ಬ್ರೇಕಿಂಗ್ ನ್ಯೂಸ್
09-03-26 07:29 pm HK News Staffer ಕರಾವಳಿ
ಮಂಗಳೂರು, ಮಾ.9: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರ ಇನ್ನೂ ಸರಿಯಾಗಿಲ್ಲ. ಮಾರ್ಚ್ 9ರ ಸೋಮವಾರವೂ ಹಲವು ಅಂತರಾಷ್ಟ್ರೀಯ ವಿಮಾನಗಳ ಸೇವೆಯನ್ನು ರದ್ದುಪಡಿಸಿತ್ತು. ಇದರಿಂದ ದುಬೈ, ಜೆದ್ದಾ ಮತ್ತು ದಮಾಮ್ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಕಿ ಸೋಮವಾರ ಬೆಳಗ್ಗೆ 5:20ಕ್ಕೆ ತೆರಳಬೇಕಿದ್ದ ಮಂಗಳೂರು–ಜೆದ್ದಾ (ಐಎಕ್ಸ್ 845) ವಿಮಾನ ಹಾಗೂ ಸಂಜೆ 18:20ಕ್ಕೆ ಜೆದ್ದಾ–ಮಂಗಳೂರು (ಐಎಕ್ಸ್ 846) ವಿಮಾನ ಪ್ರಯಾಣ ರದ್ದುಗೊಂಡಿದೆ. ಅದೇ ರೀತಿ ಮಧ್ಯಾಹ್ನ 13:20ಕ್ಕೆ ತೆರಳಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 831) ಹಾಗೂ ರಾತ್ರಿ 22:10ಕ್ಕೆ ದುಬೈ–ಮಂಗಳೂರು (ಐಎಕ್ಸ್ 832) ವಿಮಾನ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ರಾತ್ರಿ 20:15ಕ್ಕೆ ಹೋಗಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 813) ಮತ್ತು ಮಾ.10ರಂದು ಬೆಳಗ್ಗೆ 4:55ಕ್ಕೆ ದುಬೈ–ಮಂಗಳೂರು (ಐಎಕ್ಸ್ 814) ವಿಮಾನಗಳೂ ರದ್ದಾಗಿವೆ. ಮಾ.9ರಂದು ರಾತ್ರಿ 23:10ಕ್ಕೆ ತೆರಳಬೇಕಿದ್ದ ಮಂಗಳೂರು– ದಮಾಮ್ (ಐಎಕ್ಸ್ 847) ಮತ್ತು ಮಾ.10ರಂದು ಬೆಳಗ್ಗೆ 9:25ಕ್ಕೆ ದಮಾಮ್–ಮಂಗಳೂರು ವಿಮಾನ ಸೇವೆಯೂ ಸ್ಥಗಿತಗೊಂಡಿದೆ. ಇದಲ್ಲದೆ ಮಾ.9ರಂದು ರಾತ್ರಿ 23:20ಕ್ಕೆ ಹೊರಡಬೇಕಿದ್ದ ಮಂಗಳೂರು–ದುಬೈ (ಎಯುಎಚ್) (ಐಎಕ್ಸ್ 815) ಮತ್ತು ಮಾ.10ರಂದು ಬೆಳಗ್ಗೆ 8:15ಕ್ಕೆ ದುಬೈ (ಎಯುಎಚ್)–ಮಂಗಳೂರು (ಐಎಕ್ಸ್ 816) ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.
ಇದರ ಜೊತೆಗೆ ಇಂಡಿಗೊ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿದೆ. ಮಾ.9ರಂದು ಬೆಳಗ್ಗೆ 5:20ಕ್ಕೆ ದುಬೈ–ಮಂಗಳೂರು (6ಇ 1437) ಮತ್ತು ರಾತ್ರಿ 21:15ಕ್ಕೆ ಮಂಗಳೂರು–ದುಬೈ (6ಇ 1438) ವಿಮಾನಗಳು ರದ್ದಾಗಿವೆ. ಜೊತೆಗೆ ಸಂಜೆ 19:35ಕ್ಕೆ ಹೊರಡಬೇಕಿದ್ದ ಬೆಂಗಳೂರು–ಮಂಗಳೂರು (6ಇ 578) ವಿಮಾನವೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಂಗಳೂರು ವಿಮಾನ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ವಿಮಾನಗಳ ಸಂಚಾರ ರದ್ದುಗೊಂಡಿದ್ದರಿಂದ ವಿದೇಶಿ ಪ್ರಯಾಣಕ್ಕೆ ಕಾಯುತ್ತಿದ್ದ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಬರಬೇಕಿದ್ದ ಒಟ್ಟು 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ವಿವಿಧ ದೇಶಗಳಿಂದ ಆಗಮಿಸಬೇಕಿದ್ದ 9 ವಿಮಾನಗಳನ್ನು ರದ್ದುಗೊಳಿಸಿದ್ದರೆ, ಬೆಂಗಳೂರಿನಿಂದ ಹೊರ ದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವ ಸ್ಥಿತಿಯಾಗಿದೆ.
09-03-26 08:07 pm
HK News Staffer
ಕ್ಷುಲ್ಲಕ ಕಾರಣಕ್ಕೆ ಪತಿ- ಪತ್ನಿ ಜಗಳ, ಎರಡು ವರ್ಷದ...
09-03-26 05:44 pm
ಅವಕಾಶ ಕೊಟ್ಟರೆ ಮತ್ತೆರಡು ವರ್ಷ ಬಜೆಟ್ ಮಂಡಿಸುತ್ತೇನ...
09-03-26 04:17 pm
ಬಳ್ಳಾರಿ ವಸತಿ ಶಾಲೆಯಲ್ಲೇ ವಿದ್ಯಾರ್ಥಿಗಳ ಸಂಘರ್ಷ ;...
09-03-26 03:24 pm
ಬೆಳಗಾವಿ ಕುವರ ಕಿರಣ್ ಕಮತೆ ಯುಪಿಎಸ್ಸಿಯಲ್ಲಿ ರಾಜ್ಯಕ...
08-03-26 10:17 pm
09-03-26 01:44 pm
HK News Staffer
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
09-03-26 07:29 pm
HK News Staffer
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
CM Siddaramaiah, Kambala Bantwal: ರಮಾನಾಥ ರೈ ಐ...
07-03-26 11:31 pm
ಮಂಗಳೂರು ರಿಫೈನರಿ ಸ್ಥಗಿತ ವದಂತಿ ತಳ್ಳಿಹಾಕಿದ ಎಂಆರ್...
07-03-26 10:17 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm