ಬ್ರೇಕಿಂಗ್ ನ್ಯೂಸ್
10-11-26 03:12 pm HK News Staffer ಕರಾವಳಿ
ಉಡುಪಿ, ನ.10: ನಟೋರಿಯಸ್ ಗ್ಯಾಂಗ್ ಸ್ಟರ್ ಹೇಮಂತ ಪೂಜಾರಿ ಮಲೇಶ್ಯಾದಲ್ಲಿ ಬಂಧನ ಆಗಿದ್ದಾನೆಂದು ಹೇಳಲಾಗುತ್ತಿದ್ದರೂ, ಉಡುಪಿ ಜಿಲ್ಲೆಯ ಪೊಲೀಸರು ಖಚಿತಪಡಿಸಿಲ್ಲ. ಎರ್ಮಾಳು ಮೂಲದ ಹೇಮಂತ ಪೂಜಾರಿ ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ರಾ ಅಧಿಕಾರಿಗಳು ಬಂಧಿಸಿದ್ದಾರೆನ್ನುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ.
ಆದರೆ ಕರೆ ಮಾಡಿರುವ ವ್ಯಕ್ತಿ ಹೇಮಂತ ಪೂಜಾರಿಯೇ ಅಥವಾ ಈಗ ಬಂಧನ ಆಗಿರುವ ವ್ಯಕ್ತಿ ಆತನೇ ಎನ್ನುವುದನ್ನು ಪೊಲೀಸರು ಖಚಿತವಾಗಿ ಹೇಳುತ್ತಿಲ್ಲ. ಏಕೆಂದರೆ ಬಂಧಿತ ವ್ಯಕ್ತಿ ಹೇಮಂತ ಪೂಜಾರಿಯೇ ಎನ್ನಲು ಆಧಾರವಿಲ್ಲ. ಹಾಗಾಗಿ ಆತನ ತಮ್ಮ ಕಿಶೋರ್ ಪೂಜಾರಿ ಅಥವಾ ಕುಟುಂಬಸ್ಥರ ಡಿಎನ್ಎ ತೆಗೆದು ಪರೀಕ್ಷೆ ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪರೀಕ್ಷೆಯ ವರದಿ ಬಂದ ನಂತರದಲ್ಲಿ ಪೊಲೀಸರು ಅಧಿಕೃತವಾಗಿ ಆತ ಹೇಮಂತ ಪೂಜಾರಿಯೇ ಎನ್ನುವುದನ್ನು ಖಚಿತಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೇವಿಡ್ ಹತ್ಯೆ ಬಳಿಕ ಬೆದರಿಕೆ ಕರೆ ಬಂದಿದ್ದರ ಬಗ್ಗೆ ಉಡುಪಿ ಎಸ್ ಹರಿರಾಮ ಶಂಕರ್ ಆರೋಪಿ ಹೇಮಂತ ಪೂಜಾರಿ ಎಂದೇ ಹೇಳುತ್ತಿದ್ದರು. ಹೇಮಂತ್ ಪೂಜಾರಿ ಸತ್ತಿದ್ದಾನೆಂದು ಹೇಳಲಾಗಿದ್ದರೂ, ಅದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಬಂಧಿತ ವ್ಯಕ್ತಿ ಹೇಮಂತ ಪೂಜಾರಿಯೋ ಅಥವಾ ನಕಲಿ ವ್ಯಕ್ತಿಯೇ ಎನ್ನುವ ಪ್ರಶ್ನೆಗಳಿಗೆ ಡಿಎನ್ಎ ಪರೀಕ್ಷೆ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ.
ಭೂಗತ ಲೋಕದಲ್ಲಿರುವ ವ್ಯಕ್ತಿಗಳು ಯಾರನ್ನಾದರೂ ಕೊಲೆ, ಬೆದರಿಕೆ ಕರೆ ಮಾಡಿದ್ದಲ್ಲಿ ಮಾಧ್ಯಮ ಸಂಸ್ಥೆ ಅಥವಾ ಪತ್ರಕರ್ತರಿಗೆ ಕರೆ ಮಾಡಿ ನಾನೇ ಮಾಡಿಸಿದ್ದಾಗಿ ಹೇಳುವುದಿದೆ. ಆದರೆ ಡೇವಿಡ್ ಪ್ರಕರಣದಲ್ಲಿ ಆ ರೀತಿಯಾಗಿಲ್ಲ. ಬದಲಿಗೆ ಕೆಲವು ವ್ಯಕ್ತಿಗಳು ವಿದೇಶದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಸ್ಥಳೀಯ ಉದ್ಯಮಿಗಳ ನಂಬರನ್ನು ತಲುಪಿಸುವ ಕೆಲಸ ಮಾಡುತ್ತಿದ್ದ. ಆ ವ್ಯಕ್ತಿ ವಿದೇಶದಲ್ಲಿ ಕುಳಿತು ಹೇಮಂತ ಪೂಜಾರಿಯ ಹೆಸರಿನಲ್ಲಿ ಕರೆ ಮಾಡಿ ಹಫ್ತಾ ವಸೂಲಿಗೆ ಇಳಿದಿದ್ದ ಎಂಬುದು ಪತ್ತೆಯಾಗಿತ್ತು. ಹಣ ಸಂಗ್ರಹಿಸುವ ಕೆಲಸವನ್ನು ಸ್ಥಳೀಯ ಕೆಲವರು ಮಾಡುತ್ತಿದ್ದರು. ಡೇವಿಡ್ ಡಿಸೋಜ ಹತ್ಯೆ ಬಳಿಕ ಸ್ಥಳೀಯ ಸಹಚರರ ಮೂಲಕ ಮೊಬೈಲ್ ನಂಬರ್ ಪಡೆದು ಉದ್ಯಮಿಗಳಿಗೆ ಕರೆ ಮಾಡುತ್ತಿದ್ದ ವ್ಯಕ್ತಿ 'ಮೇ ಎಚ್ಪಿ (ಹೇಮಂತ ಪೂಜಾರಿ) ಬೋಲ್ ರಹಾ ಹೇ' ಎಂದು ಹೇಳಿ ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹೆದರಿದ ಕೆಲವರು ಆತ ಸೂಚಿಸಿದ ವ್ಯಕ್ತಿಗೆ ಹಣವನ್ನೂ ಕೊಟ್ಟಿದ್ದಾರೆ.
ಈ ಹಿಂದೆ ಹೇಮಂತ ಪೂಜಾರಿ ಸತ್ತಿದ್ದಾನೆ ಎಂದೇ ಹೇಳಲಾಗಿತ್ತು. ಆದರೆ ಡೇವಿಡ್ ಹತ್ಯೆ ಬಳಿಕ ಆರೋಪಿ ಕಿಶೋರ್ ಪೂಜಾರಿ, ಹೇಮಂತ್ ಪೂಜಾರಿಯ ಆಣತಿಯಂತೆ ಹತ್ಯೆ ಮಾಡಿದ್ದಾಗಿ ಹೇಳಿದ್ದ. ಪ್ರಕರಣದ ದಿಕ್ಕು ತಪ್ಪಿಸಲು ಮತ್ತು ಹೇಮಂತ ಪೂಜಾರಿಯನ್ನು ಜೀವಂತವಾಗಿರಿಸಲು ಕಥೆ ಕಟ್ಟಿದ್ದಾನೆ ಎಂಬ ಮಾತು ಭೂಗತ ವಲಯದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ರಾ ಅಧಿಕಾರಿಗಳು ಕರೆಯ ಬೆನ್ನತ್ತುವ ಕೆಲಸಕ್ಕಿಳಿದಿದ್ದರು. ಇಂಟರ್ ಪೋಲ್ ಸಹಾಯ ಪಡೆದು ಕರೆ ಮಾಡಿದ ನಂಬರನ್ನು ಬೆನ್ನತ್ತಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಈಗ ಬಂಧನ ಆಗಿರುವ ವ್ಯಕ್ತಿ ಹೇಮಂತ ಪೂಜಾರಿಯೇ ಎಂಬ ಬಗ್ಗೆ ದೃಢೀಕರಣ ಆಗಿಲ್ಲ.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
10-11-26 03:12 pm
HK News Staffer
ನೇಪಾಳದಿಂದ ಬಸ್ರೂರಿಗೆ ಬರಲಿದೆ ಚಿನ್ನದ ಶ್ರೀಚಕ್ರ! 3...
10-11-26 12:36 pm
ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಿಐಡಿ ಎಂಟ...
10-11-26 11:53 am
ಥೈಲ್ಯಾಂಡ್ನಿಂದ ಬಂದು ಚಿನ್ನ ಗೆದ್ದ 6ರ ಪೋರ ; ರಾಷ್...
09-11-26 10:03 pm
ಮಂಗಳೂರಿನಲ್ಲಿ ಅಪರೂಪದ ಹಕ್ಕಿ ಪತ್ತೆ: ಕರಾವಳಿಯ ಪಕ್ಷ...
09-11-26 10:02 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am