ಬ್ರೇಕಿಂಗ್ ನ್ಯೂಸ್
12-01-25 11:03 pm Mangalore Correspondent ಕರಾವಳಿ
ಮಂಗಳೂರು, ಜ.12: ಸತ್ಯ ಏನಿದೆಯೋ ಅದನ್ನು ನಮ್ಮ ಇತಿಹಾಸಕಾರರು ಕೊಟ್ಟಿಲ್ಲ. ಸೆಕ್ಯುಲರ್ ದೃಷ್ಟಿಯಿಂದ ಇತಿಹಾಸವನ್ನು ಕಟ್ಟಿದ್ದಾರೆ. ಕಾಶಿ ವಿಶ್ವನಾಥ ಮಂದಿರವನ್ನು ಔರಂಗಜೇಬ, ಹಿಂದುಗಳೇ ಹೇಳಿದರು ಅಂತ ಕೆಡವಿದ್ದಾನೆಂದು ಬರೆದಿದ್ದಾರೆ. ಟಿಪ್ಪು ಒಬ್ಬ ಸುಲ್ತಾನ್ ಹೌದೋ ಅಲ್ಲವೋ ಎಂದು ನಾನು ಹೇಳುವುದಿಲ್ಲ. ಅದನ್ನು ನನ್ನ ಪುಸ್ತಕ ಓದಿ ಓದುಗರೇ ನಿರ್ಧರಿಸಬೇಕು. ಏನೆಲ್ಲ ಟಿಪ್ಪು ಇತಿಹಾಸ ಇದೆಯೋ ಅದನ್ನು ಕಟ್ಟಿಕೊಟ್ಟಿದ್ದೇನೆ ಎಂದು ಟಿಪ್ಪು ಸುಲ್ತಾನ್ ಕುರಿತು ಹೊಸ ಪುಸ್ತಕ ಬರೆದಿರುವ ಖ್ಯಾತ ಲೇಖಕ ವಿಕ್ರಮ್ ಸಂಪತ್ ಹೇಳಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಕ್ರಂ ಸಂಪತ್ ಮತ್ತು ಮಾಜಿ ಪತ್ರಕರ್ತ, ಲೇಖಕ ಪ್ರಕಾಶ್ ಬೆಳವಾಡಿ ಜೊತೆಗೆ ಸಂವಾದ ಗೋಷ್ಟಿ ನಡೆಯಿತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಟ್ಟಾಭಿ ಸೀತಾರಾಮಯ್ಯ ಇತಿಹಾಸ ಬರೆದಿದ್ದರು. ಯಾರು ಮುಲ್ಲಾ ಎಂದೇ ತಿಳಿಯದ, ಯಾವ ಶಾಸನ ಎಂದೂ ನಮೂದಿಸದೆ ಕಾಶಿ ವಿಶ್ವನಾಥ ಮಂದಿರದ ಬಗ್ಗೆ ಸುಳ್ಳುಗಳನ್ನು ಬರೆದಿದ್ದಾರೆ. ಅಲ್ಲಿ ಔರಂಗಜೇಬನನ್ನು ವೈಭವೀಕರಿಸಿದ್ದಾರೆ. ಮುಸ್ಲಿಂ ರಾಜರಿಂದ ಒಡೆಯಲ್ಪಟ್ಟ ಸೋಮನಾಥ ಮಂದಿರದಿಂದ ತೊಡಗಿ ಎಲ್ಲ ದೇವಸ್ಥಾನಗಳ ಬಗ್ಗೆಯೂ ಇತಿಹಾಸಕಾರರು ಸುಳ್ಳುಗಳನ್ನು ಹೇಳುತ್ತ ಹೋಗಿದ್ದಾರೆ. ಅದನ್ನೇ ನಮ್ಮ ಇತಿಹಾಸ ಪಠ್ಯಗಳನ್ನಾಗಿ ಮಾಡಲಾಗಿದೆ ಎಂದರು.
ಭಾರತದ ನೈಜ ಇತಿಹಾಸ ಬರಬೇಕಷ್ಟೇ
ಕೊಲಂಬಸ್ ಬರೋ ಮೊದಲು ಇಂಡಿಯಾನೇ ಇರಲಿಲ್ಲ ಎಂದು ಕ್ಯಾಲಿಫೋರ್ನಿಯಾ ಗ್ಯಾಂಗ್ ನವರು ಹೇಳುತ್ತಾರೆ. ಇಂಡಿಯಾನೇ ಇಲ್ಲಾಂದ್ರೆ ಕೊಲಂಬಸ್ ಯಾವುದನ್ನು ಹುಡುಕಿ ಹೊರಟಿದ್ದ. ಆತನಿಗೆ ಇಂಡಿಯಾ ಇದೆಯೆಂದು ತಿಳಿದಿದ್ದರಿಂದಲೇ ಹುಡುಕಿದ್ದು ಹೌದಲ್ಲವೇ. ಹೀಗಾಗಿ ನಾನು ಹೇಳುವುದು, ಎಡ ಮತ್ತು ಬಲ ಚಿಂತನೆಯ ಇತಿಹಾಸ ಎನ್ನುವುದೇ ಬೋಗಸ್. ಈವರೆಗೂ ಭಾರತದ ನೈಜ ಇತಿಹಾಸ ಬಂದಿಲ್ಲ. ಇನ್ನಷ್ಟೇ ಬರಬೇಕಷ್ಟೇ. ಏನು ಸತ್ಯ ಇದೆಯೋ ಅದೇ ಬರೆಯಬೇಕು ಇತಿಹಾಸಕಾರ ಎಂದು ಹೇಳಿದ ಪ್ರಕಾಶ್ ಬೆಳವಾಡಿ, ಶಾಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ಗಾಗಿ ತಾಜಮಹಲ್ ಕಟ್ಟಿಸಿದ್ದೆಂದು ಬರೆದಿದ್ದಾರೆ. ಮುಮ್ತಾಜನ್ನು ಮದುವೆಯಾದಾಗ 15-16 ವರ್ಷ ಆಗಿರಬಹುದು. ಆಕೆ ಕೇವಲ 36 ವರ್ಷದಲ್ಲಿ ಮೃತಪಡುತ್ತಾಳೆ. ಆದರೆ 17 ಮಕ್ಕಳನ್ನು ಹೆತ್ತಿದ್ದಳಂತೆ. ಹಾಗಾದ್ರೆ ಶಾಜಹಾನದ್ದು ಯಾವ ರೀತಿಯ ರೋಮ್ಯಾನ್ಸ್ ಇದ್ದಿರಬೇಕು. ನಿಜಕ್ಕಾದರೆ ಮುಮ್ತಾಜ್ ಬದುಕಿರುವಾಗಲೇ ಸತ್ತಿರಬೇಕು, ಶಾಜಹಾನ್ ಬಗ್ಗೆ ವೈಭವೀಕರಣ ಮಾತ್ರ ಮಾಡಿದ್ದಾರೆ, ಉಳಿದ ಯಾವುದನ್ನೂ ಬರೆಯಲಿಲ್ಲ ಎಂದು ಹೇಳಿದರು.
2008ರ ವೇಳೆಗೆ ಟಿಪ್ಪು ಬಗ್ಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಅಂಕಣ ಬರೆದಿದ್ದನ್ನು ವಿರೋಧಿಸಿ ಬೆಂಗಳೂರಿನ ಎಂಜಿ ರೋಡ್ ನಲ್ಲಿ ಪ್ರತಿಭಟನೆ ನಡೆದಿತ್ತು. ನನ್ನ ಪ್ರತಿಕೃತಿ ದಹಿಸಿದ್ದರು. ಪ್ರತಿಭಟನೆಗೆ ಬೆದರಿದ ಪತ್ರಿಕೆ ಸಂಪಾದಕರು ನನ್ನಲ್ಲಿ ವಿಷಾದ ಬರೆಯುವಂತೆ ಕೇಳಿಕೊಂಡರು. ನಾನು ದಾಖಲೆ ಸಹಿತ ಬರೆದಿದ್ದೇನೆಂದು ಅದಕ್ಕೆ ಒಪ್ಪಲಿಲ್ಲ. ಬದಲಿಗೆ, ಬರೆದಿದ್ದು ತಪ್ಪೆಂದು ಬೇರೆಯವರು ಮತ್ತೊಂದು ವಾದ ಮಂಡಿಸಲಿ ಎಂದೆ. ಪತ್ರಿಕೆ ಸಂಪಾದಕರು ತನಗೆ ಕೊಟ್ಟುದಕ್ಕಿಂತ ಎರಡರಷ್ಟು ಪುಟ ಕೊಡುತ್ತೇನೆ ಎಂದಿದ್ದರು. ಆದರೆ ಎಡಚರು ಸಂವಾದಕ್ಕೆ ಒಪ್ಪಲಿಲ್ಲ. ದಾಖಲೆ ಮುಂದಿಡುವುದಕ್ಕೂ ಬರಲಿಲ್ಲ. ಆಗ ನನ್ನ ತಂದೆ, ತನಗೊಬ್ಬನೇ ಮಗನಿರುವುದು, ಇನ್ಮುಂದೆ ಟಿಪ್ಪು ಬರೆಯೋಕೆ ಹೋಗಬೇಡ ಎಂದು ಹೇಳಿದ್ದರು ಎಂಬ ಹಳೆ ವಿಚಾರವನ್ನು ಇದೇ ವೇಳೆ ವಿಕ್ರಮ್ ಸಂಪತ್ ನೆನಪಿಸಿಕೊಂಡರು.
ಟಿಪ್ಪುವಿನಿಂದ ಕರಾವಳಿ ಮತ್ತು ಕೊಡಗಿನಲ್ಲಿ ಅಸಂಖ್ಯಾತ ಜನರು ಹಿಂಸೆ ಅನುಭವಿಸಿದ್ದಾರೆ. ಮಂಗಳೂರಿನ ಕ್ರೈಸ್ತರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾನೆ. ಮಂಗಳೂರಿನಿಂದ ಕೊಡಗಿನ ವರೆಗೆ ನಿರ್ದಯವಾಗಿ ಎಳೆದೊಯ್ದಿದ್ದಾನೆ. ಅದೆಷ್ಟೋ ಗರ್ಭಿಣಿಯರಿಗೆ ದಾರಿಯಲ್ಲೇ ಹೆರಿಗೆಯಾಗಿದೆ, ನಡುದಾರಿಯಲ್ಲೇ ನೆಲಕ್ಕೊರಗಿ ಸತ್ತಿದ್ದಾರೆ. ಟಿಪ್ಪು ಭಯದಲ್ಲಿ ಅವರ ಅಂತ್ಯಸಂಸ್ಕಾರವೂ ಆಗಿಲ್ಲ. ನಾಯಿ, ತೋಳಗಳಿಂದ ಹೆಣಗಳು ತಿಂದು ಹೋಗುವಂತಹ ಸ್ಥಿತಿಯಾಗಿತ್ತು. ನೆತ್ತರಕೆರೆಯಲ್ಲಿ ಕ್ರೈಸ್ತರು, ಹಿಂದುಗಳ ರಕ್ತವೇ ಕೋಡಿಯಾಗಿ ಹರಿದಿತ್ತು. ಕೇರಳದಲ್ಲಿ ನಾಯರುಗಳು ಅತಿ ಹೆಚ್ಚು ಪೀಡನೆ ಅನುಭವಿಸಿದ್ದಾರೆ ಎಂದು ತನ್ನ ಪುಸ್ತಕದಲ್ಲಿರುವ ಮಾಹಿತಿಗಳನ್ನು ವಿಕ್ರಮ್ ಸಂಪತ್ ಹಂಚಿಕೊಂಡರು.
ಏಳನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಯನ್ನು ವಿವೇಕಾನಂದ ಯೂತ್ ಮೂಮೆಂಟ್ ರೂವಾರಿ ಮತ್ತು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಹಾಗೂ ಸಾಮರ್ಥ್ಯ ವರ್ಧನಾ ಸಮಿತಿಯ ಸದಸ್ಯ ಡಾ.ಆರ್. ಬಾಲಸುಬ್ರಹ್ಮಣ್ಯ ಅವರಿಗೆ ಪ್ರದಾನ ಮಾಡಲಾಯಿತು. ಇದೇ ವೇಳೆ, ಮೈಸೂರು ಮೂಲದ ಬಾಲಸುಬ್ರಹ್ಮಣ್ಯಂ ಅವರು ಬರೆದ ಪ್ರಧಾನಿ ಮೋದಿ ಕುರಿತ ಪುಸ್ತಕವನ್ನು ಭಾರತ್ ಫೌಂಡೇಶನ್ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಿಡುಗಡೆ ಮಾಡಿದರು. ಇದು ಪ್ರಶಸ್ತಿ ತನಗೆ ಸಿಕ್ಕುದಲ್ಲ. ವಿವೇಕಾನಂದರ ತತ್ವಗಳಿಗೆ ಸಿಕ್ಕಿದ ಗೌರವ ಎಂದು ಬಾಲಸುಬ್ರಹ್ಮಣ್ಯ ಹೇಳಿದರು.
The history of left- right thinking is bogus says Historian Vikram Sampath at Lit Fest in Mangalore 2025
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm