ಬ್ರೇಕಿಂಗ್ ನ್ಯೂಸ್
18-12-24 05:09 pm Mangalore Correspondent ಕರಾವಳಿ
ಮಂಗಳೂರು, ಡಿ.18: ಬ್ಯಾಂಕ್ ಸಾಲದ ಕಿರುಕುಳಕ್ಕೆ ವಿಡಿಯೋ ಮಾಡಿ ಅಂಗವಿಕಲ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊನನ್ನು ಕಡೆಗೂ ಬಂಧಿಸಿದ್ದಾರೆ.
ಉಳಾಯಿಬೆಟ್ಟು ಕುಟಿನ್ಹೋ ಪದವು ನಿವಾಸಿ ಮನೋಹರ್ ಪಿರೇರಾ(47) ತನ್ನ ಸಾವಿಗೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ಕಾರಣವೆಂದು ವಿಡಿಯೋ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತನ್ನ 9 ಲಕ್ಷ ಹಣವನ್ನು ತಿಂದಿದ್ದಾನೆ. ಎರಡು ವರ್ಷಗಳಿಂದ ಕೆಲಸ ಮಾಡಲಾಗದೆ ಕಷ್ಟ ಪಡುತ್ತಿದ್ದೇನೆ, ಮನೆಯನ್ನು ಸೀಜ್ ಮಾಡಿದ್ದಾನೆ, ಇನ್ನೂ ಹಣ ಆಗಬೇಕೆಂದು ಹೇಳುತ್ತಿದ್ದಾನೆ. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದು ಬಂದಿದ್ದೇನೆ. ಬದುಕು ನಡೆಸುವುದೇ ಕಷ್ಟವಾಗಿದೆ ಇತ್ಯಾದಿ ವಿಷಯಗಳನ್ನು ತುಳುವಿನಲ್ಲಿ ಹೇಳಿ ವಿಡಿಯೋ ಮಾಡಿದ್ದರು. ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದರು.
ಘಟನೆಗೆ ಸಂಬಂಧಿಸಿ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ದೂರಿನಲ್ಲಿ ಮನೋಹರ್ ಪಿರೇರಾ ಅವರು ಹತ್ತು ವರ್ಷಗಳ ಹಿಂದೆ ಮನೆ ಖರೀದಿಗಾಗಿ ಎಂಸಿಸಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಸಾಲದ ಕಂತನ್ನು ಮನೋಹರ್ ಅವರ ಅಣ್ಣ ಗುಜರಾತಿನಲ್ಲಿರುವ ಮೆಲ್ಕಮ್ ಪಿರೇರಾ ಬ್ಯಾಂಕಿಗೆ ಕಟ್ಟುತ್ತಿದ್ದರು. ಕೋವಿಡ್ ಬಳಿಕ ಮೆಲ್ಕಮ್ ಆರ್ಥಿಕ ನಷ್ಟಗೊಂಡಿದ್ದರಿಂದ ಬ್ಯಾಂಕ್ ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ಎಂಸಿಸಿ ಬ್ಯಾಂಕ್ ಆಡಳಿತವು ಮನೋಹರ್ ಪಿರೇರಾ ಮನೆಯನ್ನು ಜಪ್ತಿ ಮಾಡಿತ್ತು.
ಆನಂತರ, ಮನೋಹರ್ ಪಿರೇರಾ ಅವರ ಅತ್ತೆಯೂ ಆಗಿರುವ ಸಿಸ್ಟರ್ ಕ್ರಿಸ್ಟಿನ್ ರವರು ಚಾರಿಟಿ ಸಂಸ್ಥೆಯೊಂದರಿಂದ ಮನೆ ಜಪ್ತಿ ಆಗುವುದನ್ನು ತಡೆಯಲೆಂದು 15 ಲಕ್ಷ ನೆರವು ನೀಡಿದ್ದರು. ಆ ಹಣವನ್ನು ಮನೋಹರ್ ಪಿರೇರಾ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ, ಹಣವನ್ನು ಸಾಲದ ಖಾತೆಗೆ ವರ್ಗಾಯಿಸಲು ಸೆಲ್ಫ್ ಚೆಕ್ ನೀಡಿದ್ದರು. ಆದರೆ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡದೆ ಅಧ್ಯಕ್ಷ ಅನಿಲ್ ಲೋಬೊ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮನೋಹರ್ ಮಾಡಿದ್ದರು. ಆ ಹಣದಲ್ಲಿ 9 ಲಕ್ಷವನ್ನು ಅನಿಲ್ ಲೋಬೊ ತಿಂದಿದ್ದಾನೆ, ಈಗ ಮತ್ತೆ ಹಳೆ ಸಾಲ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.
ಇದರಿಂದ ಮಾನಸಿಕ ಖಿನ್ನರಾಗಿದ್ದ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಜೀವನ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಯೆಂದು ಪ್ರಕರಣ ದಾಖಲಿಸಿದ್ದು ಆರೋಪಿ ಅನಿಲ್ ಲೋಬೊವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಾಮಾನ್ಯವಾಗಿ ಏನೇ ಕೇಸು ದಾಖಲಾದರೂ ಪ್ರಭಾವಿಗಳನ್ನು ಪೊಲೀಸರೇ ಬಚಾವ್ ಮಾಡುತ್ತಾರೆ. ಆದರೆ ಇಲ್ಲಿ ಚಾರಿಟಿ ಸಂಸ್ಥೆಯ ಹಣವನ್ನೇ ಎಂಸಿಸಿ ಬ್ಯಾಂಕ್ ಅಧ್ಯಕ್ಷನೇ ತಿಂದು ಹಾಕಿರುವ ಆರೋಪ ಕೇಳಿಬಂದಿದೆ. ಇದರಿಂದಾಗಿ ಕೆಥೋಲಿಕ್ ಕ್ರೈಸ್ತರ ಒಳಗಡೆಯೇ ಭಾರೀ ಆಕ್ರೋಶ ಭುಗಿಲೆದ್ದಿದೆ. ಇದರ ಪರಿಣಾಮ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅರೆಸ್ಟ್ ಆಗಿದ್ದಾನೆ. ಆರೋಪಿ ಅನಿಲ್ ಲೋಬೊ ಕೂಡ ಉಳಾಯಿಬೆಟ್ಟು ನಿವಾಸಿಯೇ ಆಗಿದ್ದು, ಸಂತ್ರಸ್ತ ಮನೋಹರ್ ಪಿರೇರಾಗೆ ಪರಿಚಯದ ವ್ಯಕ್ತಿಯೇ ಆಗಿದ್ದ. ಮನೋಹರ್ ಮತ್ತು ಅವರ ತಮ್ಮ ಜೀವನ್ ಇಬ್ಬರೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು.
ಈ ನಡುವೆ, ಕೆಲವು ವರ್ಷಗಳ ಹಿಂದೆ ಮನೋಹರ್ ಪಿರೇರಾಗೆ ಪ್ಯಾರಾಲಿಸಿಸ್ ಆಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಕೋವಿಡ್ ನಂತರ ತೀರಾ ಸಂಕಷ್ಟಕ್ಕೆ ತುತ್ತಾಗಿದ್ದರು. ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಚಾರಿಟಿ ಸಂಸ್ಥೆಯ ಹಣ ನೀಡಿ ಬಚಾವ್ ಮಾಡಲು ಮುಂದಾಗಿದ್ದರು. ಆದರೆ ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಅನ್ನೋ ಹಾಗೆ, ಬ್ಯಾಂಕಿನ ಅಧ್ಯಕ್ಷನ ಕಿರುಕುಳದಿಂದಾಗಿ ಬಡಪಾಯಿ ಜೀವ ಬಿಡುವಂತಾಗಿದೆ. ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಪ್ರತಿಕ್ರಿಯಿಸಿ, ಬ್ಯಾಂಕ್ ಅಧ್ಯಕ್ಷನ ಕಿರುಕುಳಕ್ಕೆ ಮುಗ್ಧ ಜೀವ ಬಲಿಯಾಗಿದೆ, ಇದಕ್ಕೆ ನ್ಯಾಯ ಕೊಡುವವರು ಯಾರು, ನಮ್ಮ ಸಮುದಾಯದ ಜನರು ನ್ಯಾಯಕ್ಕಾಗಿ ಪ್ರಶ್ನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
#Mangalore #Fermai 46 year old man commits #suicide alleging torture by #Mcc #Catholic #Bank President #AnilLobo. The deceased has been identified as Manohar Pereira. He has made alleging of torture by Anil Lobo, Kankanady rural police are now investigating the case. #BREAKING pic.twitter.com/En9X4APn05
— Headline Karnataka (@hknewsonline) December 17, 2024
Mangalore Anil Lobo, Chairman of the MCC Catholic Bank, was arrested by Kankandy Rural Police in connection with the suicide of Manohar Pereira in Fermai. It is alleged that Pereira faced harassment and torture over a bank loan, which led him to take this tragic step. Following the incident, a video surfaced on social media in which Pereira claims that Anil Lobo is the reason for his suicide.
22-08-25 12:29 pm
HK News Desk
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
22-08-25 01:11 pm
HK News Desk
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm