ತದೆ. ರಷ್ಯಾ ನಿರ್ಮಿತ ಹ್ಯಾಂಡ್ ಗ್ರೆನೇಡ್ ಗಳಾದಲ್ಲಿ ಮಾತ್ರ ಅದಕ್ಕಿಂತಲೂ ಹೆಚ್ಚು ಆಯಸ್ಸು ಹೊಂದಿರುತ್ತದೆ. ಚೀನಾ ನಿರ್ಮಿತ ಹ್ಯಾಂಡ್ ಗ್ರೆನೇಡ್ ಕೂಡ ಭಾರತದಲ್ಲಿ ಸಿಗುತ್ತಿದ್ದು, ಅದನ್ನು ನಕ್ಸಲರು ಬಳಕೆ ಮಾಡುತ್ತಾರೆ. ಆದರೆ, ಭಾರತದ ಮಿಲಿಟರಿ ಉಪಯೋಗದ ಹ್ಯಾಂಡ್ ಗ್ರೆನೇಡಿಗೂ ಚೀನಾ ಮೂಲದ ಗ್ರೆನೇಡಿಗೂ ವ್ಯತ್ಯಾಸ ಇರುತ್ತದೆ. ಇದು ಭಾರತದ ಮಿಲಿಟರಿ ಆರ್ಡಿನೆನ್ಸ್ ಕಾರ್ಖಾನೆಯಲ್ಲಿಯೇ ತಯಾರಾಗಿದೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇದಲ್ಲದೆ, ಹ್ಯಾಂಡ್ ಗ್ರೆನೇಡ್ ಅತ್ಯಂತ ಅಪಾಯಕಾರಿ ಬಾಂಬ್ ಆಗಿದ್ದು, ಅದರ ಸೇಫ್ಟಿ ಪಿನ್ ತೆಗೆದು ಬಿಸಾಡಿದರೆ 7ರಿಂದ 8 ಸೆಕೆಂಡಿನಲ್ಲಿ ಬ್ಲಾಸ್ಟ್ ಆಗುತ್ತದೆ. ಒಂದು ಬಸ್ಸನ್ನು ಸ್ಫೋಟಿಸಬಲ್ಲಷ್ಟು ಸಾಮರ್ಥ್ಯ ಇದಕ್ಕಿರುತ್ತದೆ. ಗ್ರೆನೇಡ್ ಬಳಕೆಯನ್ನು ತರಬೇತಿ ಪಡೆದ ಯೋಧರು ಮಾತ್ರ ಮಾಡಬಹುದಾಗಿದೆ. ಹೀಗಿರಬೇಕಾದರೆ, ಉಪ್ಪಿನಂಗಡಿಯ ಇಳಂತಿಲ ಗ್ರಾಮದಲ್ಲಿ ಮಿಲಿಟರಿ ಬಳಕೆಯ ಹ್ಯಾಂಡ್ ಗ್ರೆನೇಡ್ ಹೇಗೆ ಪತ್ತೆಯಾಯ್ತು ಅನ್ನೋದು ಸಂಶಯ, ಕುತೂಹಲಗಳಿಗೆ ಕಾರಣವಾಗಿದೆ. ಮಿಲಿಟರಿಯಲ್ಲಿ ಕೆಲಸ ಮಾಡಿದ ಯೋಧರು ಒಂದ್ವೇಳೆ ಅದನ್ನು ತೆಗೆದುಕೊಂಡು ಬಂದಿದ್ದಲ್ಲಿ ಅದು ಅಪರಾಧವಾಗಲಿದ್ದು, ಶಿಕ್ಷೆಗೆ ಗುರಿಯಾಗಲಿದ್ದಾರೆ.
ಭಾರತೀಯ ಸೇನೆ ಮತ್ತು ಮಿಲಿಟರಿ ಆರ್ಡಿನೆನ್ಸ್ ನಲ್ಲಿ ಯಾವ ವರ್ಷದಲ್ಲಿ ಎಷ್ಟು ಗ್ರೆನೇಡ್ ತಯಾರಾಗಿದೆ, ಎಲ್ಲಿಗೆಲ್ಲ ಪೂರೈಕೆ ಆಗಿರುತ್ತದೆ ಎನ್ನುವ ದಾಖಲೆಗಳಿರುತ್ತವೆ. ಇದರ ಆಧಾರದಲ್ಲಿ ಮಿಲಿಟರಿ ಅಧಿಕಾರಿಗಳು ಮಂಗಳೂರಿಗೆ ಬಂದು ಗ್ರೆನೇಡ್ ಬಗ್ಗೆ ತನಿಖೆ ನಡೆಸಲಿದ್ದಾರೆ. ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವ ಬಗ್ಗೆ ಮಿಲಿಟರಿಯಲ್ಲಿ ಕೆಲಸ ಮಾಡಿದ್ದ ನಿವೃತ್ತ ಯೋಧರೊಬ್ಬರು ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಿದ್ದರು. ಮೊದಲ ಸಂಶಯ ಅವರ ಮೇಲೇ ಕೇಂದ್ರಿತವಾಗಿದೆ.
ಇಳಂತಿಲ ಗುಡ್ಡದಲ್ಲಿ ಹ್ಯಾಂಡ್ ಗ್ರೆನೇಡ್ ಸ್ಫೋಟಕ ಪತ್ತೆ ; ನಿವೃತ್ತ ಯೋಧರಿಂದ ಪೊಲೀಸರಿಗೆ ದೂರು
Five grenades were found at the house of a retired Army personnel near Mangalore, the police said today. The grenades that were "manufactured in 1979-1980" were noticed by the retired Army personnel when he came back from a walk on Saturday, the police officials said. The grenades were reportedly kept near the fence of the house of the retired Army personnel in Belthangady, about 60 kilometres from Mangalore.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 04:46 pm
HK News Staffer
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
Mangalore Jail Jammer, Lawyers Protest, CM, M...
18-09-26 11:30 am
SDPI Protest, CM DK Shivakumar, Mangalore: ರಹ...
18-09-26 10:35 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am