ಬ್ರೇಕಿಂಗ್ ನ್ಯೂಸ್
09-01-25 07:50 pm Mangalore Correspondent ಕರಾವಳಿ
ಮಂಗಳೂರು, ಜ.9: ಕೆಲವೊಮ್ಮೆ ಏನೋ ಮಾಡಲು ಹೋಗಿ, ಇನ್ನೇನೋ ಆಗುತ್ತದೆ ಅಂತಾರಲ್ಲ.. ಮೂಡುಶೆಡ್ಡೆಯ ಗನ್ ಮಿಸ್ ಫೈರ್ ಪ್ರಕರಣವೂ ಏನೋ ಮಾಡಲು ಹೋಗಿ ಗುಟ್ಟಾಗಿರಿಸಿದ್ದ ಒಳಸಂಚನ್ನು ರಟ್ಟು ಮಾಡಿದೆ. ಅಲ್ಲದೆ, ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ರೌಡಿಗಳ ನಿಷೇಧಿತ ಸಂಘಟನೆ ಪಿಎಫ್ಐ ನಂಟನ್ನೂ ಬಯಲು ಮಾಡಿದೆ. ವಿಚಿತ್ರ ಎಂದರೆ, ಆಕಸ್ಮಿಕವಾಗಿ ಪಿಸ್ತೂಲ್ ಸಿಡಿದು ಹೊಟ್ಟೆಗೆ ಗುಂಡೇಟು ಬಿದ್ದರೂ, ತಮ್ಮ ಒಳಸಂಚು ಹೊರಗೆ ಬರುತ್ತದೆ ಎಂದು ಒಟ್ಟು ಘಟನೆಯನ್ನೇ ಮುಚ್ಚಿ ಹಾಕಲು ಯತ್ನಿಸಿದ್ದ ಸಂಗತಿಯೂ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ.
ಜನವರಿ 6ರಂದು ಮಧ್ಯಾಹ್ನ ವೇಳೆಗೆ ಮೂಡುಶೆಡ್ಡೆಯ ಹಳೆ ವಸ್ತುಗಳ ಮಾರಾಟದ ಅಂಗಡಿಯಲ್ಲಿ ಪಿಸ್ತೂಲ್ ಸಿಡಿದ ಘಟನೆ ನಡೆದಿತ್ತು. ಸ್ಥಳೀಯ ಮಸೀದಿಯ ಧರ್ಮಗುರು ಮೊಹಮ್ಮದ್ ಸಫ್ವಾನ್ ಗಾಯಗೊಂಡಿದ್ದರು. ಮಧ್ಯಾಹ್ನ ಘಟನೆ ನಡೆದರೂ, ಅವರನ್ನು ಆಸ್ಪತ್ರೆಗೆ ದಾಖಲಿಸದೆ ಗುಂಡನ್ನು ಹೊರತೆಗೆಯಲು ಬಹಳಷ್ಟು ಪ್ರಯತ್ನ ನಡೆದಿತ್ತು. ಸಂಜೆ 7 ಗಂಟೆಯ ವೇಳೆಗೆ ಆತನನ್ನು ಅಡ್ಯಾರ್ ನಲ್ಲಿ ಹೊಸತಾಗಿ ನಿರ್ಮಾಣಗೊಂಡಿರುವ ಜನಪ್ರಿಯವಲ್ಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ, ಸಫ್ವಾನ್ ತಾನೇ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿದ್ದಾಗ ಆಕಸ್ಮಿಕವಾಗಿ ಸಿಡಿದಿದ್ದು ಎಂದು ಕತೆ ಕಟ್ಟಿದ್ದ. ಅಷ್ಟೇ ಅಲ್ಲಾ, ಪಿಸ್ತೂಲ್ ಲೈಸನ್ಸ್ ಇರುವಂಥದ್ದು. ಭಾಸ್ಕರ್ ಅನ್ನುವಾತನದ್ದು ಎಂದೂ ಹೇಳಿದ್ದ.
ಕೇರಳದ ಕಡೆಯಿಂದ ತರಿಸಿದ್ದ ಪಿಸ್ತೂಲ್
ಆಸ್ಪತ್ರೆಯಿಂದ ಬಂದ ಸುದ್ದಿ ಅನುಸರಿಸಿ ಪೊಲೀಸರು ತನಿಖೆ ಶುರು ಮಾಡಿದ್ದರು. ಘಟನೆ ಎಲ್ಲಿ ನಡೆದಿತ್ತು, ಹೇಗೆ ಮಿಸ್ ಫೈರ್ ಆಗಿದ್ದು, ಗನ್ ಯಾರದ್ದು, ಆ ಜಾಗದ ಮಹಜರು ಆಗಬೇಕು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ತನಿಖೆಗೆ ಇಳಿದಾಗ, ಕೃತ್ಯದ ಒಳಗುಟ್ಟು ಹೊರಬಿದ್ದಿದೆ. ಘಟನೆಯಲ್ಲಿ ಪಾತ್ರಧಾರಿಯೇ ಅಲ್ಲದ ಭಾಸ್ಕರ್ ಎಂಬ ವ್ಯಕ್ತಿಯನ್ನು ಎಳೆತಂದಿದ್ದೂ ಪತ್ತೆಯಾಗಿದೆ. ಘಟನೆ ನಡೆದಿರುವ ಹಳೆ ವಸ್ತುಗಳ ಮಾರಾಟದ ಅಂಗಡಿ ಸ್ಥಳೀಯ ರೌಡಿಶೀಟರ್ ಅದ್ದು ಯಾನೆ ಬದ್ರುದ್ದೀನ್ ಎಂಬಾತನದ್ದು. ಅಷ್ಟೇ ಅಲ್ಲ, ಗುಂಡು ಸಿಡಿದ 9 ಎಂಎಂ ಪಿಸ್ತೂಲ್ ಕೂಡ ಆತನದ್ದೇ ಆಗಿತ್ತು. ಆದರೆ ಅದಕ್ಕೆ ಲೈಸನ್ಸ್ ಇರಲಿಲ್ಲ. ಇನ್ನೊಬ್ಬ ರೌಡಿ ಶೀಟರ್ ಇಮ್ರಾನ್ ಎನ್ನುವಾತ, ಈ ಪಿಸ್ತೂಲನ್ನು ಅದ್ದುಗೆ ಕೊಡಿಸಿದ್ದ. ಪೊಲೀಸರು ಕೊಲೆಯತ್ನ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಕೇಸು ದಾಖಲಿಸಿದ್ದು ಅದ್ದು ಮತ್ತು ಇಮ್ರಾನ್ ಅವರನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪಿಎಫ್ಐ ಸಂಘಟನೆ ಸಂಚಿತ್ತೇ ?
ಅದ್ದು ಮತ್ತು ಇಮ್ರಾನ್ ಈ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಈ ಹಿಂದೆ ಮುಂಚೂಣಿಯಲ್ಲಿದ್ದವರು ಎನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಹಾಗಾಗಿ, ಈ ಗನ್ ತಂದಿಟ್ಟು ಏನೋ ಸಂಚು ಹೆಣೆದಿರಬಹುದು ಎನ್ನುವ ಸಂಶಯ ಉಂಟಾಗಿದೆ. ಕೇರಳದ ಕಡೆಯಿಂದ ತರಿಸಿಕೊಂಡಿದ್ದ ಈ ಪಿಸ್ತೂಲನ್ನು ಬದ್ರುದ್ದೀನ್ ಜನವರಿ 6ರಂದು ಮಧ್ಯಾಹ್ನ ತನ್ನ ಅಂಗಡಿಯಲ್ಲಿ ಕುಳಿತು ಕೈಯಲ್ಲಿ ಹಿಡಿದುಕೊಂಡಿದ್ದಾಗಲೇ ಆಕಸ್ಮಿಕ ಫೈರ್ ಆಗಿದೆ. ಈ ವೇಳೆ, ಸಿಡಿದ ಗುಂಡು ಅಲ್ಲಿದ್ದ ಪ್ರಿಂಟರ್ ಯಂತ್ರಕ್ಕೆ ಬಿದ್ದು ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದ ಸಫ್ವಾನ್ ಹೊಟ್ಟೆಗೆ ಸೇರಿತ್ತು. ಪಿಸ್ತೂಲ್ ಗುಂಡು ನೇರವಾಗಿ ದೇಹದ ಒಳಹೊಕ್ಕಿದ್ದರೆ ಇನ್ನೊಂದು ಕಡೆಯಿಂದ ಹೊರಬರುತ್ತಿತ್ತಲ್ಲದೆ, ಅದರಿಂದ ಪ್ರಾಣಕ್ಕೆ ಸಂಚಕಾರ ಆಗುತ್ತಿತ್ತು. ಸದ್ಯಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಬುಲೆಟ್ ಹೊರತೆಗೆದಿದ್ದು, ಸಫ್ವಾನ್ ಅಪಾಯದಿಂದ ಪಾರಾಗಿದ್ದಾರೆ.
ಮಿಸ್ ಫೈರ್ ಆಗಿದ್ದಾಗಿ ಹೇಳಿ ನಾಟಕ
ಗುಂಡೇಟು ವಿಚಾರ ಹೊರಗೆ ಬಂದರೆ ತಮಗೆ ಆಪತ್ತು ಎಂದು ಅಲ್ಲಿದ್ದವರು ಅಂಗಡಿ ಒಳಗಡೆಯೇ ಹೊಟ್ಟೆಗೆ ಹೊಕ್ಕಿದ್ದ ಗುಂಡನ್ನು ಹೊರ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗದೆ ರಾತ್ರಿ ವೇಳೆಗೆ ಆಸ್ಪತ್ರೆ ಕರೆತಂದಿದ್ದರು ಎನ್ನುವ ಮಾಹಿತಿಯಿದೆ. ಆಸ್ಪತ್ರೆಯಲ್ಲೂ ಪಿಎಫ್ಐ ಸದಸ್ಯನೂ ಆಗಿರುವ ಸಫ್ವಾನ್, ಪಿಸ್ತೂಲನ್ನು ತಾನೇ ಹೊಡೆದಿದ್ದು. ಆಟಿಕೆ ಸಾಮಾನು ಎಂದು ತಿಳಿದು ತಪ್ಪಾಗಿ ಫೈರ್ ಮಾಡಿಕೊಂಡಿದ್ದೆ ಎಂದು ಹೇಳಿ ನಾಟಕ ಮಾಡಿದ್ದಾನೆ. ಎಫ್ಎಸ್ಎಲ್ ತಂಡದವರು ಬಂದು ತನಿಖೆ ಮಾಡಿದಾಗ, ಅದು ಆತನ ಕೈಯಿಂದ ಸಿಡಿದಿರಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಯಾಕಂದ್ರೆ, 9 ಎಂಎಂ ಪಿಸ್ತೂಲ್ ನಿಂದ ಸಿಡಿದ ಗುಂಡು ಇಂತಿಷ್ಟೇ ವೇಗ ಇರುತ್ತದೆ ಮತ್ತು ಅದು ಹತ್ತಿರದಿಂದ ಸಿಡಿದಿದ್ದೇ ಆದಲ್ಲಿ ಹೊಟ್ಟೆ ಸೀಳಿಕೊಂಡು ಇನ್ನೊಂದು ಕಡೆಯಿಂದ ಹೊರ ಬರಬೇಕಿತ್ತು. ಹೀಗಾಗಿ ಪೊಲೀಸರು ಮತ್ತಷ್ಟು ತನಿಖೆ ಮಾಡಿದಾಗ, ಗನ್ ಫೈರ್ ಆಗಿರುವ ನಿಜ ವೃತ್ತಾಂತ ಹೊರಬಿದ್ದಿದೆ.
ಯಾರನ್ನು ಟಾರ್ಗೆಟ್ ಮಾಡಿದ್ದರು?
ಇಷ್ಟಕ್ಕೂ ಈ ಪಿಸ್ತೂಲನ್ನು ರಹಸ್ಯವಾಗಿ ತಂದಿರಿಸಿದ್ದು ಯಾಕೆಂದು ಮಿಲಿಯನ್ ಡಾಲರ್ ಪ್ರಶ್ನೆ. ಮಂಗಳೂರಿನಲ್ಲಿ ಇವರ ಅಸಲಿ ಟಾರ್ಗೆಟ್ ಯಾರಾಗಿದ್ದರು ಎನ್ನುವ ಪ್ರಶ್ನೆಯೂ ಎದುರಾಗಿದೆ. ಪಿಎಫ್ಐ ದೇಶದ್ರೋಹಿ ಕೃತ್ಯಕ್ಕಾಗಿ ನಿಷೇಧಗೊಂಡಿದ್ದ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಗನ್ ತಂದಿಟ್ಟು ಯಾರ ಹೆಣ ಉರುಳಿಸುವ ಪ್ಲಾನ್ ಇತ್ತು ಎನ್ನುವ ಪ್ರಶ್ನೆ ಎದ್ದಿದೆ. ಈ ಹಿಂದೆಯೇ ಹಿಂದು ಸಂಘಟನೆ ನಾಯಕರು ಪಿಎಫ್ಐ ಹಿಟ್ ಲಿಸ್ಟ್ ನಲ್ಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈಗ ಪಿಎಫ್ಐ ನಂಟಿದ್ದವರ ಕೈಯಲ್ಲಿ ಅಕ್ರಮ ಪಿಸ್ತೂಲ್ ಇರುವುದು ಪತ್ತೆಯಾಗಿದ್ದು ಇವರ ಒಳಸಂಚನ್ನು ಬಯಲು ಮಾಡಿದೆ. ಅದಕ್ಕೇ ಹೇಳೋದು, ಮನುಷ್ಯ ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಎಂದು. ರೌಡಿಗಳು ದುಷ್ಟ ಕೂಟ ಕಟ್ಟಿಕೊಂಡು ಏನೋ ಮಾಡಲು ಹೋಗಿ ಎಡವಟ್ಟಾಗಿದ್ದು, ಆಕಸ್ಮಿಕವಾಗಿ ಸಿಡಿದ ಗುಂಡು ತಮ್ಮವರದ್ದೇ ಹೊಟ್ಟೆಯನ್ನು ಸೀಳಿ ಗುಟ್ಟನ್ನು ರಟ್ಟು ಮಾಡಿದೆ.
Vamanjoor misfire incident, use of illegal gun found, two rowdies linked to PFI have been arrested by Mangalore Police.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm