ಬ್ರೇಕಿಂಗ್ ನ್ಯೂಸ್
15-05-21 12:36 pm Mangaluru Correspondent ಕರಾವಳಿ
ಉಳ್ಳಾಲ, ಮೇ 15: ಸೋಮೇಶ್ವರ ಕಡಲ ತೀರದಲ್ಲಿ ಕಡಲಿನ ಅಲೆಗಳು ಈ ಬಾರಿ ಮೊದಲ ಮಳೆಗೇ ಯಾರೂ ನೋಡರಿಯದಷ್ಟು ರೌದ್ರನರ್ತನ ನಡೆಸುತ್ತಿದ್ದು ದೇವಸ್ಥಾನ ಬಳಿಯಲ್ಲಿರೋ ಹಿಂದೂ ರುದ್ರಭೂಮಿಯನ್ನೇ ನುಂಗಿಕೊಂಡಿದೆ. ಹೆಸರಿಗೆ ತೌಕ್ತೆ ಚಂಡಮಾರತದ ಎಫೆಕ್ಟ್ ಅಂತ ಹೇಳಿದರೂ ಕಡಲ ತೀರದಲ್ಲಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಯ ಕರ್ಮದ ಫಲದಿಂದಾಗಿ ಈ ರೀತಿ ಒಂದೇ ಕಡೆ ಕಡಲು ಅಬ್ಬರಿಸುತ್ತಾ ಮುನ್ನುಗ್ಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ಸುರಿಯುತ್ತಿದ್ದು ಕಡಲು ಭೋರ್ಗರೆಯುತ್ತಿದೆ. ಇತಿಹಾಸ ಪ್ರಸಿದ್ದ ಸೋಮೇಶ್ವರ ಸೋಮನಾಥನ ದೇವಸ್ಥಾನ ಬಳಿಯ ಸಮುದ್ರ ತೀರ ಈ ಬಾರಿ ಎಂದೂ ಕಂಡರಿಯದಷ್ಟು ಪ್ರಕ್ಷುಬ್ದಗೊಂಡಿದ್ದು ಇದಕ್ಕೆ ಇಲ್ಲಿ ನಿರಂತರವಾಗಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆಯೇ ಪ್ರಮುಖ ಕಾರಣವಾಗಿದೆ.
ಕಳೆದ ಮಳೆಗಾಲದಲ್ಲಿಯೂ ಸೋಮೇಶ್ವರದ ಕಡಲು ಚಂಡಮಾರುತದಿಂದ ಭೋರ್ಗರೆದು ಆಭರ್ಟಿಸಿತ್ತಾದರೂ ಹಿಂದೂ ರುದ್ರಭೂಮಿಯ ವರೆಗೆ ಅಲೆಗಳು ಮುನ್ನುಗಿರಲಿಲ್ಲ. ಈ ಬಾರಿ ಚಂಡಮಾರುತಕ್ಕೆ ನಿನ್ನೆ ಬೆಳಗ್ಗಿನಿಂದಲೇ ಕಡಲು ಪ್ರಕ್ಷುಬ್ದ ಗೊಂಡಿದ್ದು ಒಂದೇ ದಿನದಲ್ಲಿ ಹಿಂದು ರುದ್ರಭೂಮಿಯ ಬೃಹತ್ ಆವರಣಗೋಡೆ ಕಡಲಿನ ಒಡಲು ಸೇರಿತ್ತು. ಇಂದು ಬೆಳಗ್ಗಿನ ಹೊತ್ತಿಗೆ ಕಡಲು ಮತ್ತಷ್ಟು ಮುನ್ನುಗ್ಗಿ ಬಂದಿದ್ದು ಹಿಂದು ರುದ್ರಭೂಮಿಯ ಕಟ್ಟಡವನ್ನೇ ಕೊಚ್ಚಿಕೊಂಡು ಹೋಗಿವೆ.
ಅಕ್ರಮ ಮರಳುಗಾರಿಕೆಯ ಕರ್ಮದ ಫಲ !
ಉಳ್ಳಾಲದಲ್ಲಿ ರೌಡಿಶೀಟರ್ ಆಗಿರುವ ವ್ಯಕ್ತಿ ಕಡಲತೀರದಲ್ಲಿ ಕಳೆದ ಒಂದು ವರುಷದಿಂದ ನಿರಂತರವಾಗಿ ಲೋಡ್ ಗಟ್ಟಲೆ ಮರಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಾ ಬಂದಿದ್ದಾನೆ. ಇದಕ್ಕೆ ಸ್ಥಳೀಯ ಉಳ್ಳಾಲ ಠಾಣೆಯ ಕೆಳ ಪೊಲೀಸರು ಹಿಂಬಾಗಿಲಿನಿಂದ ಸಹಾಯ ನೀಡಿದ್ದರು. ಈ ಹಿಂದೆ ಇದೇ ರೌಡಿಗೆ ಸೇರಿದ ಮರಳಿನ ಲಾರಿಯನ್ನ ಸ್ವತಃ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಜೋಡಿ ಮಧ್ಯರಾತ್ರಿಯಲ್ಲಿ ಮಫ್ತಿಯಲ್ಲಿ ಬಂದು ತಲಪಾಡಿ ಟೋಲ್ ಗೇಟಲ್ಲಿ ಅಡ್ಡ ಹಾಕಿ ಬಂಧಿಸಿತ್ತು. ಅಕ್ರಮ ಮರಳುಗಾರಿಕೆಯ ವಿರುದ್ಧ ಧ್ವನಿ ಎತ್ತ ಬೇಕಿದ್ದ ಸ್ಥಳೀಯರು ಕೂಡ ರೌಡಿಯ ಭಯದಿಂದ ಬಾಯ್ಮುಚ್ಚಿ ಸುಮ್ಮನಿದ್ದುದರ ಫಲವಾಗಿಯೇ ಇಂದು ಪೃಕೃತಿಯೇ ಮುನಿಸಿಕೊಂಡು ದೈತ್ಯಾಕಾರದ ಅಲೆಗಳ ರೂಪದಲ್ಲಿ ವಿನಾಶ ನಡೆಸುತ್ತಿದೆ.
ಸೋಮೇಶ್ವರ ಕಡಲ ತೀರದಲ್ಲಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಕೆಲವು ತೀರದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು ಪೃಕೃತಿ ಮುನಿಸುವ ಬಗ್ಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರಂತೆ. ರುದ್ರಭೂಮಿ ಇದ್ದ ಜಾಗದಲ್ಲೇ ನೇರವಾಗಿ ಕೊರೆದು ಮರಳನ್ನು ಸಾಗಿಸಲಾಗಿತ್ತು. ಆದರೆ ಅದನ್ನು ಯಾವುದನ್ನೂ ಲೆಕ್ಕಿಸದ ಮರಳು ಮಾಫಿಯಾ ತನ್ನ ಜೇಬು ತುಂಬಿಸುವುದಷ್ಟನ್ನೇ ಮುಂದುವರಿಸಿದ ದುಷ್ಪರಿಣಾಮ ಇಂದು ಕಣ್ಣ ಮುಂದೆ ಕಾಣಿಸುವಂತಾಗಿದೆ. ಪಕೃತಿಗೆ ನಾವು ಕೇಡು ಬಯಸಿದರೆ ಪೃಕೃತಿಯೂ ವಿಕೃತಿ ಮೆರೆಯುವುದು ಸಹಜ.
Continous illegal sand mining has caused the Hindu graveyard to disappear at Someshwara in Ullal after hit by Cyclone Tauktae in Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am