ಬ್ರೇಕಿಂಗ್ ನ್ಯೂಸ್
27-12-24 11:02 pm Mangalore Correspondent ಕರಾವಳಿ
ಉಳ್ಳಾಲ, ಡಿ.27: ದೈವದ ನೇಮ ಆಗುತ್ತಿದ್ದಾಗ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿ ತುಂಬಿದ್ದನ್ನು ಕಂಡು ವೈದ್ಯನಾಥ ದೈವ ಕೋಪಗೊಂಡು ಕಸದ ರಾಶಿಯನ್ನು ತೆಗೆದು ಶುಚಿಗೊಳಿಸದಿದ್ದಲ್ಲಿ ಕೇಡು ಆಗಬಹುದೆಂದು ಕಿಡಿನುಡಿಯಾಡಿದ ಘಟನೆ ಮಂಗಳೂರಿನ ಹೊರವಲಯದ ಕೊಲ್ಯ ಕನೀರುತೋಟ ಎಂಬಲ್ಲಿ ನಡೆದಿದೆ.
ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆ ಜಾತ್ರೆ ಬುಧವಾರ ನಡೆದಿತ್ತು. ರಾತ್ರಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿ ಸದಸ್ಯರ ಬಗ್ಗೆಯೇ ಕೆಂಡಾಮಂಡಲವಾಗಿದೆ.



ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿ ಬಿದ್ದುದನ್ನು ಕಂಡು "ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ. ಹೇಗೆ ಆಗಬೇಕೋ ಹಾಗೆಯೇ ಆಗಬೇಕು. ಹೇಗೋ ಆದರೆ ಆಯ್ತು ಎನ್ನುವುದು ಉಚಿತವಲ್ಲ. ನಾನು ಮಾಯದಲ್ಲಿ ಹೇಗೂ ವಲಸರಿ ಹೋಗುತ್ತೇನೆ. ಎಂಜಲು ತುಳಿದು ಹೋದರೆ ಅದರಿಂದ ಕೇಡುಂಟಾದರೆ ನಿಮಗೆ. ಅದಕ್ಕಾಗಿ ಎಚ್ಚರಿಸುತ್ತೇನೆ ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ವಲಸರಿ ಹೋಗುವ ಗದ್ದೆಯಲ್ಲಿ ಐಸ್ ಕ್ರೀಂ ಪ್ಯಾಕೆಟ್ ಇನ್ನಿತರ ಕಸ ಕಡ್ಡಿಗಳು ತುಂಬಿದ್ದು ಅದರ ಮೇಲೆಯೇ ಹೋಗಬೇಕಾದ ಪ್ರಸಂಗ ಬಂದಾಗ ಎಚ್ಚರದ ನುಡಿಯಾಡಿದೆ.
Mangalore Daiva slams at Adminstration members for throwing waste during program at Kolya.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am