ಬ್ರೇಕಿಂಗ್ ನ್ಯೂಸ್
02-09-26 01:16 pm HK News Staffer ಕರಾವಳಿ
ಮಂಗಳೂರು, ಸೆ.1: ನಗರದ ನಂತೂರಿನ ರಾಷ್ಟ್ರೀಯ ಹೆದ್ದಾರಿ ನಡುವಲ್ಲಿ ಇರುವ ಸಂಪಿಗೆ ಮರವನ್ನು ತೆರವು ಮಾಡುವಂತಿಲ್ಲ. ಯಾವುದೇ ಕಾರಣಕ್ಕು ಸಂಪಿಗೆ ಮರವನ್ನು ಬಿಟ್ಟು ಕೊಡಲ್ಲ ಎಂದು ಸ್ಥಳೀಯ ದೈವದ ಕೋಲದಲ್ಲಿ ರಾಹುಗುಳಿಗ ಎಚ್ಚರಿಕೆಯ ನುಡಿಯಾಡಿದ ಪ್ರಸಂಗ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ನಂತೂರು ಪದವಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸಂಪಿಗೆ ಮರವೊಂದಿದ್ದು ಅದನ್ನು ಎದುರಲ್ಲೇ ಇರುವ ರಾಹುಗುಳಿಗ ದೈವದ ಗುಡಿಗೆ ಸೇರಿದ ಮರ ಎನ್ನಲಾಗುತ್ತಿದೆ. ತನ್ನ ನ್ಯಾಯ ಪೀಠ ಇರುವ ಸಂಪಿಗೆ ಮರವನ್ನು ತೆಗೆಯಲು ಬಿಡಲ್ಲ ಎಂದು ದೈವ ಇತ್ತೀಚೆಗೆ ಸಂಕ್ರಾಂತಿ ಕೋಲದ ಸಂದರ್ಭದಲ್ಲಿ ನೆಲಕ್ಕೆ ಕೈಯಿಟ್ಟು ಎಚ್ಚರಿಕೆ ನುಡಿಯಾಡಿದೆ. ಹಲವು ವರ್ಷಗಳ ತೂಗುಯ್ಯಾಲೆ ಬಳಿಕ ನಂತೂರಿನಲ್ಲಿ ಕಡೆಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯುತ್ತಿದ್ದು ಅದಕ್ಕೀಗ ರಾಹು ಗುಳಿಗನ ಸಂಪಿಗೆ ಮರ ಅಡ್ಡಿಯಾಗಿದೆ ಎನ್ನುವ ನೆಪವನ್ನು ಈಗ ಮುಂದಿಡಲಾಗಿದೆ.




ನಂತೂರು ಹೆದ್ದಾರಿ ಬದಿಯಲ್ಲೇ ರಾಹುಗುಳಿಗ ಬಬ್ಬುಸ್ವಾಮಿ ದೈವಸ್ಥಾನವಿದ್ದು ಅದಕ್ಕೆ ಯಾವುದೇ ತೊಂದರೆ ಇಲ್ಲ. ಅದರ ನೇರ ಎದುರಿರುವ ಹೆದ್ದಾರಿ ಮಧ್ಯದ ಸಂಪಿಗೆ ಮರವನ್ನು ತೆಗೆಯಬೇಕೆಂಬ ಪ್ರಸ್ತಾಪ ಹೆದ್ದಾರಿ ಇಲಾಖೆಯಿಂದ ಬಂದಿದೆ ಎನ್ನಲಾಗುತ್ತಿದೆ. ಸಂಪಿಗೆ ಮರದಲ್ಲಿ ರಾಹುಗಳಿಗ ದೈವ ನೆಲೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು ದೈವದ ಕೋಲ ಸಂದರ್ಭದಲ್ಲಿ ಮರಕ್ಕೆ ಹತ್ತಿ ನರ್ತನ ಮಾಡುವ ಕ್ರಮ ಇದೆ. ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣದ ಪ್ರಸ್ತಾಪವಿದ್ದು ಹಾಗೊಂದ್ವೇಳೆ ಆದರೆ ಮರವನ್ನು ಕಡಿಯಬೇಕಾಗುತ್ತದೆ ಎನ್ನುವ ಮಾತು ಕೇಳಿಬಂದಿದೆ. ಅದಕ್ಕೆ ಮುನ್ನವೇ ಸ್ಥಳೀಯ ಭಕ್ತರು ಮರ ಕಡಿಯುವ ಕುರಿತಾಗಿ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದು, ಆಗ ಮರವನ್ನು ಯಾವ ಕಾರಣಕ್ಕೂ ಕಡಿಯಬಾರದು ಎಂದು ದೈವ ಹೇಳಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm