ಬ್ರೇಕಿಂಗ್ ನ್ಯೂಸ್
14-05-21 03:53 pm Mangalore Correspondent ಕರಾವಳಿ
Photo credits : newindianexpress
ಮಂಗಳೂರು, ಮೇ 14: ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಫೋನ್ ಮಾಡಿ ಅಳಲು ತೋಡಿಕೊಂಡ ಬಿಜೆಪಿ ಕಾರ್ಯಕರ್ತನಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ನೀವು ಈ ಪ್ರಶ್ನೆಯನ್ನು ಪಕ್ಷದ ರಾಜ್ಯಾಧ್ಯಕ್ಷರಲ್ಲೇ ಕೇಳಬೇಕು ಎಂದು ಪ್ರತ್ಯುತ್ತರ ನೀಡಿರುವ ಪ್ರಸಂಗದ ಆಡಿಯೋ ಕರಾವಳಿಯಲ್ಲಿ ವೈರಲ್ ಆಗಿದೆ.
ತನ್ನನ್ನು ಪುತ್ತೂರಿನ ಪ್ರಶಾಂತ್ ರೈ ಎಂಬ ಪರಿಚಯ ಮಾಡಿಕೊಂಡಿರುವ ಬಿಜೆಪಿ ಕಾರ್ಯಕರ್ತರೊಬ್ಬರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಫೋನ್ ಮಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ, ಕರ್ನಾಟಕದಲ್ಲಿ ಯಾಕೆ ನಿರ್ಲಕ್ಷ್ಯ ಆಗುತ್ತಿದೆ. ವ್ಯಾಕ್ಸಿನ್ ಸಿಗುತ್ತಿಲ್ಲ. ಕೇರಳ, ತಮಿಳುನಾಡು ಸೇರಿ ಬೇರೆಲ್ಲ ರಾಜ್ಯಗಳಿಗೆ ಪ್ಯಾಕೇಜ್ ಕೊಡುತ್ತಿದ್ದಾರೆ, ವ್ಯಾಕ್ಸಿನ್ ಎಲ್ಲ ಸಿಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನೀವು ಈ ಬಗ್ಗೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರನ್ನೇ ಕೇಳಬೇಕು. ಕೇಂದ್ರದಿಂದ ಏನೆಲ್ಲಾ ಕೊಡಲಾಗುತ್ತಿದೆಯೋ ಅವೆಲ್ಲವನ್ನೂ ನಾವು ಕೊಡುತ್ತಿದ್ದೇವೆ. ವ್ಯಾಕ್ಸಿನ್, ಆಕ್ಸಿಜನ್, ಐದು ಕೇಜಿ ಅಕ್ಕಿ ಹೀಗೆ ಎಲ್ಲವನ್ನೂ ಕೊಡುತ್ತಿದ್ದೇವೆ. ಆದರೆ, ಅದನ್ನು ಸಾಮಾನ್ಯ ಜನರಿಗೆ ತಲುಪಿಸಿಲ್ಲ ಅಂದರೆ ನಮ್ಮನ್ನು ಕೇಳಬಾರದು. ನೀವು ಸ್ಥಳೀಯ ಜನಪ್ರತಿನಿಧಿಗಳನ್ನೇ ಕೇಳಬೇಕು.
ಈಗ ನಿಮ್ಮೂರಿನವರೇ ರಾಜ್ಯಾಧ್ಯಕ್ಷರಿದ್ದಾರೆ. ಶಾಸಕರು, ಉಸ್ತುವಾರಿ ಸಚಿವರು ಇದ್ದಾರೆ. ಅವರೆಲ್ಲ ಇರೋದು ಎಂತಕ್ಕೆ, ಕತ್ತೆ ಕಾಯಲಿಕ್ಕಾ... ನೀವು ಅವರನ್ನೇ ಕೇಳಿ, ನಮ್ಮನ್ನು ಕೇಳಿದರೆ ನಾವೇನು ಹೇಳೋದು ಅಂತ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಳಿನ್ ಕುಮಾರ್ ಮತ್ತು ಯಡಿಯೂರಪ್ಪರನ್ನು ನಿದ್ದೆಯಿಂದ ಎಬ್ಬಿಸುವುದು ಹೇಗೆ, ರಾಜ್ಯದಲ್ಲಿ 26 ಬಿಜೆಪಿ ಸಂಸದರಿದ್ದಾರೆ. ಹಿಂದುತ್ವ ಹೇಳಿಕೊಂಡು ಓಟ್ ಕೇಳಿದ್ದೇವೆ. ಮುಂದಿನ ಬಾರಿ ಹೇಗೆ ಓಟ್ ಕೇಳೋದು ಹೇಗೆ ಎಂದು ಕಾರ್ಯಕರ್ತ ಪ್ರಶ್ನೆ ಮಾಡಿದ್ದಾರೆ. ನೀವು ಈ ಎಲ್ಲ ಪ್ರಶ್ನೆಗಳನ್ನು ಆಯಾ ಭಾಗದವರಲ್ಲೇ ಕೇಳಬೇಕು. ಸಂಸದರಿದ್ದಾರೆ. ಶಾಸಕರಿದ್ದಾರೆ. ರಾಜ್ಯಾಧ್ಯಕ್ಷರೂ ಇದ್ದಾರೆ. ಇವರೆಲ್ಲ ಯಾಕಿರೋದು ಎಂದು ಡಿವಿಯವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ರಾಜ್ಯದ ಪರಿಸ್ಥಿತಿ ಬಗ್ಗೆ ಕೇಂದ್ರದಿಂದ ಹಾಗೆಲ್ಲ ಕೈಹಾಕೋಕಾಗಲ್ಲ. ರಾಜಕೀಯ ಮಾತನಾಡಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು ಅವ್ಯವಸ್ಥೆ ಆಗಿದೆ, ಸರಕಾರ ಮತ್ತು ಪಕ್ಷದಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
Video:
A Phone Call Audio clipping has gone viral on social media where Central Minister DV Sadananda Gowda is seen Attacking BJP Naleen Kumar Kateel and MLA's of Mangalore when a BJP member inquire about the covid-19 package.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am