ಬ್ರೇಕಿಂಗ್ ನ್ಯೂಸ್
11-08-21 08:22 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 11: ಸೌದಿ ಅರೇಬಿಯಾದಿಂದ ಮುಂಬೈಗೆ ಬಂದಿದ್ದ ಯುವಕನನ್ನು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸೇರಿ ಕ್ವಾರಂಟೈನ್ ಕೇಂದ್ರಕ್ಕೆ ತಳ್ಳಿದ್ದರು. ಎರಡು ಡೋಸೇಜ್ ಕೊರೊನಾ ಲಸಿಕೆ ನೀಡಿರುವ ಪ್ರಮಾಣಪತ್ರ, ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೂ, ಕ್ವಾರಂಟೈನ್ ಆಗಲೇಬೇಕೆಂದು ಹೊಟೇಲ್ ಕೊಠಡಿಯಲ್ಲಿ ಕೂಡಿಹಾಕಲಾಗಿತ್ತು. ಇದರಿಂದಾಗಿ ಎರಡು ದಿನಗಳಿಂದ ಅನ್ನ, ನೀರಿಲ್ಲದೆ ಬವಣೆ ಪಟ್ಟಿದ್ದ ಯುವಕ ಕೊನೆಗೂ ಅಲ್ಲಿಂದ ಪಾರಾಗಿ ಬಂದಿದ್ದಾನೆ.
ಅದಕ್ಕೆ ಕಾರಣವಾಗಿದ್ದು ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತರ ನೆರವು. ಹೀಗೆ ಪಾರಾಗಿ ಬಂದ ಯುವಕ ತೊಕ್ಕೊಟ್ಟು ಮೂಲದ ನಿವಾಸಿ ಮೊಹಮ್ಮದ್ ಸೌಬಾನ್. ನಾಲ್ಕು ದಿನಗಳ ಹಿಂದೆ ಈತ ಸೌದಿ ಅರೇಬಿಯಾದಿಂದ ನೇರ ಮಂಗಳೂರಿಗೆ ಬರಲು ಸಾಧ್ಯವಾಗದೆ ವಿಮಾನದಲ್ಲಿ ಮುಂಬೈಗೆ ಬಂದು ಇಳಿದಿದ್ದ. ಅಲ್ಲಿ ಹೊರಬರುತ್ತಿದ್ದಂತೆ ತನ್ನಲ್ಲಿ ಕೋವಿಡ್ ನೆಗೆಟಿವ್ ಇರುವುದನ್ನು ತೋರಿಸಿದರೂ, ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಆತನನ್ನು ಕರೆದೊಯ್ದು ಕ್ವಾರಂಟೈನ್ ಕೇಂದ್ರಕ್ಕೆ ಹಾಕಿದ್ದರು.
ಮುಂಬೈ ನಗರದ ಬಗ್ಗೆ ಪರಿಚಯವೇ ಇಲ್ಲದ ಸೌಬಾನ್ ಇದರಿಂದ ಭಯಗೊಂಡು ದಿಕ್ಕೆಟ್ಟು ಹೋಗಿದ್ದ. ಎಲ್ಲೋ ಒಂದು ಹೊಟೇಲಿನಲ್ಲಿ ಕೂಡಿಹಾಕಲಾಗಿತ್ತು. ತನ್ನಲ್ಲಿ ಎಲ್ಲವುಗಳ ಸರ್ಟಿಫಿಕೇಟ್ ಇದ್ದರೂ, ಅಧಿಕಾರಿಗಳು ಯಾರೂ ಈತನ ಮಾತು ಕೇಳಲಿಲ್ಲ. ಹೊಟೇಲಿನಲ್ಲಿ ಊಟ, ತಿಂಡಿಯನ್ನೂ ಕೊಡುತ್ತಿರಲಿಲ್ಲ. ಈ ಬಗ್ಗೆ ಊರಿನ ಯಾರಿಗಾದ್ರೂ ಹೇಳಬಹುದು ಅಂದ್ರೆ, ಆತನಲ್ಲಿ ಭಾರತೀಯ ಸಿಮ್ ಕೂಡ ಇರಲಿಲ್ಲ. ಕೊನೆಗೆ, ಫೇಸ್ಬುಕ್ ಫ್ರೆಂಡ್ ಆಗಿದ್ದ ಮಂಗಳೂರು ಮೂಲದ ಸೂರಜ್ ಎಂಬವರಿಗೆ ತನಗಾದ ಕಷ್ಟವನ್ನು ಮೆಸೆಂಜರ್ ಮೂಲಕ ತಿಳಿಸಿದ್ದಾರೆ. ಸೂರಜ್, ಈ ಬಗ್ಗೆ ತನ್ನ ಗೆಳೆಯ ಆರ್ ಜೆ ಎರಾಲ್ ಗೆ ತಿಳಿಸಿದ್ದು, ಅವರು ಕೂಡಲೇ ಮುಂಬೈನಲ್ಲಿ ಪತ್ರಕರ್ತರಾಗಿರುವ ಕನ್ನಡಿಗ ರೋನ್ಸ್ ಬಂಟ್ವಾಳ್ ಗಮನಕ್ಕೆ ತಂದಿದ್ದಾರೆ.
ಯುವಕನಿಗಾದ ಕಷ್ಟವನ್ನು ವಿವರಿಸಿದ ಕೂಡಲೇ ಸ್ಪಂದಿಸಿದ ರೋನ್ಸ್ ಬಂಟ್ವಾಳ್, ಹೊಟೇಲ್ ಇದ್ದ ಜಾಗವನ್ನು ಪತ್ತೆ ಮಾಡಿ ಅಲ್ಲಿಗೆ ತೆರಳಿದ್ದಾರೆ. ಆನಂತರ ಯುವಕನಿಗೆ ಊಟ, ತಿಂಡಿ ತೆಗೆಸಿಕೊಟ್ಟು ಉಪಚರಿಸಿದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಅಧಿಕಾರಿಗಳು ಬಿಡಲು ಒಪ್ಪದ ಕಾರಣ ರೋನ್ಸ್ ಬಂಟ್ವಾಳ್, ಅಂಧೇರಿ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿರುವ ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಕ್ಲೈವ್ ಡಾಯಸ್ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಸಮಾಜ ಸೇವಕ ತೋನ್ಸೆ ಸಂಜೀವ ಪೂಜಾರಿ ಗಮನಕ್ಕೆ ತಂದು ಯುವಕನನ್ನು ಪಾರು ಮಾಡಲು ಯತ್ನ ಮಾಡಿದ್ದಾರೆ.
ಕ್ಲೈವ್ ಡಾಯಸ್ ಬಳಿಕ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಯುವಕನನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡಿಸಿದ್ದಾರೆ. ಅಲ್ಲದೆ, ರೋನ್ಸ್ ಬಂಟ್ವಾಳ್, ಸಂಜೀವ ಪೂಜಾರಿ, ಅನಿಲ್ ಅಲ್ಮೇಡಾ ಬ್ರಹ್ಮಾವರ, ಕೆನರಾ ಪಿಂಟೋ ಮಾಲೀಕ ಸುನಿಲ್ ಪಾಯ್ಸ್, ವ್ಯವಸ್ಥಾಪಕ ಮಧುಕರ್ ಸುವರ್ಣ ಇವರೆಲ್ಲ ಸೇರಿ ಯುವಕನಿಗೆ ಒಂದು ದಿನ ಆಶ್ರಯ ಕೊಟ್ಟು ಮಂಗಳೂರಿಗೆ ಬರುವ ಬಸ್ಸಿನಲ್ಲಿ ಕಳಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋನ್ಸ್ ಬಂಟ್ವಾಳ್, ಕ್ವಾರಂಟೈನ್ ಕೇಂದ್ರದಲ್ಲಿಟ್ಟು ಅಮಾಯಕರನ್ನು ಶಿಕ್ಷಿಸುವ ಕೆಲಸವೂ ನಡೆಯುತ್ತಿದೆ. ಮುಂಬೈನಲ್ಲಿ ಈ ರೀತಿಯ ದಂಧೆ ಕಡಿವಾಣ ಇಲ್ಲದಾಗಿದೆ. 14 ದಿನಗಳ ಕ್ವಾರಂಟೈನ್ ಕೇಂದ್ರದಲ್ಲಿಟ್ಟರೆ, ಅದಕ್ಕಾಗಿ ಸರಕಾರದಿಂದ ಕೆಲವು ಸಾವಿರ ರೂಪಾಯಿ ಹಣ ಬರುತ್ತದೆ. ಅದಕ್ಕಾಗಿ ಅಗತ್ಯ ಇಲ್ಲದಿದ್ದರೂ, ಕೆಲವರನ್ನು ಕ್ವಾರಂಟೈನ್ ಕೇಂದ್ರಕ್ಕೆ ತಳ್ಳುತ್ತಾರೆ ಎಂದು ಹೇಳಿದರು.
Mangalore Youth quarantined despite Covid negative and Vaccine certificate in Mumbai.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 02:32 pm
Mangalore Correspondent
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm