ಬ್ರೇಕಿಂಗ್ ನ್ಯೂಸ್
21-01-25 12:21 pm Mangaluru Correspondent ಕರಾವಳಿ
ಮಂಗಳೂರು, ಜ.21: ಕೋಟೆಕಾರು ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪೊಲೀಸರನ್ನೇ ಯಾಮಾರಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದೇ ರೋಚಕ ಸಂಗತಿ. ಇಷ್ಟಕ್ಕೂ ಕೃತ್ಯ ಎಸಗಿದವರ ಪತ್ತೆಗೆ ಪೊಲೀಸರಿಗೆ ಸುಳಿವು ಕೊಟ್ಟಿದ್ದೇ ಸಣ್ಣ ಪುಟ್ಟ ಸಾಕ್ಷ್ಯಗಳು. ಇದಕ್ಕಾಗಿ ಮಂಗಳೂರು ಪೊಲೀಸರು ನಾಲ್ಕು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಮಾಹಿತಿ ಕಲೆಹಾಕಿದ್ದಾರೆ.
ಶುಕ್ರವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಕೃತ್ಯ ನಡೆಯುತ್ತಲೇ ಪೊಲೀಸರು ಅಲರ್ಟ್ ಆಗಿದ್ದರು. ಸ್ಥಳದ ಆಸುಪಾಸಿನ ಸಿಸಿಟಿವಿಗಳ ದೃಶ್ಯಗಳನ್ನು ಸಂಗ್ರಹಿಸಿದ್ದರು. ಇಷ್ಟರಲ್ಲಿಯೇ ಆರೋಪಿಗಳಲ್ಲಿ ಒಬ್ಬಾತ ಕಾರಿನಿಂದ ಇಳಿದು ಬೈಕಿನಲ್ಲಿ ಲಿಫ್ಟ್ ಪಡೆದಿರುವುದು ಪತ್ತೆಯಾಗಿತ್ತು. ಆ ವ್ಯಕ್ತಿ ಉತ್ತರ ಭಾರತ ಮೂಲದ ಕಾರ್ಮಿಕನ ಬೈಕಿನಲ್ಲಿ ಲಿಫ್ಟ್ ಪಡೆದಿದ್ದ. ಈ ವೇಳೆ, ಇದರ್ ರೇಲ್ವೇ ಸ್ಟೇಶನ್ ಕಹಾ ಹೈ ಎಂದು ಕೇಳಿದ್ದ. ಮಂಗಳೂರಿಗೆ ಬಸ್ಸಿನಲ್ಲಿ ಹೋದರೆ ರೈಲ್ವೇ ಸ್ಟೇಶನ್ ಸಿಗುತ್ತದೆ ಎಂದೂ ಹೇಳಿದ್ದ. ಪೊಲೀಸರು ಕೂಡಲೇ ಆ ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ರೈಲ್ವೇ ಸ್ಟೇಶನ್ ಬಗ್ಗೆ ಹಿಂದಿಯಲ್ಲಿ ವಿಚಾರಿಸಿದ್ದು ತಿಳಿದುಬಂದಿತ್ತು.
ಆರೋಪಿಯೊಬ್ಬ ಬಸ್ಸಿನಲ್ಲಿ ಹೋಗಿ ರೈಲಿನಲ್ಲಿ ಹೋಗಿರುವ ಸುಳಿವು ಸಿಕ್ಕಿತ್ತು. ಕೂಡಲೇ ಪೊಲೀಸರು ಕಂಕನಾಡಿ ಜಂಕ್ಷನ್ ಮತ್ತು ಸೆಂಟ್ರಲ್ ರೈಲ್ವೇ ಸ್ಟೇಶನಲ್ಲಿ ತಪಾಸಣೆ ನಡೆಸುತ್ತಾರೆ. ಒಬ್ಬಾತ ಆಟೋದಲ್ಲಿ ಬಂದು ಮತ್ಸ್ಯಗಂಧ ರೈಲಿನಲ್ಲಿ ಮಂಗಳೂರಿನಿಂದ ಮುಂಬೈ ತೆರಳಿರುವುದು ತಿಳಿಯುತ್ತದೆ. ಅಷ್ಟರಲ್ಲಿ ಪೊಲೀಸರ ಒಂದು ತಂಡ ನೇರವಾಗಿ ಮುಂಬೈಗೆ ತೆರಳಿದರೆ, ಮತ್ತೊಂದು ತಂಡ ತಮಿಳುನಾಡು, ಕೇರಳಕ್ಕೆ ಹೋಗುತ್ತದೆ. ಆಗಲೇ ಪೊಲೀಸರಿಗೆ ದರೋಡೆ ಕೃತ್ಯಕ್ಕೆ ಮುಂಬೈ ನಂಟು ಇರೋದು ತಿಳಿದುಬಂದಿತ್ತು. ಮಂಗಳೂರು ಪೊಲೀಸರು ಮುಂಬೈ ತಲುಪುವಷ್ಟರಲ್ಲಿ ಆರೋಪಿ ಅಲ್ಲಿಂದ ತಮಿಳುನಾಡು ತೆರಳುವ ರೈಲಿನಲ್ಲಿ ಹೊರಟಿದ್ದ. ಇದು ತಿಳಿಯುತ್ತಲೇ ಪೊಲೀಸರು ತಮಿಳುನಾಡಿಗೆ ತೆರಳಿದ್ದ ತಂಡಕ್ಕೂ ಮಾಹಿತಿ ರವಾನಿಸುತ್ತಾರೆ. ಅಲ್ಲದೆ, ಅರ್ಧದಲ್ಲಿಯೇ ಯೋಶುವಾ ರಾಜೇಂದ್ರನ್ (36) ಎಂಬಾತನನ್ನು ಅರೆಸ್ಟ್ ಮಾಡುತ್ತಾರೆ. ಈತ ತಮಿಳುನಾಡು ಮೂಲದವನಾಗಿದ್ದು, ಮುಂಬೈನ ದೊಂಬಿವಿಲಿಯಲ್ಲಿ ನೆಲೆಸಿದ್ದ. ಅಲ್ಲದೆ, ಇತರ ಆರೋಪಿಗಳು ಕೇರಳದ ಮೂಲಕ ತಮಿಳುನಾಡು ತೆರಳಿದ್ದ ಮಾಹಿತಿ ತಿಳಿಯುತ್ತದೆ.
ಅದಾಗಲೇ ತಮಿಳುನಾಡು ತೆರಳಿದ್ದ ಪೊಲೀಸರು ಮಾಹಿತಿ ಆಧರಿಸಿ ತಿರುನಲ್ವೇಲಿ ಜಿಲ್ಲೆಯಲ್ಲಿ ಆದಿತ್ಯವಾರ ರಾತ್ರಿ ಮತ್ತಿಬ್ಬರನ್ನು ಅರೆಸ್ಟ್ ಮಾಡುತ್ತಾರೆ. ತಿರುನಲ್ವೇಲಿ ಪದ್ಮನೇರಿ ನಿವಾಸಿ ಮುರುಗಂಡಿ ದೇವರ್ (35) ಮತ್ತು ಮುಂಬೈ ಚೆಂಬೂರು ನಿವಾಸಿ ಕಣ್ಣನ್ ಮಣಿ (36) ಬಂಧನ ಆಗುತ್ತಾರೆ. ಸದ್ಯಕ್ಕೆ ಮೂವರು ಅರೆಸ್ಟ್ ಆಗಿದ್ದು, ಇವರೆಲ್ಲ ತಮಿಳುನಾಡಿನವರೇ ಆಗಿದ್ದು ಮುಂಬೈನಲ್ಲಿ ಧಾರಾವಿ ಏರಿಯಾದಲ್ಲಿ ನಟೋರಿಯಸ್ ಗ್ಯಾಂಗಿನಲ್ಲಿ ಸದಸ್ಯರಾಗಿದ್ದರು. ಇನ್ನೂ ಆರು ಮಂದಿ ಆರೋಪಿಗಳ ಬಂಧನ ಆಗಬೇಕಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಇವರನ್ನು ತಮಿಳುನಾಡಿನ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತರಬೇಕಾಗುತ್ತದೆ.
ಇಷ್ಟಕ್ಕೂ ಮುಂಬೈನ ದರೋಡೆ ತಂಡಕ್ಕೆ ಮಂಗಳೂರಿನ ಮೂಲೆಯಲ್ಲಿರುವ ಕೆಸಿ ರೋಡ್ ಶಾಖೆಯಲ್ಲಿ ಹಾಡಹಗಲೇ ದರೋಡೆ ನಡೆಸುವುದಕ್ಕೆ ಸೂಚನೆ ಕೊಟ್ಟವರು ಯಾರು ಮತ್ತು ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಆಸುಪಾಸಿನಲ್ಲಿ ಯಾರೂ ಇರೋದಿಲ್ಲ, ಸಿಸಿಟಿವಿ ಸರಿಯಾಗಿಲ್ಲ ಎಂದು ಮಾಹಿತಿ ಕೊಟ್ಟವರು ಯಾರೆನ್ನುವ ಪ್ರಶ್ನೆಯಿದೆ. ಇದೇ ಕಾರಣಕ್ಕೆ, ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡ ಇಲ್ಲದೆ ಸಾಧ್ಯವಿಲ್ಲ ಎನ್ನುವ ಮಾತನ್ನು ಪೊಲೀಸ್ ಕಮಿಷನರ್ ಉಲ್ಲೇಖಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ ಬಳಿಕವಷ್ಟೇ ಸ್ಥಳೀಯರ ಕೈವಾಡದ ಬಗ್ಗೆ ಮಾಹಿತಿ ತಿಳಿಯಬಹುದು. ಆದರೆ ಹಾಡಹಗಲೇ ಮಂಗಳೂರು ಪೊಲೀಸರನ್ನು ಯಾಮಾರಿಸಿ ದರೋಡೆ ಎಸಗಿದವರನ್ನು ಎರಡೇ ದಿನದಲ್ಲಿ ಹೆಡೆಮುರಿ ಕಟ್ಟಿದ್ದೇ ಖಾಕಿ ಪಡೆಯ ಸಾಹಸ ಅನ್ನಲೇಬೇಕು.
Mangalore Kotekar Bank Robbery, How did police trace the accused? Exclusive photos of the robbers. In a major breakthrough, Mangaluru police have arrested three individuals in connection with the recent robbery at the Kotekar Agricultural Cooperative Society's KC Road branch. The suspects, identified as Murugandi Thevar, Yosuva Rajendran alias Prakash (35), and Kannan Mani (36), were apprehended after a coordinated operation by the police in PadmaNeri village near Tamil Nadu.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm