ಬ್ರೇಕಿಂಗ್ ನ್ಯೂಸ್
12-12-24 12:37 pm Mangalore Correspondent ಕರಾವಳಿ
ಪುತ್ತೂರು, ಡಿ.12: ಶಬರಿಮಲೆಯ ಅಯ್ಯಪ್ಪನ ಮಾಲೆ ಹಾಕಿ ಇಷ್ಟಾರ್ಥ ಸಿದ್ಧಿಸಿಕೊಂಡಿದ್ದನ್ನು ಕೇಳಿದ್ದೇವೆ, ಕೆಲವರು ಅಯ್ಯಪ್ಪನ ಭಕ್ತರು ಕುದಿವ ಬಾಣಲೆಯಿಂದಲೇ ಕೈಯಲ್ಲಿ ಅಪ್ಪವನ್ನು ತೆಗೆದು ಪವಾಡ ಮಾಡಿದ್ದನ್ನೂ ನೋಡಿದ್ದೇವೆ. ಎದ್ದು ನಡೆಯಲಾಗದವರು, ಕಣ್ಣು ಕಾಣದವರು ಸರಿಯಾಗಿದ್ದನ್ನು ಕೇಳಿದ್ದೇವೆ. ಪುತ್ತೂರಿನಲ್ಲಿ ಬಾಯಿ ಬಾರದ ಮೂಗ ಬಾಲಕನೊಬ್ಬ ಅಯ್ಯಪ್ಪನ ಮಾಲೆ ಹಾಕಿ ತೊದಲು ಮಾತುಗಳನ್ನಾಡಲು ಆರಂಭಿಸಿದ್ದಾನೆ. ಅಯ್ಯಪ್ಪನ ಶರಣು ಘೋಷಣೆಯನ್ನೂ ಹಾಕುತ್ತಿದ್ದಾನೆ.
ಪುತ್ತೂರು ನಗರದ ಸೂತ್ರಬೆಟ್ಟು ನಿವಾಸಿ ದಿ. ಸೋಮಪ್ಪ ನಾಯ್ಕ್ ಮತ್ತು ಪ್ರಭಾವತಿ ದಂಪತಿಯ ಪುತ್ರ ಪ್ರಸನ್ನ ಎಂಬ 17 ವರ್ಷದ ಬಾಲಕನಿಗೆ ಸಣ್ಣಂದಿನಿಂದಲೂ ಮಾತನಾಡಲು ಬರುತ್ತಿರಲಿಲ್ಲ. ಕೇವಲ ಕೈಸನ್ನೆಯಿಂದಲೇ ವ್ಯವಹರಿಸುತ್ತಿದ್ದ. ಒಂದು ಶಬ್ದವನ್ನೂ ಉಚ್ಚಾರ ಮಾಡಿರದ ಬಾಲಕನೀಗ ಮಾತುಗಳನ್ನು ಆಡುತ್ತಿದ್ದಾನೆ. ಅಯ್ಯಪ್ಪ ಸ್ವಾಮಿಯ ಏಳೆಂಟು ಶರಣುಗಳನ್ನು ಹೇಳುತ್ತಿದ್ದಾನೆ. ಪ್ರಶ್ನೆ ಮಾಡಿದರೆ, ತೊದಲು ಮಾತಿನಲ್ಲಿ ಉತ್ತರಗಳನ್ನು ನೀಡುತ್ತಿರುವುದು ಸ್ಥಳೀಯರಲ್ಲಿ ಚಕಿತ ಮೂಡಿಸಿದೆ.
ಪ್ರಸನ್ನ ಮತ್ತು ಪ್ರಣತಿ ಅವಳಿ ಮಕ್ಕಳಾಗಿದ್ದು, ಹೆಣ್ಣು ಮಗು ಇತರೇ ಮಕ್ಕಳಂತೆ ಸಹಜವಾಗಿ ಬೆಳೆದಿದ್ದರೆ ಹುಡುಗ ಪ್ರಸನ್ನ ಮಾತ್ರ ಮಾತು ಆಡುತ್ತಿರಲಿಲ್ಲ. ಶಾಲೆಗೆ ಸೇರುವ ಹೊತ್ತಿಗೆ ಅಪ್ಪ- ಅಮ್ಮ ಮಾತ್ರ ಹೇಳುತ್ತಿದ್ದ. ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಮಗುವಿಗೆ ಕಿವಿಯ ಸಮಸ್ಯೆ ಇರುವುದು ತಿಳಿದುಬಂದಿತ್ತು. ಅದಕ್ಕೆ ಔಷಧಿ ಮಾಡಿ ಶ್ರವಣ ಸಾಧನ ಅಳವಡಿಸಿದ್ದರೂ, ಪ್ರಯೋಜನ ಆಗಿರಲಿಲ್ಲ. ಕೇಳುವ ಮತ್ತು ಮಾತನಾಡುವ ಸಮಸ್ಯೆ ಬಿಟ್ಟರೆ ಇತರ ಮಕ್ಕಳಂತೆ ಚಟುವಟಿಕೆಯಲ್ಲೇ ಇದ್ದ. ಈ ನಡುವೆ, ಬಾಲ್ಯದಿಂದಲೇ ಮನೆ ಬಳಿಯಲ್ಲೇ ಅಯ್ಯಪ್ಪ ಮಾಲಾಧಾರಿಗಳ ಜೊತೆಗೆ ನಿಕಟವಾಗಿದ್ದ. ಇವನಿಗೆ ಬಾಯಿ ಬರಲೆಂದು ಅಯ್ಯಪ್ಪ ಸ್ವಾಮಿಗೆ ಪ್ರತಿ ವರ್ಷ ತುಪ್ಪದ ಸೇವೆ ನೀಡುತ್ತಿದ್ದೆವು. ಮಾಲಾಧಾರಿಗಳ ಜೊತೆಗಿದ್ದು ಪೂಜೆಯಲ್ಲೂ ತೊಡಗಿಸುತ್ತಿದ್ದ ಎಂದು ಆತನ ತಾಯಿ ಪ್ರಭಾವತಿ ಹೇಳುತ್ತಾರೆ.
ಕಳೆದ ವರ್ಷ ಮೊದಲ ಬಾರಿಗೆ, ಮಾಲೆಯನ್ನು ಹಾಕಿ ಶಬರಿಮಲೆಗೂ ಹೋಗಿದ್ದ. ಈ ಬಾರಿ ಎರಡನೇ ವರ್ಷದಲ್ಲಿ ಮಾಲಾಧಾರಿಯಾಗಿ 48 ದಿನಗಳ ವ್ರತ ಕೈಗೊಂಡಿದ್ದಾನೆ. ಸಾಮೆತ್ತಡ್ಕದ ಕರುಣಾಮಯಿ ಭಕ್ತವೃಂದದ ಸ್ವಾಮಿಗಳ ಜೊತೆಗಿದ್ದಾನೆ. ಈ ವೇಳೆ, ಬಾಯಿ ಬಾರದ ಬಾಲಕ ಶರಣು ಹೇಳುತ್ತಿರುವುದು, ತೊದಲು ಮಾತುಗಳನ್ನು ಆಡುತ್ತಿರುವುದನ್ನು ಕೇಳಿ ಇತರೇ ಸ್ವಾಮಿಗಳು ಅಚ್ಚರಿಗೊಂಡಿದ್ದಾರೆ. ಬಾಲಕನ ತಾಯಿ ಇನ್ನಿಲ್ಲದ ಸಂತಸದಲ್ಲಿದ್ದಾರೆ. ಕಳೆದ ಬಾರಿ ಶರಣು ಕರೆಯುವಾಗ ಸುಮ್ಮನಿರುತ್ತಿದ್ದ ಮಗ ಈ ಬಾರಿ ಶರಣು ಹೇಳುತ್ತಿದ್ದಾನೆ. ಈ ಬಾರಿ ನ.16ಕ್ಕೆ ಮಾಲೆ ಹಾಕಿದ್ದು, ಡಿ.31ರಂದು ಯಾತ್ರೆ ಆರಂಭಿಸಲಿದ್ದಾನೆ. ಅಯ್ಯಪ್ಪ ಸ್ವಾಮಿಯ ಕೃಪೆಯಿಂದ ಮಗ ಸ್ಪಷ್ಟವಾಗಿ ಮಾತನಾಡಲಿದ್ದಾನೆ ಎಂದು ತಾಯಿ ವಿಶ್ವಾಸದಲ್ಲಿದ್ದಾರೆ.
12 ವರ್ಷಗಳಿಂದ ಪ್ರಸನನ್ನು ನೋಡುತ್ತಿದ್ದೇನೆ. ಏನೂ ಮಾತನಾಡುತ್ತಿರಲಿಲ್ಲ. ಮೈಮುಟ್ಟಿ ಕರೆಯಬೇಕಿತ್ತು. ಕೈಸನ್ನೆ ಮಾಡಿಯೇ ಮಾತನಾಡಬೇಕಿತ್ತು. ನಾವು ಮಾಲೆ ಹಾಕಿ ತಂಗುತ್ತಿದ್ದ ಜಾಗಕ್ಕೆ ಪ್ರತಿ ವರ್ಷ ಬಂದು ಸ್ವಾಮಿ ಸೇವೆಯಲ್ಲಿ ತೊಡಗುತ್ತಿದ್ದ. ಇದನ್ನು ನೋಡಿ ನಾವೇ ಹರಕೆ ಹೊತ್ತುಕೊಂಡಿದ್ದೆವು. ಬಾಯಿ ಬಂದರೆ ಜೊತೆಗೆ ಕರೆತರುತ್ತೇವೆಂದು ಹರಕೆ ಹೇಳಿದ್ದೆವು. ನಿಧಾನಕ್ಕೆ ಅಯ್ಯಪ್ಪ ಎಂದು ಹೇಳಲು ಆರಂಭಿಸಿದ್ದ. ಕಳೆದ ವರ್ಷ ಯಾತ್ರೆ ಮುಗಿಸಿ ಬಂದ ಬಳಿಕ ಸಾಕಷ್ಟು ಸುಧಾರಣೆಯಾಗಿದೆ. ಈಗ ಬಲ ಕಿವಿಯಲ್ಲಿ ಸ್ವಲ್ಪ ಕೇಳುತ್ತಿದೆ. ಮಾತು ಕಲಿಯುತ್ತಿದ್ದು, ಏಳೆಂಟು ಶರಣು ಹೇಳುತ್ತಿದ್ದಾನೆ ಎಂದು ಬಾಲಕನಿಗೆ ಮಾಲೆ ಹಾಕಿರುವ ಮನೋಜ್ ಗುರುಸ್ವಾಮಿ ಹೇಳುತ್ತಾರೆ.
Puttur 17 year old Dumb youth begans to talk after wearing ayyappa mala and chanting praises. Prasanna was unable to talk since he was a little child and had stammering issue and now he's able to speak clearly.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm