ಬ್ರೇಕಿಂಗ್ ನ್ಯೂಸ್
12-01-25 10:06 pm Mangalore Correspondent ಕರಾವಳಿ
ಪುತ್ತೂರು, ಜ.12: ಪುತ್ತೂರು ಪಿಎಲ್ ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಾಮಪತ್ರ ತಿರಸ್ಕೃತಗೊಳಿಸಿದ್ದಕ್ಕೆ ಸಿಟ್ಟಿಗೆದ್ದ ಶಾಸಕ ಅಶೋಕ್ ರೈ ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿಯನ್ನು ಖಡಕ್ ಭಾಷೆಯಲ್ಲಿ ತರಾಟೆಗೆ ಎತ್ತಿಕೊಂಡಿದ್ದಾರೆ.
ಪಿಎಲ್ ಡಿ ಬ್ಯಾಂಕಿನ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಶೇಖರ ಜೈನ್ ಮತ್ತು ಅಶೋಕ್ ರೈ ದೇರ್ಲ ಎಂಬವರ ನಾಮಪತ್ರವನ್ನು ಚುನಾವಣಾ ಅಧಿಕಾರಿ ಎಆರ್ ಒ ರಘು ತಿರಸ್ಕೃತಗೊಳಿಸಿದ್ದರು. ಸಕಾರಣವಿಲ್ಲದೆ ಮತ್ತು ಉದ್ದೇಶಪೂರ್ವಕವಾಗಿ ನಮ್ಮ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಇಬ್ಬರು ಅಭ್ಯರ್ಥಿಗಳು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಪಿ ಆಳ್ವರ ಗಮನಕ್ಕೆ ತಂದಿದ್ದಾರೆ. ಕೆ.ಪಿ ಆಳ್ವ ಅವರು ಶಾಸಕರಿಗೆ ಹೇಳಿ ಜೊತೆಯಾಗಿಯೇ ಬ್ಯಾಂಕಿಗೆ ತೆರಳಿದ್ದಾರೆ. ಶಾಸಕರು ಚುನಾವಣಾ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡಿದ್ದು ನಾಮಪತ್ರ ಪರಿಶೀಲನೆ ಮಾಡುವ ವೇಳೆ ಅದು ಸರಿಯಾಗಿಯೇ ಇತ್ತು. ಯಾವುದೇ ಕಾರಣವಿಲ್ಲದೆ ದುರುದ್ದೇಶದಿಂದ ಅಧಿಕಾರಿ ತಿರಸ್ಕಾರ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು.
ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಯಾವ ಕೆಟಗರಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾನೆ ಎಂಬ ವಿಚಾರವನ್ನು ನಾಮಪತ್ರದಲ್ಲಿ ನಮೂದಿಸಬೇಕು, ನಮೂದಿಸಿದ ಬಳಿಕ ಉಳಿದ ಕೆಟಗರಿ ಹೆಸರನ್ನು ಅಳಿಸಬೇಕು, ಅಳಿಸದ ಕಾರಣ ನಾಮಪತ್ರ ತಿರಸ್ಕಾರ ಮಾಡಿದ್ದೇನೆ ಎಂದು ಶಾಸಕರಲ್ಲಿ ಚುನಾವಣಾಧಿಕಾರಿ ತಿಳಿಸಿದ್ದಾರೆ. ಆದರೆ ಕಾನೂನು ಪ್ರಕಾರ ಅಭ್ಯರ್ಥಿ ತಾನು ಸ್ಪರ್ಧಿಸುವ ವಿಭಾಗಕ್ಕೆ ರೈಟ್ ಗುರುತು ಹಾಕಬೇಕು ಎಂದು ಇದ್ದು ಉಳಿದ ಕೆಟಗರಿಯನ್ನು ಅಳಿಸಬೇಕೆಂಬ ನಿಯಮವಿರುವುದಿಲ್ಲ. ಆದರೆ ಅಧಿಕಾರಿ ಈ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಎಂದು ಶಾಸಕರು ಹೇಳಿದರು.
ಇದಲ್ಲದೆ, ನಾಮಪತ್ರ ತಿರಸ್ಕಾರ ಮಾಡಲು ಎಷ್ಟು ಲಂಚ ತಗೊಂಡಿದ್ದೀರಿ ಎಂದು ಅಧಿಕಾರಿ ರಘು ಅವರನ್ನು ನೇರವಾಗಿಯೇ ಪ್ರಶ್ನಿಸಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಲಂಚ ತಗೊಂಡು ಮೋಸ ಮಾಡಲು ಬಿಡುವುದಿಲ್ಲ. ಉದ್ದೇಶಪೂರ್ವಕ ಈ ಕೃತ್ಯ ಮಾಡಿದ್ದೀರಿ ಎಂದು ಅಶೋಕ್ ರೈ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡರು.
ನಿಮ್ಮ ಮೇಲೆ ಮೊದಲೇ ನನಗೆ ದೂರು ಬಂದಿತ್ತು, ಸುಧಾರಿಸಬಹುದು ಎಂದು ಸುಮ್ಮನಿದ್ದೆ. ಈಗ ಬಣ್ಣ ಬಯಲಾಯಿತು. ಲಂಚ ತಗೊಂಡು, ಅನ್ಯಾಯ ಮಾಡಿದ ನಿಮ್ಮನ್ನು ಸಸ್ಪೆಂಡ್ ಮಾಡಿಸ್ತೇನೆ. ನಿಮಗೆ ಬೇಕಾದಂತೆ ಕಾನೂನು ಬದಲಾಯಿಸುವ ಅಧಿಕಾರ ನಿಮಗಿಲ್ಲ ಎಂದು ಅಧಿಕಾರಿಗೆ ಶಾಸಕರು ಎಚ್ಚರಿಸಿದರು.
PLD bank election, nomination of congress leader rejected, MLA Ashok Rai slams officer in Puttur.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm