ಬ್ರೇಕಿಂಗ್ ನ್ಯೂಸ್
21-01-25 08:11 pm Mangalore Correspondent ಕರಾವಳಿ
ಮಂಗಳೂರು, ಜ.21: ಮಂಗಳೂರು ವಿವಿಯ ಸಮಾಜ ಕಾರ್ಯ (ಸೋಶಿಯಲ್ ವರ್ಕ್) ವಿಭಾಗದ 2023-24ನೇ ಸಾಲಿನ ಪಿಎಚ್ ಡಿ ಪ್ರವೇಶಾತಿಯಲ್ಲಿ ಅವ್ಯವಹಾರ ಆಗಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ವಿಭಾಗದ ಒಳಗಿನವರೇ ರಾಜ್ಯಪಾಲರಿಗೆ ದೂರು ಅರ್ಜಿ ಬರೆದು ತನಿಖೆಗೆ ಒತ್ತಾಯ ಮಾಡಿದ್ದರು. ಘಟನೆ ಬಗ್ಗೆ ಪ್ರತ್ಯೇಕ ಕಮಿಟಿಯೊಂದು ತನಿಖಾ ವರದಿಯನ್ನು ವಿವಿಯ ಕುಲಪತಿಗೆ ಸಲ್ಲಿಕೆ ಮಾಡಿದ್ದರೂ, ವಿವಿಯ ಆಡಳಿತವು ಕ್ರಮ ಜರುಗಿಸಲು ಮೀನ ಮೇಷ ಎಣಿಸುತ್ತಿದೆ ಎನ್ನುವ ಮಾತು ಕೇಳಿಬಂದಿದೆ.
2023-24ನೇ ಸಾಲಿನ ಪಿಎಚ್ಡಿ ಪ್ರವೇಶಾತಿಯಲ್ಲಿ ಸಮಸ್ಯೆ ಇದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆಗೆ ಸಮಿತಿಯನ್ನು ಮಾಡಿತ್ತು. ವಿವಿಯ ಹಿರಿಯ ಪ್ರಾಧ್ಯಾಪಕರನ್ನು ಒಳಗೊಂಡಿದ್ದ ಈ ಸಮಿತಿ ಜನವರಿ 6ರಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರಿಗೆ ವರದಿ ಸಲ್ಲಿಸಿತ್ತು. ಆದರೆ ಈ ವರದಿ ಸಲ್ಲಿಕೆಯಾಗಿ ವಾರಗಳು ಕಳೆದರೂ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆ ಜ.17ರಂದು ನಡೆದ ಸಿಂಡಿಕೇಟ್ ಸಭೆಯಲ್ಲೂ ಚರ್ಚೆಯಾಗಿದೆ. ಸಿಂಡಿಕೇಟ್ ಸದಸ್ಯರು ಪಿಎಚ್ಡಿ ಅವ್ಯವಹಾರ ಪ್ರಕರಣದ ಕುರಿತು ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದಾರೆ. ಸದಸ್ಯರ ಮಾತಿಗೆ ಸಮಜಾಯಿಷಿ ನೀಡಿರುವ ಕುಲಪತಿಯವರು ತನಿಖೆಗಾಗಿ ಮತ್ತೊಂದು ಉಪ ಸಮಿತಿ ರಚನೆ ಮಾಡಿದ್ದಾಗಿ ತಿಳಿಸಿದ್ದಾರೆ. ಸಮಿತಿಯಲ್ಲಿ ಹಿರಿಯ ಪ್ರಾಧ್ಯಾಪಕರನ್ನು ನೇಮಿಸಿದ್ದು ವರದಿ ಆಧರಿಸಿ ಕ್ರಮ ಜರುಗಿಸುವುದಾಗಿ ಸಿಂಡಿಕೇಟ್ ಸದಸ್ಯರಿಗೆ ಭರವಸೆ ನೀಡಿದ್ದಾಗಿ ತಿಳಿದುಬಂದಿದೆ. ಈ ಮೂಲಕ ಮಂಗಳೂರು ವಿವಿಯ ಆಡಳಿತವು, ಅವ್ಯವಹಾರದ ಬಗ್ಗೆ ರಾಜ್ಯಪಾಲರಿಗೆ ದೂರು ಬರೆದರೂ, ಕಾಲಕ್ಷೇಪ ಮಾಡುತ್ತ ಒಟ್ಟು ಪ್ರಕರಣದ ಬಗ್ಗೆ ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿದೆ.
ಇದಲ್ಲದೆ, ಸಮಸ್ಯೆ ಬಗ್ಗೆ ದೂರು ಬರೆದವರ ವಿರುದ್ಧವೇ ವಿವಿಯ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದ್ದು, ಈ ರೀತಿಯ ನಡೆಗಳು ಸಾಕಷ್ಟು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಪಿಎಚ್ಡಿ ವಿಚಾರದಲ್ಲಿ ಯುಜಿಸಿಯ ಮಾರ್ಗಸೂಚಿ ಪಾಲನೆ ಮಾಡಬೇಕಾಗುತ್ತದೆ. ನಿಯಮ ಪಾಲನೆ ಮಾಡದ ಕಾರಣಕ್ಕೆ ಯುಜಿಸಿ ಕಡೆಯಿಂದ ರಾಜಸ್ಥಾನದ ಮೂರು ವಿವಿಗಳಿಗೆ 5 ವರ್ಷ ಪಿಎಚ್ಡಿ ನೀಡದಂತೆ ನಿರ್ಬಂಧ ವಿಧಿಸಿದೆ. ಮಂಗಳೂರು ವಿವಿಯಲ್ಲಿ ಸೋಶಿಯಲ್ ವರ್ಕ್ ವಿಭಾಗದ ಅಕ್ರಮದ ಬಗ್ಗೆ ವಿವಿರ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.
Irregularity in PhD admission, no action despite submission of investigation report at mangalore University.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm