ಬ್ರೇಕಿಂಗ್ ನ್ಯೂಸ್
27-11-24 08:50 pm Mangalore Correspondent ಕರಾವಳಿ
ಮಂಗಳೂರು, ನ.27: ಕನ್ನಡ ಶಾಲೆ ಉಳಿಸದೇ ಹೋದರೆ ಕನ್ನಡ ಬೆಳೆಸಲು ಸಾಧ್ಯವಿಲ್ಲ. ವ್ಯವಹಾರ, ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್ ಶಾಲೆಗೆ ಜನ ಮಾರು ಹೋಗುತ್ತಿದ್ದಾರೆ. ಆದರೆ, ಇದರಿಂದ ಕ್ರಮೇಣ ಕನ್ನಡಕ್ಕೆ ದೊಡ್ಡ ಆಪತ್ತು ಉಂಟಾಗಬಹುದು. ಇಂಗ್ಲಿಷ್ ಶಾಲೆಗಿಂತ ಕಡಿಮೆಯಿಲ್ಲ ಎನ್ನುವ ರೀತಿ ಕನ್ನಡ ಶಾಲೆ ಕಟ್ಟಬೇಕು. ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಲ್ಲ ಎನ್ನುವ ಕೊರಗನ್ನು ನೀಗಿಸಿ ಗುಣಮಟ್ಟ ಹೆಚ್ಚಿಸುವ ಕೆಲಸವಾದರೆ ಖಂಡಿತವಾಗಿಯೂ ಮಕ್ಕಳು ಬರುತ್ತಾರೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ.ಕೆ. ಚಿನ್ನಪ್ಪ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಸರ್ಕಾರದಿಂದ ಕೊಡುತ್ತಾರೆ. ಬಾಕಿ ದೇಣಿಗೆ ಸೇರಿ 35 ಕೋಟಿ ವ್ಯಯ ಮಾಡುತ್ತಾರೆ. ಅಷ್ಟು ಖರ್ಚು ಮಾಡಿ ಕನ್ನಡ ಸಾಹಿತ್ಯ ಹೆಸರಲ್ಲಿ ಜಾತ್ರೆ ಮಾಡುವ ಅಗತ್ಯ ಇದೆಯೇ ಎಂದು ಚಿಂತಿಸಬೇಕು. ಪ್ರತಿ ಬಾರಿ ಇಷ್ಟೊಂದು ಖರ್ಚು ಮಾಡಿ ಉತ್ಸವ ಮಾಡುವುದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ಏನಿದೆ? ಇದೇ 25 ಕೋಟಿ ಬಳಸಿ ಒಂದಿಡೀ ಜಿಲ್ಲೆಯ ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸಬಹುದು. ಕನ್ನಡ ಉಳಿದರೆ ಮಾತ್ರ ಕನ್ನಡ ಸಾಹಿತ್ಯ, ಸಂಸ್ಕೃತಿ ಉಳಿಯಬಹುದಷ್ಟೇ ಎಂದು ಹೇಳಿದರು.
ರಾಜ್ಯದಲ್ಲಿ 40 ಸಾವಿರ ಶಿಕ್ಷಕ ಹುದ್ದೆ ಖಾಲಿಯಿದೆ ಎಂದು ಶಿಕ್ಷಣ ಸಚಿವರೇ ಹೇಳುತ್ತಾರೆ. ಇಷ್ಟೊಂದು ಹುದ್ದೆ ಖಾಲಿ ಆಗಿದ್ದು ಒಂದೆರಡು ವರ್ಷಗಳಿಂದಲ್ಲ. ಹಣಕಾಸು ಕೊರತೆ ನೆಪ ಹೇಳಿ ಸರಕಾರ ಶಿಕ್ಷಕರನ್ನು ನೇಮಿಸಿಲ್ಲ. ಈಗ ಶಾಲಾ ಕಟ್ಟಡ ಇದೆ, ಶತಮಾನೋತ್ಸವ ಮುಗಿಸಿದ ಶಾಲೆಗಳಿವೆ, ಶಿಕ್ಷಕರಿಲ್ಲ ಎನ್ನುವ ಸ್ಥಿತಿಯಾಗಿದೆ. ಶಿಕ್ಷಕರಿಲ್ಲದ ಕಾರಣ ಜನರು ಮಕ್ಕಳನ್ನು ಕಳಿಸುತ್ತಿಲ್ಲ. ಕಷ್ಟಪಟ್ಟಾದರೂ ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ ಎಂದರು.
ವಿಸಿಯಾದವರಿಗೆ ವಿವೇಚನೆ ಇರಬೇಕು
ಮಂಗಳೂರು ಸೇರಿ ವಿಶ್ವವಿದ್ಯಾನಿಲಯಗಳ ಸ್ಥಿತಿ ಅಧೋಗತಿಯಾಗುತ್ತಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ, ವಿಶ್ವವಿದ್ಯಾನಿಲಯಗಳಲ್ಲಿ ಅಭಿವೃದ್ಧಿ ಕೆಲಸಕ್ಕೆ ಅನುದಾನ ಬರುವುದು ನಿಂತಿದೆ. ಆದರೆ, ಬೇರೆ ಬೇರೆ ಮೂಲಗಳಿಂದ ಬರುವ ಆದಾಯವನ್ನು ಕಟ್ಟಡ ಕಟ್ಟುವುದಕ್ಕೆ ಹಾಕಿದರೆ ಹೇಗೆ..? ಅನುದಾನವನ್ನು ಸೂಕ್ತ ವಿವೇಚನೆ ಇಲ್ಲದೆ ಬಳಸಿಕೊಳ್ಳುವುದರಿಂದ ಆಪತ್ತು ಎದುರಾಗುತ್ತದೆ. ಮಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಸ್ಟೆಲ್ ಕಟ್ಟಡವನ್ನು ಉದಾಹರಿಸುತ್ತ, 5 ಕೋಟಿ ವೆಚ್ಚದಲ್ಲಿ ಆಗಬಹುದಾಗಿದ್ದ ಕಟ್ಟಡಕ್ಕೆ 57 ಕೋಟಿ ವ್ಯಯಿಸಿದ್ದಾರೆ. ಆದರೂ ಕಟ್ಟಡ ಕಾಮಗಾರಿ ಆಗಿಲ್ಲ. ಈಗ 83 ಕೋಟಿ ಎಂದು ಅಂದಾಜು ಹಾಕಿದ್ದಾರೆ. ಇಷ್ಟಕ್ಕೂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿದ್ದಾರೆಯೇ ಎಂದರೆ ಮತ್ತೆ ಪ್ರಶ್ನಾರ್ಥಕ. ಕುಲಪತಿ, ಸಿಂಡಿಕೇಟ್ ಸದಸ್ಯರು ಇದರ ಬಗ್ಗೆ ನಿರ್ಣಯ ಕೈಗೊಳ್ಳುವಾಗ ವಿವೇಚನೆ ಮಾಡಬೇಕಿತ್ತು. ಒಂದು ವಿಭಾಗದಲ್ಲಿ ಪ್ರೊಫೆಸರ್, ಇಬ್ಬರು ಖಾಯಂ ಉಪನ್ಯಾಸಕರು ಸೇರಿ ಐವರು ಸಿಬಂದಿ ಇರಬೇಕು. ಈಗ ಖಾಯಂ ಶಿಕ್ಷಕ ಇಲ್ಲದ ರಿಸರ್ಚ್ ಸೆಂಟರ್ ಎನ್ನುವಂತಾಗಿದೆ. ಇದರಿಂದ ವಿವಿಯಲ್ಲಿ ಶಿಕ್ಷಣದ ಗುಣಮಟ್ಟವೂ ಕುಸಿದಿದೆ, ರೀಸರ್ಚ್ ಕೂಡ ಆಗುತ್ತಿಲ್ಲ. ವಿವಿಯನ್ನು ನಡೆಸುವುದಕ್ಕೇ ಕಷ್ಟಪಡುವ ಸ್ಥಿತಿಯಾಗಿದೆ ಎಂದು ಹೇಳಿದರು.
ತನ್ನ ಜನಪದ ಅಧ್ಯಯನದ ಬಗ್ಗೆ ಹೇಳುತ್ತ ಹೋದ ಚಿನ್ನಪ್ಪ ಗೌಡರು, ಭೂತಾರಾಧನೆ ಎನ್ನುವುದು ವಿಸ್ಮಯದ ಜಗತ್ತು. ಇದರ ಅಧ್ಯಯನಕ್ಕೆ ತೊಡಗಿದಾಗ, ಅಮೃತ ಸೋಮೇಶ್ವರರು ಭೂತಾರಾಧನೆಗೂ ಭವಿಷ್ಯ ಇದೆ, ಅದನ್ನು ಅಧ್ಯಯನ ಮಾಡಿದ ನಿಮಗೂ ಉಜ್ವಲ ಭವಿಷ್ಯ ಇದೆ ಎಂದಿದ್ದರು. ಭೂತಾರಾಧನೆ ಎಂದರೆ ರಂಗಭೂಮಿ ಅನ್ನುವ ರೀತಿ ಮಾತು, ಕುಣಿತ, ಹಿಮ್ಮೇಳ, ಮದಿಪು, ಪಾಡ್ದನ, ಸಂಗೀತ ಎಲ್ಲವೂ ಇದೆ. ಇದರ ನಡುವಿನ ಸಂಬಂಧ ಏನೆಂದು ಅಧ್ಯಯನ ಮಾಡಿದೆ. ವಿವೇಕ್ ರೈ ಬಹಳ ವಿಸ್ತಾರವಾಗಿ ಮಾಡಿದ್ದಾರೆ. ಭೂತಾರಾಧನೆಯ ಪ್ರಾಚೀನ ರೂಪ ಜಾಲಾಟ. ಯಕ್ಷಗಾನ ರೂಪದಲ್ಲಿ ಅದಕ್ಕಿಂತ ಭಿನ್ನವಾಗಿರುವ ಕಲೆಯಿದು.
ತುಳು ಸಾಹಿತ್ಯ ಇಂಗ್ಲಿಷಿಗೆ ಅನುವಾದ
ನಾವು ಇಂಗ್ಲಿಷ್ ಪ್ರೊಫೆಸರ್ ಸುರೇಂದ್ರ ರಾವ್ ಜೊತೆಗೂಡಿ ತುಳು ಸಾಹಿತ್ಯವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದೇವೆ. ಏಳು ಸಂಪುಟದಲ್ಲಿ ಎರಡು ಸಾವಿರ ಪುಟಗಳ ತುಳು ಸಾಹಿತ್ಯ ಇಂಗ್ಲಿಷ್ ನಲ್ಲಿ ಬಂದಿದೆ. ತುಳು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಯಾಕೆ ಎನ್ನುವುದಕ್ಕೆ ಇದರಲ್ಲೊಂದಷ್ಟು ಆಧಾರವಾಗುತ್ತದೆ. ತುಳುವಿನಲ್ಲಿ ಏನಿದೆ ಎಂದು ಕೇಳುವವರು ಇದನ್ನು ಓದಬೇಕು. ಮಲಯಾಳ, ತಮಿಳಿಗೂ ಮಾಡಬೇಕಿತ್ತು ಎಂಬ ಆಸೆ ಇದೆ, ಅನುವಾದಕರು ಇಲ್ಲ. ಅನುವಾದಿಸಿದರೆ ಓದುಗರಿದ್ದಾರೆ. ಆಧುನಿಕ ಜಗತ್ತಿನಲ್ಲಿ ಅನುವಾದಕರಿಗೆ ಒಳ್ಳೆಯ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಇದನ್ನೇ ದೊಡ್ಡ ಮಾರ್ಕೆಟ್ ಮಾಡುತ್ತಿದ್ದಾರೆ. ಕನ್ನಡದ ಕೃತಿಗಳು ಎಷ್ಟು ಬೇರೆ ಭಾಷೆಗೆ ಅನುವಾದಗೊಂಡಿಲ್ಲ ಎಂದು ಪ್ರಶ್ನಿಸಿದರು.
ತುಳು ಜನಪದದಲ್ಲಿ ಅಧ್ಯಯನಕ್ಕೆ ಅವಕಾಶ
ತುಳುವಿನ ಕೆಲಸ ವೈಯಕ್ತಿಕ ನೆಲೆಯಲ್ಲಿ ಆಗಿದ್ದು ಬಿಟ್ಟರೆ ಸಾಂಸ್ಥಿಕವಾಗಿ ಹೆಚ್ಚು ಆಗಿಲ್ಲ. ಸಾಂಸ್ಥಿಕ ನೆಲೆಯಲ್ಲಿ ತುಳು ಅಕಾಡೆಮಿ ಮತ್ತು ಉಡುಪಿಯ ಆರ್ ಆರ್ ಸಿ ಮಾತ್ರ ಇದೆ. ತುಳುವಿನಲ್ಲಿ ಸಂಶೋಧನೆಗೆ ವಿಫುಲವಾದ ಅವಕಾಶಗಳಿದ್ದು, ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ಜನಪದ ಸಂಸ್ಕೃತಿಯ ತಳಸ್ಪರ್ಶಿ ಅಧ್ಯಯನ ಆಗಿಲ್ಲ. ಅದರಲ್ಲೂ ತುಳುನಾಡಿನಲ್ಲಿ ಅಪರಿಮಿತ ಜನಪದ ಸಾಹಿತ್ಯ ಇದೆ. ಬೇರೆ ಕಡೆಗೆ ಹೋಲಿಸಿದರೆ, ಇಷ್ಟೊಂದು ಸಿರಿವಂತಿಕೆ ಕಾಣಸಿಗಲ್ಲ. ಸಂಸ್ಕೃತಿ, ಕ್ಷೇತ್ರ ಕಾರ್ಯವನ್ನೇ ಮುಖ್ಯವಾಗಿಸಿ ಅಧ್ಯಯನ ಶಿಬಿರ ಆಗಿತ್ತು. ಫಿನ್ಲೆಂಡಿನ ಲಾರಿ ಹಾಂಕೋ ಇಲ್ಲಿಗೆ ಬಂದು ನಮ್ಮ ಸಿರಿಕಾವ್ಯದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಜನಪದ ಪಾಡ್ದನಕಾರ ಗೋಪಾಲ ನಾಯ್ಕ 15683 ಸಾಲುಗಳ ಸಿರಿಕಾವ್ಯವನ್ನು ಬಾಯ್ದೆರೆಯಾಗಿ ಕಟ್ಟಿಕೊಟ್ಟಿದ್ದನ್ನು ಲಾರಿ ಹಾಂಕೋ ರೆಕಾರ್ಡ್ ಮಾಡಿದ್ದಾರೆ. ಪಾಡ್ದನದ ಎಂಟು ಸಾವಿರ ಸಾಲುಗಳ ಪದ್ಯವನ್ನು ಸೇರಿಸಿ ಪುಸ್ತಕ ಮಾಡಿದ್ದೇನೆ, ಅದರಲ್ಲಿ ನಮ್ಮ ಸಂಸ್ಕೃತಿಯ ಸಿರಿವಂತಿಕೆ ಇದೆ ಎಂದು ಹೇಳಿದರು.
ತುಳುವಿನ ಅಧ್ಯಯನಕ್ಕೆ ನೆರವು ಬೇಕಾಗಿದೆ
ತುಳು ಸಾಹಿತ್ಯ, ಸಂಸ್ಕೃತಿಯ ಕುರಿತ ಅಧ್ಯಯನ ನಿಂತೇ ಹೋಗಿದೆ. ಖರ್ಚಿನ ಅಗತ್ಯ ಬೀಳುವುದರಿಂದ ವೈಯಕ್ತಿಕ ನೆಲೆಯಲ್ಲಿ ಯಾರೂ ಆಸಕ್ತಿ ವಹಿಸುತ್ತಿಲ್ಲ. ಪಾಡ್ದನ, ಜನಪದ ಸಾಹಿತ್ಯದ ಅಧ್ಯಯನಕ್ಕೆ ಸಾಂಸ್ಥಿಕ ನೆರವು ಬೇಕಾಗಿದೆ ಎಂದು ಹೇಳಿದ ಅವರು, ಯಾವ ವೃತ್ತಿಯೂ ಸುಲಭ ಇಲ್ಲ, ಸಂಶೋಧನೆಯೂ ಸುಲಭ ಆಗುವುದಿಲ್ಲ. ಭೂತಾರಾಧನೆಯಲ್ಲಿ ಪಿಎಚ್ ಡಿ ಮಾಡುತ್ತೇನೆಂದು ಬಂದಿದ್ದ ವಿದ್ಯಾರ್ಥಿಯೊಬ್ಬ, ಒಂದು ವರ್ಷದ ಬಳಿಕ ಇದು ಕಷ್ಟವಾಗುತ್ತದೆ, ನಮ್ಮ ಕಷ್ಟ ನಿಮಗೆ ಅರ್ಥ ಆಗುವುದಿಲ್ಲ ಎಂದು ಹೇಳಿ ಹೋಗಿದ್ದ ಎಂದು ಈಗಿನ ವಿದ್ಯಾರ್ಥಿಗಳ ಅಸಡ್ಡೆಯನ್ನು ಉದಾಹರಿಸಿದರು.
ತುಳುವನ್ನು ದ್ವಿತೀಯ ಭಾಷೆಯಾಗಿ ಮಾಡುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಕೋನಗಳಿಂದ ನೋಡಿದರೂ ತುಳುವನ್ನು ದ್ವಿತೀಯ ಭಾಷೆಯೆಂದು ಅಂಗೀಕರಿಸಬೇಕು. ತುಳುವಿಗೆ ಮಾನ್ಯತೆ ಕೊಟ್ಟರೆ ಮತ್ತೊಬ್ಬ ಕೇಳುತ್ತಾನೆ ಅನ್ನುವುದರಲ್ಲಿ ಅರ್ಥ ಇಲ್ಲ. ಅದಕ್ಕೊಂದು ಮಾನದಂಡ ಮಾಡಲಿ. ತುಳುವನ್ನು 50 ಲಕ್ಷಕ್ಕೂ ಹೆಚ್ಚು ಜನರು ಮಾತನಾಡುತ್ತಾರೆ, ಅಪಾರ ಸಾಹಿತ್ಯ ಭಂಡಾರ, ಸಂಸ್ಕೃತಿ, ಇತಿಹಾಸ ಇದೆ, ಹಿಂದೆ ತುಳು ರಾಜ್ಯ ಎಂದೇ ಇತ್ತು. ಫಿನ್ಲೆಂಡ್ ದೇಶದ ಜನಸಂಖ್ಯೆಯೇ 50 ಲಕ್ಷ ಇಲ್ಲ. ಕರ್ನಾಟಕದಲ್ಲಿ ಕನ್ನಡ ಬಿಟ್ಟರೆ ಅತಿ ಹೆಚ್ಚು ಜನ ಮಾತನಾಡುವ ಭಾಷೆ ತುಳು ಅನ್ನುವುದನ್ನು ಒಪ್ಪಲೇಬೇಕು. ಇದರ ಬಗ್ಗೆ ಅಸೆಂಬ್ಲಿಯಲ್ಲಿ ಗಟ್ಟಿ ಧ್ವನಿ ಎಬ್ಬಿಸಬೇಕಾಗಿದೆ ಎಂದು ಹೇಳಿದರು.
ಚಿನ್ನಪ್ಪ ಗೌಡ ಸುದ್ದಿಗೆ ಕೊನೆಗೆ ಸೇರಿಸಿ..
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ, ಹಿರಿಯ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಇದ್ದರು.
Mangalore Strengthen Kannada schools instead of spending 25 crores on conferences says Renowned folk scholar Dr Chinnappa Gowda.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 04:01 pm
Mangalore Correspondent
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am