ಬ್ರೇಕಿಂಗ್ ನ್ಯೂಸ್
14-05-21 07:01 pm Mangaluru Correspondent ಕರಾವಳಿ
ಮಂಗಳೂರು, ಮೇ 14: ಕೆಎಂಸಿ, ಯೇನಪೋಯ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಸಿಬಂದಿಯನ್ನು ಕೋವಿಡ್ ನಿಯಮ ಉಲ್ಲಂಘಿಸಿ ಬಸ್ಸಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದ ಬಗ್ಗೆ ಹೆಡ್ ಲೈನ್ ಕರ್ನಾಟಕ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು. ಆಸ್ಪತ್ರೆ ಪ್ರತಿನಿಧಿಗಳು ಅಧಿಕಾರಿಗಳಿಗೇ ಆವಾಜ್ ಹಾಕುತ್ತಿದ್ದ ವಿಡಿಯೋ ಮತ್ತು ಸುದ್ದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಇದರಂತೆ ಕೆಎಂಸಿ ಮತ್ತಿತರ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.
ಅಲ್ಲದೆ, ಮಹಾನಗರ ಪಾಲಿಕೆಯ ಮಹಿಳಾ ಅಧಿಕಾರಿಯ ಕೆಲಸಕ್ಕೆ ಜಿಲ್ಲಾಧಿಕಾರಿ ಶಹಭಾಷ್ ಹೇಳಿದ್ದಾರೆ. ಕೋವಿಡ್ ಮಾರ್ಶಲ್ ಗಳಾಗಿದ್ದವರಿಗೂ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಪ್ರಶಂಸೆಯ ಮಾತನ್ನಾಡಿದ್ದಾರೆ. ಕೆಎಂಸಿ ಆಸ್ಪತ್ರೆಯನ್ನು ಎದುರು ಹಾಕ್ಕೊಂಡು ಸಿಬಂದಿಯಿದ್ದ ಬಸ್ಸನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಗದರಿದ್ದಕ್ಕೆ ಮಹಿಳಾ ಅಧಿಕಾರಿಯ ಮೇಲೆ ಅಧಿಕಾರಸ್ಥರು ಎತ್ತಂಗಡಿ ಶಿಕ್ಷೆ ಕೊಡುತ್ತಾರೆಂದು ಗುಸು ಗುಸು ಕೇಳಿಬಂದಿತ್ತು.
ಈ ಬಗ್ಗೆ ಮಹಿಳಾ ಅಧಿಕಾರಿಯೂ ನೋವು ತೋಡಿಕೊಂಡಿದ್ದರು. ಸಹವರ್ತಿಗಳೇ ಸೇರಿಕೊಂಡು, ಇದೆಲ್ಲ ನಿಂಗೆ ಬೇಕಿತ್ತಾ.. ಟ್ರಾನ್ಸ್ ಫರ್ ಖಚಿತ ಎಂದು ಹೇಳಿಕೊಂಡು ಬೆದರಿಸಿದ್ದರಂತೆ. ಆದರೆ, ಹೆಡ್ ಲೈನ್ ಕರ್ನಾಟಕದಲ್ಲಿ ಸುದ್ದಿ ಬಂದಿದ್ದರಿಂದ ಎತ್ತಂಗಡಿ ಶಿಕ್ಷೆ ಕೊಡುವ ಬದಲು ಸ್ವತಃ ಜಿಲ್ಲಾಧಿಕಾರಿಗಳೇ ಒಳ್ಳೆಯ ಕೆಲಸ ಎಂದು ಪ್ರಶಂಸಿಸಿದ್ದಾರೆ.
ಲಾಕ್ಡೌನ್ ಇದ್ದರೂ, ಆಸ್ಪತ್ರೆ ಸಿಬಂದಿಯನ್ನು ಮಾಸ್ಕ್ ಹಾಕದೇ ಬಸ್ಸಿನಲ್ಲಿ ರಶ್ ಆಗಿ ತುಂಬಿಸಿಕೊಂಡು ಒಯ್ಯಲಾಗುತ್ತಿತ್ತು. ಇದನ್ನು ಮನಗಂಡ ಅಲ್ಲಿನ ಪೊಲೀಸರು ಮತ್ತು ಕೋವಿಡ್ ಮಾರ್ಶಲ್ ಗಳು ಬಸ್ಸನ್ನು ನಿಲ್ಲಿಸಿ, ಎಚ್ಚರಿಕೆ ನೀಡಿದ್ದರು. ಮಾಸ್ಕ್ ಹಾಕದೇ, ಲಾಕ್ಡೌನ್ ನಿಮಯಗಳನ್ನು ನೀವೇ ಗಾಳಿಗೆ ತೂರಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಮೂರನೇ ದಿನ ಪಾಲಿಕೆಯ ಆರೋಗ್ಯ ಅಧಿಕಾರಿ ಬಂದು ರೈಟ್ ಲೆಫ್ಟ್ ತೆಗೆದುಕೊಂಡಿದ್ದರು.
ಪಾಲಿಕೆಯ ಆರೋಗ್ಯಾಧಿಕಾರಿ ಆಸ್ಪತ್ರೆ ಸಿಬಂದಿಗೆ ಬಿಸಿ ಮುಟ್ಟಿಸಿದ ಬಳಿಕ ಮರುದಿನದಿಂದಲೇ ಬಸ್ಸಿನಲ್ಲಿ ಒಂದು ಸೀಟಿನಲ್ಲಿ ಒಬ್ಬರನ್ನೇ ಕೂರಿಸಿಕೊಂಡು ಕಳಿಸಲಾಗುತ್ತಿದೆ. ಮಾಸ್ಕ್ , ಅಂತರ ಕಾಪಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಕೋವಿಡ್ ಮಾರ್ಶಲ್ ಗಳು ತಿಳಿಸಿದ್ದಾರೆ.
Video:
Mangalore DC Rajendra Kumar has issued notice to KMC and Yenepoya Hospital for floating covid rules by placing excess staffs in the College Buses. Headline Karnataka team had exposed the incident at Pumpwell where medical college buses were swamped with staffs following no rules. The buses were held by the Health inspector at Pumpwell in Mangalore two days back.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am