ಬ್ರೇಕಿಂಗ್ ನ್ಯೂಸ್
08-11-26 10:13 pm HK News Desk ಕರಾವಳಿ
ಮಂಗಳೂರು, ನ.8 : ಶತಮಾನ ಕಂಡ ಪಾರಂಪರಿಕ ಕಟ್ಟಡವಾಗಿ ಉಳಿಯಬೇಕಿದ್ದ ಬ್ರಿಟಿಷ್ ಕಾಲದ ಹಾಸ್ಟೆಲ್ ಕಟ್ಟಡ ನೆಲಸಮವಾಗಿದೆ. ನಗರದ ಹೃದಯಭಾಗದ ಮಣ್ಣಗುಡ್ಡೆಯಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜಿನ ಆವರಣದಲ್ಲಿ ಸೂಟರ್ ಹಾಸ್ಟೆಲ್ ಕಟ್ಟಡವನ್ನು ನೆಲಸಮ ಮಾಡುವ ಮೂಲಕ ಪಾರಂಪರಿಕ ಕಟ್ಟಡದ ಗುರುತನ್ನು ಅಳಿಸಿ ಹಾಕಲಾಗಿದೆ.
ಪಾರಂಪರಿಕ ತಾಣವಾಗಿ ಉಳಿಸಬೇಕಾಗಿದ್ದ ಐತಿಹಾಸಿಕ ಕಟ್ಟಡವನ್ನು ಕುಸಿದು ಹೋಗುತ್ತೆ ಎಂಬ ಭೀತಿಯಲ್ಲಿ ಒಡೆದು ಹಾಕಲಾಗಿದೆ. ಬ್ರಿಟಿಷರ ಅವಧಿಯ ಈ ಹಾಸ್ಟೆಲ್ 70ರ ದಶಕದಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದರೆ ಆ ಭವ್ಯ ಕಟ್ಟಡವು ಗತಕಾಲದ ವೈಭವಕ್ಕೆ ಮೂಕ ಸಾಕ್ಷಿಯಾಗಿತ್ತು. ಕುಂದಾಪುರದಿಂದ ಕಾಸರಗೋಡು ಅಥವಾ ಬೆಳ್ತಂಗಡಿ ವರೆಗಿನ ದೂರದ ಊರುಗಳಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ನೂರಾರು ಬಿಲ್ಲವ ಯುವಕರಿಗೆ ಆಶ್ರಯ ನೀಡಲು 1926ರಲ್ಲಿ ಅಂದಿನ ಜಿಲ್ಲಾಧಿಕಾರಿ ಸೂಟರ್ ಹೆಸರಲ್ಲಿ ಹಾಸ್ಟೆಲ್ ನಿರ್ಮಾಣವಾಗಿತ್ತು.

ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಸಂಸ್ಥಾಪಕ ಅಧ್ಯಕ್ಷ ಸೌಕಾರ್ ಧೂಮಪ್ಪ ಕಾಂಟ್ರಾಕ್ಟರ್ ಅವರ ವಂಶಸ್ಥರು ಈ ಪಾರಂಪರಿಕ ಕಟ್ಟಡದ ಧ್ವಂಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂಘದ ಆಡಳಿತ ಮಂಡಳಿಯು ಹಳೆಯ ಕಟ್ಟಡವನ್ನು ಪುನಃ ಸ್ಥಾಪಿಸಿ, ಸಂಸ್ಥಾಪಕರು ಮತ್ತು ಸಂಸ್ಥಾಪಕ ಪಿತಾಮಹರ ಹೆಸರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿದ್ದರೆ ಅದೊಂದು ಸೂಕ್ತ ಗೌರವವಾಗುತ್ತಿತ್ತು ಎಂಬ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಧೂಮಪ್ಪ ಕಾಂಟ್ರಾಕ್ಟರ್ ಅವರ ಮೊಮ್ಮಕ್ಕಳಾದ ನರೇಂದ್ರ ಕುಮಾರ್ ಮತ್ತು ವಾಣಿ ಭವಿಶಿ ಅವರು, ನೂರು ವರ್ಷಗಳ ಹಿಂದೆ ಸೂಟರ್ ಹಾಸ್ಟೆಲ್ ಸ್ಥಾಪನೆಯ ಕನಸು ಕಂಡ ಹತ್ತು ಟ್ರಸ್ಟಿಗಳ ಗೌರವಾರ್ಥವಾಗಿ ಯಾವುದಾದರೂ ಸಾರ್ವಜನಿಕ ಬಳಕೆಯ ಸಂಸ್ಥೆಯನ್ನು ಪುನರ್ ನಿರ್ಮಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.
ಸೂಟರ್ ಹಾಸ್ಟೆಲ್ಗಾಗಿ ಅಂದಿನ ಕಲೆಕ್ಟರ್ ಸಿ.ಎಸ್. ಸೂಟರ್ ಅವರು ಜಮೀನು ಮಂಜೂರು ಮಾಡಿದ್ದರು ಮತ್ತು ಅದು ಧೂಮಪ್ಪ ಕಾಂಟ್ರಾಕ್ಟರ್ ಅವರ ಪತ್ನಿ ಕಮಲಾ ಬಾಯಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಅಧಿಕೃತ ದಾಖಲೆಗಳು ಇನ್ನೂ ಅವರ ಹೆಸರಿನಲ್ಲಿಯೇ ಇದ್ದರೂ, ಕುಟುಂಬವು ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಮಂಡಿಸಿಲ್ಲ.
ಸಂಘದ ಬ್ಯಾನರ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತ ಮಂಡಳಿ, ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ಕುಸಿಯಬಹುದಿತ್ತು ಎಂದು ಹೇಳಿ ಧ್ವಂಸವನ್ನು ಸಮರ್ಥಿಸಿಕೊಂಡಿದೆ. 'ಕಟ್ಟಡ ಮತ್ತು ಅದರ ಪಕ್ಕದ ಕಟ್ಟಡವನ್ನು ಕೆಡವಿ ಸಾರ್ವಜನಿಕ ಬಳಕೆಗೆ ಪೂರಕವಾಗಿ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದೇವೆ. ಸಂಘದ ಸಂಸ್ಥಾಪಕ ಪಿತಾಮಹರ ಕೊಡುಗೆಗಳನ್ನು ಸೂಕ್ತವಾಗಿ ಸ್ಮರಿಸಲಾಗುವುದು' ಎಂದು ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ ಹೇಳಿದ್ದಾರೆ.
08-11-26 10:24 pm
HK News Staffer
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
08-11-26 10:43 pm
HK News Staffer
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:13 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:11 pm
ದೀಪಾವಳಿ ಸಂಭ್ರಮದಲ್ಲಿ ಪೌರ ಕಾರ್ಮಿಕರಿಗೆ ಆತಿಥ್ಯ ;...
08-11-26 09:38 pm
ಬಹುನಿರೀಕ್ಷಿತ "ವಾದಿರಾಜ ವಾಲಗ ಮಂಡಳಿ" ಚಿತ್ರದ ಪೋಸ್...
08-11-26 12:50 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am