ಬ್ರೇಕಿಂಗ್ ನ್ಯೂಸ್
28-01-25 04:40 pm Mangalore Correspondent ಕರಾವಳಿ
ಮಂಗಳೂರು, ಜ.28: ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದಾಗ ಮಹಿಳೆಯ ಜೊತೆಗಿದ್ದ ಮಗುವಿನ ಚಿನ್ನದ ಸರ ಬಿದ್ದು ಹೋಗಿದ್ದು, ಅದನ್ನು ಸಿಐಎಸ್ಎಫ್ ಸಿಬಂದಿ ಸಕಾಲಿಕ ಪ್ರಯತ್ನದಿಂದ ಮತ್ತೆ ವಾಪಸ್ ಮಾಡಿಸಿದ ಘಟನೆ ನಡೆದಿದೆ.
ಜ.26ರಂದು ಬೆಳಗ್ಗೆ 8.30ಕ್ಕೆ ರಚನಾ ಮಾರ್ಲ ಎಂಬ ಮಹಿಳೆ ತನ್ನ ಮಗುವಿನ ಜೊತೆಗೆ ಏರ್ಪೋರ್ಟ್ ನಲ್ಲಿ ಚೆಕ್ಕಿಂಗ್ ಆಗಿ ವಿಮಾನದ ಬಳಿ ತಲುಪುತ್ತಿದ್ದಂತೆ ಮಗುವಿನ ಸರ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಆನಂತರ, ಹೊರಗೆ ಬಂದು ಸರ ಬಿದ್ದು ಹೋಗಿದೆಯೇ ಎಂದು ಪರಿಶೀಲನೆ ಮಾಡುವುದಕ್ಕೆ ಸಮಯ ಇರಲಿಲ್ಲ. ಹೀಗಾಗಿ ಏರ್ಪೋರ್ಟಿನ ಸಿಐಎಸ್ಎಫ್ ಭದ್ರತಾ ಸಿಬಂದಿಗೆ ಸರ ಬಿದ್ದುಹೋಗಿರುವ ಬಗ್ಗೆ ದೂರು ಕೊಟ್ಟು ಬೆಂಗಳೂರಿಗೆ ತೆರಳಿದ್ದರು.
ಆನಂತರ, ಸಿಐಎಸ್ಎಫ್ ಭದ್ರತಾ ಸಿಬಂದಿ ತಪಾಸಣೆ ನಡೆಸಿದಾಗ ಏರ್ಪೋರ್ಟ್ ಮೇಲಂತಸ್ತಿನಲ್ಲಿ ಕಾರಿನಿಂದ ಇಳಿದು ಒಳಗೆ ಬರುವಾಗಲೇ ಮಗುವಿನ ಸರ ಬಿದ್ದು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ಸರವನ್ನು ಇನ್ನೊಬ್ಬ ವಾಹನದ ಚಾಲಕ ಹೆಕ್ಕಿ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದು ದೃಶ್ಯದಲ್ಲಿತ್ತು. ಹೀಗಾಗಿ ಆ ವಾಹನದ ನಂಬರ್ ಮೂಲಕ ಚಾಲಕನ ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ಈ ವೇಳೆ, ಸರ ಬಿದ್ದು ಸಿಕ್ಕಿರುವುದನ್ನು ಒಪ್ಪಿಕೊಂಡ ಚಾಲಕ, ಅದನ್ನು ವಾರೀಸುದಾರರಿಗೆ ನೀಡಲು ರೆಡಿ ಇದ್ದೇನೆ ಎಂದೂ ಹೇಳಿದ್ದ.
ಸಿಐಎಸ್ಎಫ್ ಕಡೆಯಿಂದ ಮರಳಿ ಆ ಮಹಿಳೆಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ತನಗೆ ಸರ ಸಿಕ್ಕಿದರಾಯ್ತು, ಕಂಪ್ಲೇಂಟ್ ಕೊಡುವ ಆಸಕ್ತಿ ಇಲ್ಲ ಎಂದರು. ಅದರಂತೆ, ಸಿಐಎಸ್ಎಫ್ ಅಧಿಕಾರಿಗಳು ಚಾಲಕನನ್ನು ಕರೆಸಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆಸಿ ಚಿನ್ನದ ಸರವನ್ನು ಪಡೆದು ಬಿಟ್ಟು ಕಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ಬಳಿಕ ಏರ್ಪೋರ್ಟಿಗೆ ಬಂದು ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ವತಃ ಮಹಿಳೆ ರಚನಾ ಮಾರ್ಲ ವಿಡಿಯೋ ಮಾಡಿದ್ದು, ಸಿಐಎಸ್ಎಫ್ ಭದ್ರತಾ ಸಿಬಂದಿ ಒಂದೇ ದಿನದಲ್ಲಿ ಸಿಸಿಟಿವಿ ನೋಡಿ ಸರವನ್ನು ಪತ್ತೆ ಮಾಡಿದ್ದಲ್ಲದೆ, ಕುಟುಂಬಸ್ಥರನ್ನು ಕರೆಸಿ ಅವರ ಕೈಗೊಪ್ಪಿಸಿದ್ದಾರೆ. ಆ ಸರದ ಜೊತೆಗೆ ಭಾವನಾತ್ಮಕ ನಂಟಿದೆ. ಇದಕ್ಕಾಗಿ ಪತ್ತೆ ಮಾಡಿ ಸರ ಮರಳಿಸಿದ ಭದ್ರತಾ ಸಿಬಂದಿಗೆ ತುಂಬ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
Mangalore CISF restore lost gold chain lost in the airport. Women who lost the chain also shared video of testimony about the CISF officala being prompt in their service.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 06:29 pm
HK News Staffer
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am