ಬ್ರೇಕಿಂಗ್ ನ್ಯೂಸ್
08-08-21 10:05 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 8: ಕಂಬಳದ ಅಪ್ಪಟ ಅಭಿಮಾನಿ, ಕಂಬಳ ಕೋಣಗಳ ಸಾಧಕ ಗುರುಪುರ ನಿವಾಸಿ ಕೆದುಬರಿ ಗುರುವಪ್ಪ ಪೂಜಾರಿ (78) ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕಂಬಳದ ಸಾಧನೆಯೊಂದಿಗೆ ಸ್ವತಃ ಕೃಷಿಕನಾಗಿದ್ದ ಗುರುವಪ್ಪ ಪೂಜಾರಿ ದಿನವೂ ಹಾಲು ಡೈರಿಗೆ ಒಯ್ಯುವ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ತನ್ನ ಸ್ಕೂಟಿಯಲ್ಲಿ ಹಾಲನ್ನು ಒಯ್ಯುತ್ತಿದ್ದಾಗ ಗುರುಪುರದ ಬಳಿಯ ಕುಕ್ಕುದಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಗುರುವಪ್ಪ ಪೂಜಾರಿಯವರು ತೀವ್ರ ಗಾಯಗೊಂಡಿದ್ದು ಬಳಿಕ ಆಸ್ಪತ್ರೆ ತಲುಪುವಷ್ಟರಲ್ಲಿ ನಿಧನರಾಗಿದ್ದಾರೆ.


ನಾಲ್ಕು ದಶಕಗಳಿಂದ ತಮ್ಮ ಕೃಷಿಯೊಂದಿಗೆ ಕೋಣಗಳನ್ನು ಸಾಕುತ್ತಾ ಕಂಬಳಕ್ಕೆ ಒಯ್ಯುತ್ತಿದ್ದ ಕೆದುಬರಿ ಗುರುವಪ್ಪ ಪೂಜಾರಿ ಕಂಬಳ ಕ್ಷೇತ್ರದ ಅನನ್ಯ ಸಾಧಕರು. ಕಂಬಳದ ಮೇಲಿದ್ದ ಪ್ರೇಮದಿಂದ ಕೋಣಗಳನ್ನು ಒಯ್ಯುತ್ತಿದ್ದರೇ ವಿನಾ ಅವರು ಪದಕ ಗೆಲ್ಲುವತ್ತ ಮನಸ್ಸು ನೆಟ್ಟಿರಲಿಲ್ಲ. ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ, ಕನೆಹಲಗೆ ಹೀಗೆ ಕಂಬಳದ ಎಲ್ಲ ಪ್ರಕಾರಗಳಲ್ಲೂ ಕೋಣಗಳನ್ನು ಓಡಿಸಿದ್ದ ಹಿರಿಮೆ ಅವರದ್ದು. ಹಾಗಿದ್ದರೂ ಬಿರುಸಿನ ಸ್ಪರ್ಧೆಯ ನಡುವೆ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಕೆದುಬರಿ ಹೆಸರಿಗೆ ಗುರುವಪ್ಪ ಪೂಜಾರಿಯವರು ತನ್ನದೇ ಛಾಪು ಮೂಡಿಸಿದ್ದರು. ಪೂಜಾರಿಯವರ ನಿಧನ ಕಂಬಳಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Mangalore Kambala Player Guruvappa Poojary dies of Road Accident
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am