ಬ್ರೇಕಿಂಗ್ ನ್ಯೂಸ್
07-01-25 10:22 pm Mangalore Correspondent ಕರಾವಳಿ
ಮಂಗಳೂರು, ಜ.7: ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ (ಸೋಶಿಯಲ್ ವರ್ಕ್) ವಿಭಾಗದಲ್ಲಿ 2023-24ನೇ ಸಾಲಿನ ಪಿಎಚ್ಡಿ ಪ್ರವೇಶ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದಾಗಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಈಗಾಗಲೇ ಆರ್ಥಿಕ ದುರ್ಗತಿಯಿಂದ ಸುದ್ದಿಯಾಗಿರುವ ಮಂಗಳೂರು ವಿವಿಯಲ್ಲಿ ಪಿಎಚ್ ಡಿ ಪ್ರವೇಶಕ್ಕೂ ಹಣದ ವಹಿವಾಟು ನಡೆಸಿದ್ದಾರೆಯೇ ಎಂಬ ಶಂಕೆ ಮೂಡುವಂತಾಗಿದೆ.
2023-24ರ ಸಮಾಜ ಕಾರ್ಯ ವಿಭಾಗದ ಪಿಎಚ್ಡಿ ಪ್ರವೇಶಕ್ಕಾಗಿ ವಿವಿ ಮಾರ್ಗಸೂಚಿ ಪ್ರಕಾರ ಸಮಿತಿ ರಚಿಸಲಾಗಿತ್ತು. ಆದರೆ ಸೂಕ್ತ ಮಾನದಂಡಗಳನ್ನು ಅನುಸರಿಸದೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವ ಮೂಲಕ ಪಿಎಚ್ಡಿ ಸಮಿತಿ ಅಧ್ಯಕ್ಷ ಪ್ರೊ.ಮೋಹನ್ ಸಿಂಘೆ ಅಧಿಕಾರ ದುರುಪಯೋಗ ಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪಿಎಚ್ ಡಿ ಪ್ರವೇಶ ಆಕಾಂಕ್ಷಿಗಳೇ ಈ ದೂರನ್ನು ವಿವಿಯ ಕುಲಪತಿ, ರಿಜಿಸ್ಟ್ರಾರ್ ಮತ್ತು ರಾಜ್ಯಪಾಲರಿಗೆ ನೀಡಿದ್ದಾರೆ.
ವಿವಿಯಿಂದ ರಚಿಸಲಾಗಿದ್ದ ಸಮಿತಿಯನ್ನು ಬದಿಗಿಟ್ಟು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳ ಬೆಂಬಲದಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಇದಲ್ಲದೆ, ಈ ಆಯ್ಕೆ ಪಟ್ಟಿಗೆ ವಿವಿಯ ಕಲಾ ವಿಭಾಗದ ಕಡ್ಡಾಯ ಅನುಮೋದನೆ ಪಡೆಯಬೇಕೆಂಬ ನಿಯಮವನ್ನೂ ಗಾಳಿಗೆ ತೂರಲಾಗಿದೆ. ವಿವಿಯ ರಿಜಿಸ್ಟ್ರಾರ್, ಡೀನ್ ಫ್ಯಾಕಲ್ಟಿ ಆಫ್ ಆರ್ಟ್ಸ್, ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರ ಅಗತ್ಯ ಸಹಿಗಳಿಲ್ಲದೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಲ್ಲದೆ, ಸಮಿತಿಯ ಅಧ್ಯಕ್ಷರು ಪ್ರವೇಶ ಸಮಿತಿ ಸದಸ್ಯರು ನಿಗದಿಪಡಿಸಿದ ಪ್ರಶ್ನೆ ಪತ್ರಿಕೆಯನ್ನು ಬದಿಗಿಟ್ಟು ಸಂಯೋಜಿತ ಕಾಲೇಜು ಸಹ ಪ್ರಾಧ್ಯಾಪಕರ ಜೊತೆ ಸೇರಿಕೊಂಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಯನ್ನು ವಿತರಿಸಿದ್ದಾರೆ ಎನ್ನಲಾಗಿದೆ.
ವಿವಿಯ ನಿಯಮಗಳೇನು?
ಪಿಎಚ್ಡಿ ಪ್ರವೇಶ ನಿಯಮಾವಳಿ ಪ್ರಕಾರ, ಪ್ರವೇಶ ಸಮಿತಿಯು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಬೇಕು. ಕಲಾ ವಿಭಾಗದ ಡೀನ್ ಅನುಮೋದನೆಯನ್ನೂ ಪಡೆದಿರಬೇಕು ಮತ್ತು ಇದನ್ನು ವಿವಿಯ ರಿಜಿಸ್ಟ್ರಾರ್ ಗಮನಕ್ಕೆ ತಂದಿರಬೇಕು. ಇದಲ್ಲದೆ, ಆಯ್ದ ಅಭ್ಯರ್ಥಿಗಳನ್ನು ಸಂಶೋಧನಾ ಮೇಲ್ವಿಚಾರಕರಿಗೆ ನಿಯೋಜಿಸಲು ಪ್ರವೇಶ ಸಮಿತಿ ತೀರ್ಮಾನವೇ ಅಂತಿಮವಾಗಿರುತ್ತದೆ.
ಪಿಎಚ್ಡಿ ಪ್ರವೇಶ ಪಟ್ಟಿ ರದ್ದತಿಗೆ ಆಗ್ರಹ
ಅಕ್ರಮಗಳ ಕುರಿತಾಗಿ ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರಿಗೂ ದೂರು ನೀಡಿದ್ದು, ಅಲ್ಲಿಂದ ಯಾವುದೇ ಸ್ಪಂದನೆ ಬಾರದಿದ್ದಾಗ, ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಪಿಎಚ್ಡಿ ಆಯ್ಕೆ ಸಮಿತಿಯ ಅಧ್ಯಕ್ಷ ಮೋಹನ್ ಸಿಂಘೆ ಅವರು ಏಕಪಕ್ಷೀಯವಾಗಿ ಸಿದ್ಧಪಡಿಸಿರುವ ಪಿಎಚ್ಡಿ ಪ್ರವೇಶ ಪಟ್ಟಿಯನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ. ಅಭ್ಯರ್ಥಿಗಳಿಂದ ಶುಲ್ಕ ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸಿ, ಅವರನ್ನು ವಿವಿಯ ಪಿಎಚ್ಡಿ ವಿದ್ಯಾರ್ಥಿಗಳೆಂದು ಎಂದು ಘೋಷಿಸಿದ್ದಲ್ಲದೆ, ಸಂಶೋಧನಾ ಕೊಠಡಿಯಲ್ಲಿ ಸ್ಥಳಾವಕಾಶ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮಗಳ ಕುರಿತು ಆರು ತಿಂಗಳ ಹಿಂದೆಯೇ ಮಂಗಳೂರು ವಿವಿಯ ಆಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ರಮಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳದೆ ಮಂಗಳೂರು ವಿವಿಯ ಉನ್ನತ ಹುದ್ದೆಯಲ್ಲಿರುವವರು ಮೌನಕ್ಕೆ ಶರಣಾಗಿದ್ದಾರೆ, ಆಮೂಲಕ ಅರ್ಹತೆ ಇದ್ದವರಿಗೆ ಪಿಎಚ್ಡಿ ಪ್ರವೇಶಾತಿಯಲ್ಲಿ ಅವಕಾಶ ತಪ್ಪಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾಹಿತಿ ಪ್ರಕಾರ, 14 ಮಂದಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 6 ಮಂದಿಗೆ ಅವಕಾಶ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆ ವೇಳೆ ಅಕ್ರಮ ಆಗಿದೆ ಎನ್ನುವುದು ಆರೋಪವಾಗಿದೆ.
ವಿಶೇಷ ಅಂದ್ರೆ, ಮಂಗಳೂರಿನ ಸಂಯೋಜಿತ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರು ಪಿಎಚ್ಡಿ ವಿದ್ಯಾರ್ಥಿಗಳಿಗೆ ಬೇಕಾದ ಕೋರ್ಸ್ ವರ್ಕ್ ಪೇಪರ್ ಗಳನ್ನು ಸಿದ್ಧಪಡಿಸಿದ್ದಾರೆ. ಡಾಕ್ಟರೇಟ್ ಸಮಿತಿ ಸದಸ್ಯರ ಅನುಮೋದನೆಯಿಲ್ಲದೆ ವಿಭಾಗದ ಅಧ್ಯಕ್ಷರು ಇದನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎನ್ನುವ ವಿಚಾರವನ್ನೂ ದೂರಿನಲ್ಲಿ ತಿಳಿಸಿದ್ದಾರೆ. ಇದರ ಜತೆಗೆ ಕೋರ್ಸ್ ವರ್ಕ್ ಪ್ರಶ್ನೆ ಪತ್ರಿಕೆ ಪರೀಕ್ಷಾಂಗ ಕುಲಸಚಿವರ ಮೂಲಕ ಮುದ್ರಣ ಹೋಗಬೇಕಿತ್ತು. ಅದರ ಬದಲು ಸಮಿತಿಯ ಅಧ್ಯಕ್ಷರು ತಾನೇ ಮುದ್ರಿಸಿಕೊಂಡು ಅದನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದಾರೆ ಎನ್ನುವುದನ್ನೂ ಉಲ್ಲೇಖಿಸಲಾಗಿದೆ. ವಿವಿಯ ಮೂಲಗಳ ಪ್ರಕಾರ, ಕುಲಪತಿ ಪ್ರೊ. ಧರ್ಮ ಅವರು ಅಕ್ರಮದ ಬಗ್ಗೆ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದಾರೆ. ಸಮಿತಿ ಸದಸ್ಯರು ಈಗಾಗಲೇ ವರದಿ ಸಿದ್ಧಪಡಿಸಿ ಕುಲಪತಿಗೆ ನೀಡಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Irregularities in PhD admissions in Mangalore University, Complaint filed to the Governor.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm