ಬ್ರೇಕಿಂಗ್ ನ್ಯೂಸ್
08-08-24 07:16 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.8: ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತದಿಂದ ಮಂಗಳೂರು- ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ತೊಡಕಾಗಿತ್ತು. ಎರಡು ವಾರಗಳ ಸತತ ಪ್ರಯತ್ನದ ಬಳಿಕ ಭೂಕುಸಿತ ಪ್ರದೇಶದಲ್ಲಿ ರೈಲು ಹಳಿಯನ್ನು ಸರಿಪಡಿಸಲಾಗಿದ್ದು, ಆಗಸ್ಟ್ 8ರಿಂದ ಎಂದಿನಂತೆ ರೈಲುಗಳ ಸಂಚಾರಕ್ಕೆ ತೆರೆದುಕೊಂಡಿದೆ. ಅತ್ತ ಶಿರಾಡಿ ಹೆದ್ದಾರಿ ಓಪನ್ ಆದ ಬೆನ್ನಲ್ಲೇ ರೈಲು ಸಂಚಾರವೂ ಆರಂಭಗೊಂಡಂತಾಗಿದ್ದು, ಬಸ್ಸುಗಳ ಮಿತಿಮೀರಿದ ದರದಿಂದಾಗಿ ದಣಿದಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸುಬ್ರಹ್ಮಣ್ಯ – ಸಕಲೇಶಪುರದ ರೈಲು ಹಳಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಜುಲೈ 26ರ ಬಳಿಕ ಈ ಹಾದಿಯಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ದಕ್ಷಿಣ ರೈಲ್ವೇ ಮತ್ತು ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳ ಜಂಟಿ ಪ್ರಯತ್ನ, ದಿನದಲ್ಲಿ 200ಕ್ಕೂ ಹೆಚ್ಚು ಸಿಬಂದಿಗಳ ಕಾರ್ಯಾಚರಣೆಯ ಬಳಿಕ ಗುಡ್ಡ ಕುಸಿತ ಆಗಿರುವಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೆ, ಹಳಿಯ ಬದಿಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ಸ್ಲಾಬ್ ಗಳನ್ನು ಜೋಡಿಸಲಾಗಿದೆ. ಆಗಸ್ಟ್ 4ರಂದು ಬಹುತೇಕ ಕೆಲಸ ಮುಗಿದಿದ್ದು, ಗೂಡ್ಸ್ ರೈಲು ಸಾಗುವುದಕ್ಕೆ ರೈಲ್ವೇ ಅಧಿಕಾರಿಗಳು ಹಸಿರು ನಿಶಾನೆ ನೀಡಿದ್ದರು. ಆನಂತರ, ಭಾರದ ಎಂಜಿನಗಳನ್ನು ಆ ದಾರಿಯಲ್ಲಿ ಸಾಗಿಸಲಾಗಿತ್ತು.



ಆಗಸ್ಟ್ 6ರಂದು ಫುಲ್ ಲೋಡ್ ಆಗಿದ್ದ ಗೂಡ್ಸ್ ರೈಲೊಂದನ್ನು ಇದೇ ಹಾದಿಯಲ್ಲಿ ಸಾಗಿಸಲಾಗಿದ್ದು, ಮಳೆಯ ನಡುವೆಯೂ ಯಶಸ್ವಿಯಾಗಿ ಹಳಿಯಲ್ಲಿ ಸಾಗಿ ಹೋಗಿದೆ. ಮುಂಜಾಗ್ರತಾ ಕ್ರಮವಾಗಿ ರೈಲಿನ ವೇಗವನ್ನು ಗಂಟೆಗೆ 15 ಕಿಮೀಗೆ ಇಳಿಸಲಾಗಿತ್ತು. ಆಗಸ್ಟ್ 8ರ ಗುರುವಾರ ಮಧ್ಯಾಹ್ನ ಯಶವಂತಪುರ- ಮಂಗಳೂರು ಜಂಕ್ಷನ್ ರೈಲು ಸಕಲೇಶಪುರ ಹಳಿಯ ಮೂಲಕ ಸಾಗಿದ್ದು, ಪ್ಯಾಸೆಂಜರ್ ರೈಲು ಸಾಗುವುದಕ್ಕೆ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದಿನಿಂದ ಎಲ್ಲ ನಿಗದಿತ ರೈಲುಗಳು ಎಂದಿನಂತೆ ಮಂಗಳೂರು – ಬೆಂಗಳೂರು ಮಧ್ಯೆ ಸಂಚಾರ ಆರಂಭಿಸಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇಯ ಚೀಫ್ ಪಬ್ಲಿಕ್ ರಿಲೇಶನ್ ಆಫೀಸರ್ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
The South Western Railway (SWR) on Thursday (August 8, 2024), resumed passenger train services on the Bengaluru-Mangaluru sector by safely passing Train No. 16575 Yeshwantpur-Mangaluru Junction Gomateshwara tri-weekly Express, after restoring the landslip-affected stretch on Sakelshpur-Subrahmanya Road Ghat section.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm