ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾಟ ಯತ್ನ ; ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಇಬ್ಬರ ಬಂಧನ 

14-01-26 02:54 pm       Bangalore Correspondent   ಕರ್ನಾಟಕ

ಆನೆ ದಂತದಿಂದ ಮಾಡಿರುವ ರಾಧೆ ಮತ್ತು ಕೃಷ್ಣರ ವಿಗ್ರಹವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಇನ್ನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.‌

ಬೆಂಗಳೂರು, ಜ.14 : ಆನೆ ದಂತದಿಂದ ಮಾಡಿರುವ ರಾಧೆ ಮತ್ತು ಕೃಷ್ಣರ ವಿಗ್ರಹವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಇನ್ನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.‌

ಬೆಂಗಳೂರಿನ ಬನಶಂಕರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮೊಹಮ್ಮದ್ ಶಬೀರ್ ಅಹಮದ್(50) ಮತ್ತು ಬೆಂಗಳೂರಿನ ಸುಧಾಮ ನಗರ ನಿವಾಸಿ ನರೇಂದ್ರ ಶರ್ಮಾ(45) ಬಂಧಿತರು. ನರೇಂದ್ರ ಶರ್ಮಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಇದರ ಜೊತೆಗೆ ಪಾರ್ಟ್ ಟೈಮಲ್ಲಿ ರಿಯಲ್ ಎಸ್ಟೇಟ್ ಕೆಲಸವನ್ನೂ ಮಾಡಿಕೊಂಡಿದ್ದ.‌ 

120 ವರ್ಷಕ್ಕೂ ಹಳೆಯದಾದ ಆನೆ ದಂತದ ವಿಗ್ರಹಗಳು ಎನ್ನಲಾಗಿದ್ದು ಮಾರುಕಟ್ಟೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ವಿಗ್ರಹವನ್ನು ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ 
ಕೊಪ್ಪ ಗೇಟ್ ಸಮೀಪ ತಂದಿದ್ದರು. ಖಚಿತ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ದಾಳಿ ನಡೆಸಿದ್ದು ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ. ವಿಗ್ರಹ ಸಮೇತವಾಗಿ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. 

ಬಂಧಿತರಿಂದ ರಾಧಾ ಕೃಷ್ಣರ ವಿಗ್ರಹಗಳು, ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮತಿ ಪಡೆಯದೆ ಆನೆದಂತ ವಿಗ್ರಹ ಇಟ್ಟುಕೊಂಡಿದ್ದು ಮತ್ತು ಕಾನೂನು ಬಾಹಿರವಾಗಿ ವಿಗ್ರಹಗಳ ಮಾರಾಟ ಮಾಡಲು ಯತ್ನಿಸಿದ  ಬಗ್ಗೆ ಪ್ರಕರಣ ದಾಖಲಾಗಿದೆ. ಆನೆ ದಂತದ ವಿಗ್ರಹಗಳನ್ನ ಬಳಿಕ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನಕ್ಕೆ ರವಾನಿಸಲಾಗಿದೆ. 

ಪರಿಶೀಲನೆ ಬಳಿಕ ಎಷ್ಟು ವರ್ಷ ಹಳೆಯದಾದ ಆನೆದಂತ ಎಂದು ತಜ್ಞರು ವರದಿ ನೀಡಲಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

Jigani police have arrested a software engineer and a real estate businessman for allegedly attempting to illegally sell idols of Radha and Krishna carved from elephant ivory. The accused, identified as Mohammed Shabir Ahmed (50), a real estate entrepreneur from Banashankari, and Narendra Sharma (45), a software engineer from Sudhamanagar, were caught with the idols near Koppa Gate following a tip-off.