ಬ್ರೇಕಿಂಗ್ ನ್ಯೂಸ್
09-11-26 04:45 pm HK News Staffer ದೇಶ - ವಿದೇಶ
ವಾಷಿಂಗ್ಟನ್, ನವೆಂಬರ್ 9: ವಿಶ್ವದ ಪ್ರಮುಖ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾ (NVIDIA) ಕಂಪನಿಯ ಸಿಇಒ ಜೆನ್ಸನ್ ಹುವಾಂಗ್, ಚೀನಾ ಪರ ಗೂಢಚಾರಿಣಿ ಎನ್ನಲಾದ ಮಹಿಳೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂಬ ವರದಿ ಸಂಚಲನ ಮೂಡಿಸಿದೆ. ಈ ನಡುವೆ, ತಮ್ಮ ಪತ್ನಿಗೆ ದ್ರೋಹ ಎಸಗಿರುವುದಾಗಿ ಜೆನ್ಸನ್ ತನ್ನ ಕಂಪನಿಯ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎನ್ವಿಡಿಯಾ ಕಂಪನಿಯ ಭದ್ರತೆ ಮತ್ತು ಗೌಪ್ಯ ಮಾಹಿತಿಯ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದಿದ್ದು, ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ.
ವಿವಾಹೇತರ ಸಂಬಂಧ ಒಪ್ಪಿಕೊಂಡ ಜೆನ್ಸನ್!
ಜೆನ್ಸನ್ ಹುವಾಂಗ್ ಅವರು ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ, ತಾನು ಪತ್ನಿಗೆ ದ್ರೋಹ ಎಸಗಿದ್ದೇನೆ. ತನ್ನ ನಡೆ ಪತ್ನಿ ಮತ್ತು ಮಕ್ಕಳಿಗೆ ನೋವುಂಟು ಮಾಡಿದೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ. ತಮ್ಮ ವೈಯಕ್ತಿಕ ನಡೆ ಕಂಪನಿಯ ಉದ್ಯೋಗಿಗಳು, ನಿರ್ದೇಶಕರ ಮಂಡಳಿ, ಪಾಲುದಾರರು ಮತ್ತು ಷೇರುದಾರರ ವಿಶ್ವಾಸಕ್ಕೂ ಧಕ್ಕೆ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಆದರೆ ಈ ವಿವಾಹೇತರ ಸಂಬಂಧದ ಹಿಂದೆ ಚೀನಾದ ಗುಪ್ತಚರ ಜಾಲವಿದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಅಲೈಸ್ ಹುವಾಂಗ್ ಎಂಬ ಮಹಿಳೆಯನ್ನು ಚೀನಾದ ಗುಪ್ತಚರ ಇಲಾಖೆಗೆ ಸಂಬಂಧಿಸಿದ ವ್ಯಕ್ತಿ ಎಂದು ಶಂಕಿಸಿವೆ ಎಂಬ ವರದಿಗಳಿವೆ. ಆಕೆಯೊಂದಿಗೆ ಜೆನ್ಸನ್ ಹೊಂದಿದ್ದ ಸಂಬಂಧದ ಬಗ್ಗೆ ತನಿಖೆ ನಡೆಯಬೇಕೆಂಬ ಒತ್ತಡ ಹೆಚ್ಚಾಗಿದೆ.
ಎನ್ವಿಡಿಯಾ ಮಂಡಳಿಯಿಂದ ಸ್ವತಂತ್ರ ತನಿಖೆ!
ಈ ಬೆಳವಣಿಗೆಯ ಬೆನ್ನಲ್ಲೇ ನವೆಂಬರ್ 8ರಂದು ಎನ್ವಿಡಿಯಾ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಕಂಪನಿಯ ರಹಸ್ಯ ಮಾಹಿತಿ ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯ ಸೋರಿಕೆ ನಡೆದಿರುವುದಕ್ಕೆ ಸದ್ಯ ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಮಂಡಳಿ ಹೇಳಿದೆ. ಆದರೂ ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದೆ. ಜೆನ್ಸನ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದ್ದರೂ ಅವರು ಸಿಇಒ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ಯಾರು ಈ ಅಲೈಸ್ ಹುವಾಂಗ್?
ವರದಿಗಳ ಪ್ರಕಾರ, ಅಲೈಸ್ ಹುವಾಂಗ್ ಚೀನಾ ಮೂಲದ ಉದ್ಯಮಿಯಾಗಿದ್ದು, ಸಿಂಗಾಪುರದ ಮೆಗಾ ಸ್ಪೀಡ್ ಸಂಸ್ಥೆಯಲ್ಲಿ ಪ್ರಮುಖ ಹುದ್ದೆ ಹೊಂದಿದ್ದರು. ಈ ಸಂಸ್ಥೆ ಎನ್ವಿಡಿಯಾದ ಪ್ರಮುಖ ಗ್ರಾಹಕರಲ್ಲಿ ಒಂದಾಗಿದೆ. ಚೀನಾದಲ್ಲಿ ಪತ್ರಿಕೋದ್ಯಮ, ಬ್ಯಾಂಕಿಂಗ್ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಆಕೆಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅಮೆರಿಕದ ಗುಪ್ತಚರ ವಲಯದ ಶಂಕೆಯ ಪ್ರಕಾರ, ಚೀನಾದ ಗುಪ್ತಚರ ಸಂಸ್ಥೆ ಅಲೈಸ್ ಅವರನ್ನು ಎನ್ವಿಡಿಯಾ ಮುಖ್ಯಸ್ಥರ ಸಂಪರ್ಕಕ್ಕೆ ತಂದು, ಕಂಪನಿಯ ತಂತ್ರಜ್ಞಾನ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿರಬಹುದು. ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಗೂಢಚಾರಿಕೆ ನಡೆಸಿರುವುದು ಸಾಬೀತಾಗಿಲ್ಲ.
ಪ್ರಕರಣದಲ್ಲಿ ಮೆಗಾಸ್ಪೀಡ್ ಸಂಸ್ಥೆಯ ವ್ಯವಹಾರವೂ ತನಿಖೆಯ ಕೇಂದ್ರದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಎನ್ವಿಡಿಯಾ ಚಿಪ್ಗಳನ್ನು ಈ ಸಂಸ್ಥೆ ಖರೀದಿಸಿದೆ ಎಂಬ ವರದಿಗಳಿವೆ. ಅಮೆರಿಕದ ರಫ್ತು ನಿರ್ಬಂಧಗಳನ್ನು ಮೀರಿ ಈ ಸುಧಾರಿತ ಎಐ ಚಿಪ್ಗಳು ಚೀನಾಗೆ ತಲುಪಿರಬಹುದೇ ಎಂಬ ಅನುಮಾನವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮೆಗಾಸ್ಪೀಡ್ ಸಂಸ್ಥೆಯ ಮೂಲಕ ಚೀನಾಗೆ ನಿರ್ಬಂಧಿತ ಚಿಪ್ಗಳನ್ನು ರವಾನಿಸುವ ಪ್ರಯತ್ನ ನಡೆದಿರಬಹುದು ಎಂಬುದು ಅಮೆರಿಕದ ತನಿಖಾ ವಲಯದ ಪ್ರಮುಖ ಅನುಮಾನವಾಗಿದೆ. ಈ ವ್ಯವಹಾರದಲ್ಲಿ ಅಲೈಸ್ ಅವರ ಪಾತ್ರವೇನು ಮತ್ತು ಜೆನ್ಸನ್ ಅವರೊಂದಿಗೆ ಹೊಂದಿದ್ದ ಸಂಬಂಧದಿಂದ ಕಂಪನಿಯ ಗೌಪ್ಯ ಮಾಹಿತಿ ಸೋರಿಕೆಯಾಗಿದೆಯೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ.
ಎನ್ವಿಡಿಯಾ ಜಗತ್ತಿನ ಅತ್ಯಾಧುನಿಕ ಎಐ ಚಿಪ್ಗಳನ್ನು ತಯಾರಿಸುವ ಪ್ರಮುಖ ಸಂಸ್ಥೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಈ ಚಿಪ್ಗಳು ಅತ್ಯಂತ ಮಹತ್ವದ್ದಾಗಿವೆ. ಚೀನಾಗೆ ಅಮೆರಿಕದ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಾಗುವುದನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ಸರ್ಕಾರ ಕೆಲವು ಸುಧಾರಿತ ಚಿಪ್ಗಳ ರಫ್ತಿಗೆ ನಿರ್ಬಂಧ ವಿಧಿಸಿದೆ.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
09-11-26 10:03 pm
HK News Staffer
ಮಂಗಳೂರಿನಲ್ಲಿ ಅಪರೂಪದ ಹಕ್ಕಿ ಪತ್ತೆ: ಕರಾವಳಿಯ ಪಕ್ಷ...
09-11-26 10:02 pm
ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ದೂರು...
09-11-26 06:57 pm
ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ತಲಕಾವೇರಿಯಲ್ಲಿ ಬಾ...
08-11-26 10:43 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:13 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am