ಬ್ರೇಕಿಂಗ್ ನ್ಯೂಸ್
23-01-25 08:58 pm Mangalore Correspondent ಕರಾವಳಿ
ಬಂಟ್ವಾಳ, ಜ.23: ಸಿಂಗಾರಿ ಬೀಡಿ ಮಾಲೀಕ ಸುಲೇಮಾನ್ ಹಾಜಿಯವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ಕೋಟ್ಯಂತರ ರೂಪಾಯಿ ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ಅಂತಾರಾಜ್ಯ ದರೋಡೆಕೋರನನ್ನು ಬಂಟ್ವಾಳ, ವಿಟ್ಲ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯ ತ್ರಿಕ್ಕಡವೂರ್ ನಿವಾಸಿ ಅನಿಲ್ ಫೆರ್ನಾಂಡಿಸ್ (49) ಬಂಧಿತ. ಈತನಿಂದ 5 ಲಕ್ಷ ನಗದು, ದರೋಡೆಗೆ ಬಳಸಿದ್ದ ಎರ್ಟಿಗಾ ಕಾರು, ಕೃತ್ಯದ ಸಂದರ್ಭದಲ್ಲಿ ಕಾರಿಗೆ ಬಳಸಿದ್ದ ಟಿಎನ್ – 20-ಡಿಬಿ 5517 ಹೆಸರಿನ ನಕಲಿ ನಂಬರ್ ಪ್ಲೇಟನ್ನು ವಶಕ್ಕೆ ಪಡೆಯಲಾಗಿದೆ. ಜನವರಿ 3ರಂದು ರಾತ್ರಿ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಏಳು ಮಂದಿಯಿದ್ದ ದರೋಡೆಕೋರರು ಬಂಟ್ವಾಳ ತಾಲೂಕಿನ ಬೋಳಂತೂರಿನ ನಾರ್ಶದಲ್ಲಿರುವ ಸುಲೇಮಾನ್ ಹಾಜಿ ಮನೆಗೆ ನುಗ್ಗಿದ್ದರು. ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿ ನೀವು ತೆರಿಗೆ ವಂಚಿಸುತ್ತಿದ್ದೀರಿ, ಮನೆಯನ್ನು ಶೋಧ ಮಾಡಲಿಕ್ಕಿದೆ ಎಂದು ಹೇಳಿ ಮನೆಮಂದಿಯ ಮೊಬೈಲ್ ಪಡೆದು ಕುಳ್ಳಿರಿಸಿ ಶೋಧ ನಡೆಸಿದ್ದಾರೆ.
ಮನೆಯಲ್ಲಿದ್ದ ನಗದು ಹಣವನ್ನು ಮೂಟೆ ಕಟ್ಟಿ ಕೊನೆಗೆ ನೀವು ಇತ್ತೀಚೆಗೆ ಕಟ್ಟಡ ಮಾರಿ ತಂದಿಟ್ಟ ಹಣ ಎಲ್ಲಿದೆ ಎಂದು ಸುಲೇಮಾನ್ ಬಳಿ ಕೇಳಿ ಪಡೆದಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ, ನಾಲ್ಕು ಕೋಟಿಗೂ ಹೆಚ್ಚು ನಗದು ಹಣವನ್ನು ಇಡಿ ಅಧಿಕಾರಿಗಳ ಸೋಗಿನ ದರೋಡೆಕೋರರು ಒಯ್ದಿದ್ದರು. ಕೊನೆಯಲ್ಲಿ ನಾವು ಬಿಸಿ ರೋಡಿನಲ್ಲಿ ರೂಮ್ ಮಾಡಿದ್ದೇವೆ, ನಾಳೆ ಅಲ್ಲಿಗೆ ಬನ್ನಿ ಎಂದು ಹೇಳಿ ನಗದು ಹಣದೊಂದಿಗೆ ಪರಾರಿಯಾಗಿದ್ದರು. ಇವರು ಅಲ್ಲಿಂದ ತೆರಳುತ್ತಲೇ ಸುಲೇಮಾನ್ ಕುಟುಂಬಕ್ಕೆ ಇವರು ದರೋಡೆಕೋರರು ಎಂಬ ಸುಳಿವು ಸಿಕ್ಕಿತ್ತು. ಎಂಟು ಗಂಟೆಗೆ ಬಂದವರು ರಾತ್ರಿ 10.40ರ ವೇಳೆಗೆ ಜಾಗ ಖಾಲಿ ಮಾಡಿದ್ದರು.
ಬಂದಿದ್ದ ತಂಡವು ಕೆಲವೇ ಕ್ಷಣಗಳಲ್ಲಿ ಕಣ್ಣಿಗೆ ಕಾಣದಂತೆ ನಡುರಾತ್ರಿಯಲ್ಲಿ ಪರಾರಿಯಾಗಿತ್ತು. ಆನಂತರ ಪೊಲೀಸರಿಗೆ ದೂರು ನೀಡಲಾಗಿ ಎಸ್ಪಿ ಯತೀಶ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಘಟನೆಯಲ್ಲಿ ಸ್ಥಳೀಯರು ಅಥವಾ ಸಂಬಂಧಿಕರದ್ದೇ ಕೈವಾಡ ಇರಬಹುದೆಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅದರಂತೆ, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ತಿಂಗಳು ಕಳೆದರೂ ಪ್ರಕರಣ ಭೇದಿಸಲಾಗಿಲ್ಲ ಎಂಬ ಆರೋಪ ಪೊಲೀಸರ ತಲೆಗಂಟಿತ್ತು. ಇದೀಗ ಕಡೆಗೂ ಕೇರಳದ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಕೃತ್ಯದಲ್ಲಿ ಏಳು ಮಂದಿ ಸೇರಿದಂತೆ ಸ್ಥಳೀಯ ಸೂತ್ರಧಾರರು ಕೂಡ ಇದ್ದು, ಎಲ್ಲರ ಬಂಧನ ಆಗಲಿದೆ. ದೋಚಿಕೊಂಡು ಹೋಗಿದ್ದ ನಗದು ಹಣದ ರಾಶಿಯನ್ನೂ ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆಯುವ ಯತ್ನದಲ್ಲಿದ್ದಾರೆ. ಪ್ರಕರಣ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ 30 ಲಕ್ಷ ನಗದು ಹೋಗಿರಬಹುದೆಂದು ಸುಲೇಮಾನ್ ಹಾಜಿಯ ಪುತ್ರ ದೂರು ನೀಡಿದ್ದರು.
ಪ್ರಕರಣ ಹಿನ್ನೆಲೆಯಲ್ಲಿ ಸಿಂಗಾರಿ ಬೀಡಿ ಮಾಲೀಕ ಮತ್ತು ಉದ್ಯಮಿಯಾಗಿರುವ ಸುಲೇಮಾನ್ ಹಾಜಿಯ ಮನೆಗೆ ಮಾಜಿ ಸಚಿವ ರಮಾನಾಥ ರೈ, ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ, ಹಾಜಿಯವರು ಏನೇ ಆಗಲಿ, ಈ ಕೃತ್ಯ ಎಸಗಿದ್ದು ಯಾರೆಂದು ಪತ್ತೆ ಆಗಬೇಕು. ಹಣ ಹೋಗಿದ್ದು ಚಿಂತೆ ಇಲ್ಲ ಎಂದಿದ್ದರು.
Mangalore Singari Beedi owner house robbery, 49 year old arrested from kollam in Kerala by vitla police. The arrested has been identified as Anil Fernandes. In a Bollywood flick Special 26-style heist, six persons impersonating as Enforcement Directorate (ED) officials had robbed over Rs 30 lakhs from a beedi businessman from Bolanthur near Vittal in Bantwal taluk in Dakshina Kannada
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm