ಬ್ರೇಕಿಂಗ್ ನ್ಯೂಸ್
15-09-26 12:50 pm HK News Staffer ಕರಾವಳಿ
ಮಂಗಳೂರು, ಸೆ 15: ತುಳುನಾಡಿನ ಹೆಮ್ಮೆಯ ಕರಾವಳಿ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರವೀರ ‘ಕೋಟಿ-ಚೆನ್ನಯ’ರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಒತ್ತಾಯಿಸಿದ್ದಾರೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿರುವ ಅವರು, ಈ ಭಾಗದ ಕೋಟ್ಯಂತರ ಜನರ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಕೋರಿದ್ದಾರೆ.
ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ಕೇವಲ ಐತಿಹಾಸಿಕ ನಾಯಕರಷ್ಟೇ ಅಲ್ಲ, ಈ ಮಣ್ಣಿನ ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸತ್ಯ ಹಾಗೂ ಧರ್ಮದ ಪ್ರಮುಖ ಸಂಕೇತವಾಗಿದ್ದಾರೆ. ತುಳುನಾಡಿನ ಪ್ರತಿಯೊಂದು ಸಮುದಾಯದ ಮನಸ್ಸಿನಲ್ಲಿ ಅಪ್ರತಿಮ ಶೌರ್ಯ ಮತ್ತು ಬಲಿಷ್ಠ ಸಾಂಸ್ಕೃತಿಕ ಅಸ್ಮಿತೆಯಾಗಿ ನೆಲೆಸಿರುವ ಈ ಮಹಾನ್ ಚೇತನಗಳ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಈ ಭಾಗದ ಜನತೆಗೆ ನೀಡುವ ಬಹುದೊಡ್ಡ ಗೌರವವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವ ಕುರಿತಾದ ಸುದೀರ್ಘ ಹೋರಾಟದ ಹಿನ್ನೆಲೆಯನ್ನು ನೆನಪಿಸಿದ ಮಿಥುನ್ ರೈ, ತಾವು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ, ದಿನಾಂಕ 10 ಡಿಸೆಂಬರ್ 2010 ರಂದು ಕೆ.ಪಿ.ಟಿ ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬೃಹತ್ 'ಪಂಜಿನ ಮೆರವಣಿಗೆ'ಯ ನೇತೃತ್ವ ವಹಿಸಿ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂದು ಪ್ರಬಲ ಒತ್ತಾಯ ಮಂಡಿಸಲಾಗಿತ್ತು.
ಈ ಬೇಡಿಕೆಗೆ ಕರಾವಳಿಯ ಸಮಸ್ತ ಜನತೆಯ ಸಂಪೂರ್ಣ ಬೆಂಬಲ ಹಾಗೂ ದಶಕಗಳ ಹೋರಾಟದ ಹಿನ್ನೆಲೆಯಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯುತ್ತಿರುವ ಈ ಮಹತ್ವದ ಸಂದರ್ಭದಲ್ಲೇ, ಮಂಗಳೂರು ವಿಮಾನ ನಿಲ್ದಾಣವನ್ನು ‘ಕೋಟಿ-ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಂಪುಟದಲ್ಲಿ ಅನುಮೋದಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸು ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಲ್ಲಿ ಮಿಥುನ್ ರೈ ಮನವಿ ಮಾಡಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm