ಬ್ರೇಕಿಂಗ್ ನ್ಯೂಸ್
09-11-26 11:51 am HK News Staffer ದೇಶ - ವಿದೇಶ
ಟೆಹ್ರಾನ್, ನ.9: ಅಮೆರಿಕದಲ್ಲಿ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಆಡಳಿತಕ್ಕೆ ಹಿನ್ನಡೆ ಆಗಿರುವ ಬೆನ್ನಲ್ಲೇ ಇರಾನ್ ಆಡಳಿತ ಅಬ್ಬರಿಸಿದ್ದು ಯುದ್ಧವನ್ನು ಅಂತ್ಯಗೊಳಿಸಿ ಸಂಧಾನಕ್ಕೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಇರಾನ್ ಮುಂದಿಟ್ಟ ಎರಡು ದಿನಗಳ ಪ್ರಸ್ತಾವನೆ ಒಪ್ಪಿಕೊಂಡು ಎಲ್ಲ ರಂಗಗಳಲ್ಲೂ ಯುದ್ಧ ನಿಲ್ಲಿಸಬೇಕು. ಇಲ್ಲದಿದ್ದರೆ ಇರಾನ್ ಯೋಧರು ಅಮೆರಿಕಕ್ಕೆ ನರಕವನ್ನೇ ತೋರಿಸಲಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಅರಾಘ್ಚಿ ಅವರು ಈ ರಾಜತಾಂತ್ರಿಕ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಫಲಿತಾಂಶಗಳು ಪ್ರಾದೇಶಿಕ ಮಾತುಕತೆಗಳ ವೇಗದ ಮೇಲೆ ಪರಿಣಾಮ ಬೀರಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇರಾನ್ ವಿದೇಶಾಂಗ ಸಚಿವರು, ಮಾತುಕತೆಯ ಮೂಲಕ ಸಂಘರ್ಷ ತಗ್ಗಿಸಬೇಕೇ ಅಥವಾ ಭೀಕರ ಪ್ರಾದೇಶಿಕ ಯುದ್ಧಕ್ಕೆ ಅವಕಾಶ ಮಾಡಿಕೊಡಬೇಕೇ ಎಂಬ ನಿರ್ಧಾರ ಈಗ ವಾಷಿಂಗ್ಟನ್ ಕೈಯಲ್ಲಿದೆ ಎಂದು ಹೇಳಿದ್ದಾರೆ.
'ಅಮೆರಿಕದ ಮತದಾರರು ತಮ್ಮ ಆಯ್ಕೆಯನ್ನು ಮಾಡಿದ್ದಾರೆ. ಈಗ ಶ್ವೇತಭವನ ತನ್ನ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಟ್ರಂಪ್ ಆಡಳಿತಕ್ಕೆ ನೇರ ಎಚ್ಚರಿಕೆ ನೀಡಿರುವ ಅರಾಘ್ಚಿ, 'ನಮ್ಮ ಎರಡು ದಿನಗಳ ಪ್ರಸ್ತಾವನೆ ಮುಕ್ತವಾಗಿದೆ. ಎಲ್ಲ ರಂಗಗಳಲ್ಲೂ ಯುದ್ಧ ಅಂತ್ಯಗೊಳಿಸುವುದು ಸೇರಿದಂತೆ ಅಗತ್ಯ ಷರತ್ತುಗಳನ್ನು ಒಪ್ಪಿಕೊಳ್ಳಿ. ಆಗ ಫಲಿತಾಂಶವನ್ನು ನೋಡುತ್ತೀರಿ. ಇಲ್ಲವೇ ಯುದ್ಧವನ್ನೇ ಆಯ್ಕೆ ಮಾಡಿಕೊಳ್ಳಿ. ಆಗ, ಯುದ್ಧಕ್ಕೆ ಸನ್ನದ್ಧವಾಗಿರುವ ಯೋಧರು ನರಕವನ್ನೇ ಸೃಷ್ಟಿಸುವುದನ್ನು ನೋಡಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಇರಾನ್ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಾಘ್ಚಿ, ಕದನ ವಿರಾಮಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಪ್ರಯತ್ನಗಳು ಸದ್ಯಕ್ಕೆ ಸ್ಥಗಿತಗೊಂಡಿವೆ ಎಂದು ತಿಳಿಸಿದ್ದಾರೆ. ಅಮೆರಿಕದ ರಾಜಕೀಯ ಬೆಳವಣಿಗೆಗಳೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
09-11-26 10:03 pm
HK News Staffer
ಮಂಗಳೂರಿನಲ್ಲಿ ಅಪರೂಪದ ಹಕ್ಕಿ ಪತ್ತೆ: ಕರಾವಳಿಯ ಪಕ್ಷ...
09-11-26 10:02 pm
ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ದೂರು...
09-11-26 06:57 pm
ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ತಲಕಾವೇರಿಯಲ್ಲಿ ಬಾ...
08-11-26 10:43 pm
ಬ್ರಿಟಿಷ್ ಕಾಲದ ಶತಮಾನ ಪೂರೈಸಿದ ಹಾಸ್ಟೆಲ್ ಕಟ್ಟಡ ನೆ...
08-11-26 10:13 pm
07-11-26 11:07 pm
HK News Desk
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am