ಬ್ರೇಕಿಂಗ್ ನ್ಯೂಸ್
18-07-24 09:08 pm Mangalore Correspondent ಕರಾವಳಿ
ಮಂಗಳೂರು, ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯ ಕುಮ್ಕಿ ಭೂಮಿಯನ್ನು ಸರಕಾರ ಲೀಸಿಗೆ ಕೊಡುವ ಬಗ್ಗೆ ಹೇಳಿಲ್ಲ. ಬಿಜೆಪಿಯವರು ಅರೆಬರೆ ತಿಳಿದುಕೊಂಡು ಮಾತಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಪ್ಲಾಂಟೇಶನ್ ಆಗಿರುವ ಸರಕಾರಿ ಭೂಮಿಯನ್ನು ಲೀಸಿಗೆ ಕೊಡುವ ಬಗ್ಗೆ ಹೇಳಿರುವುದು. ಏಲಕ್ಕಿ, ರಬ್ಬರ್, ಕಾಫಿ ತೋಟ ಮಾಡಿದವರಿಗೆ ಅನುಕೂಲ ಮಾಡುವುದಕ್ಕಾಗಿ ಈ ಕಾನೂನು ಮಾಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸರಕಾರ ಕುಮ್ಕಿ ಜಾಗ ಅಂತ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಬಿಜೆಪಿ ಮಂದಿ ಅರ್ದಂಬರ್ಧ ತಿಳಿದುಕೊಂಡು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 94ಇ ಪ್ರಕಾರ, ದೊಡ್ಡ ಪ್ಲಾಂಟೇಶನ್ ಮಾಡಿದವರು ಭೂಮಿಯನ್ನು ಲೀಸಿಗೆ ಪಡೆಯಲು ಅವಕಾಶ ಇದೆ. ಅದು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆಯ ವರ್ಗ ಭೂಮಿ ಜೊತೆಗಿರುವ ಕುಮ್ಕಿಯನ್ನು ಲೀಸಿಗೆ ಕೊಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕುಮ್ಕಿ ವಿಚಾರದಲ್ಲಿ ಯಾರಿಗೂ ತೊಂದರೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.
ಬಡವರಿಗೆ ಏನಾದರೂ ಭೂಮಿ ಕೊಟ್ಟಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಿಜೆಪಿಯವರು ಏನಾದರೂ ಭೂಮಿ ಕೊಟ್ಟ ಉದಾಹರಣೆ ಇದೆಯಾ.. 94 ಸಿ ಅಡಿ ಬಡವರಿಗೆ 5 ಸೆಂಟ್ ವರೆಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್. ಮನೆಯ ಅಡಿಭಾಗದ ಭೂಮಿಯನ್ನು 94ಸಿ ಎಂದು ವಿಂಗಡಿಸಲಾಗಿತ್ತು. ಈಗ 94ಇ ಪ್ರಕಾರ, ಭೂಮಿಯನ್ನು ಲೀಸಿಗೆ ನೀಡಲಾಗುತ್ತಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.
ರಾಹುಲ್ ಹಿಂದು ಧರ್ಮದ ಬಗ್ಗೆ ಆಡಿರುವ ಮಾತಿನ ಕುರಿತು ಕೇಳಿದ ಪ್ರಶ್ನೆಗೆ, ರಾಹುಲ್ ಗಾಂಧಿವರು ಸಂಸತ್ತಿನಲ್ಲಿ ಏನು ಮಾತಾಡಿದ್ದಾರೆಂದು ಕಡತದಲ್ಲಿದೆ. ಬಿಜೆಪಿಯವರು ಸುಳ್ಳು ಹೇಳುತ್ತಿರುವುದನ್ನು ನಂಬಬೇಡಿ. ಸನಾತನ ಹಿಂದು ಧರ್ಮದಲ್ಲಿ ಹಿಂಸೆಗೆ ಸ್ಥಾನ ಇಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಅದು ಬಿಟ್ಟು ಬೇರೇನೂ ಹೇಳಿಲ್ಲ. ಸನಾತನ ಹಿಂದು ಧರ್ಮದಲ್ಲಿ ಹಿಂಸೆಗೆ ಅವಕಾಶ ಇಲ್ಲ ಎಂದಿದ್ದರಲ್ಲಿ ತಪ್ಪೇನಿದೆ. ಅದರಲ್ಲಿ ಅವಮಾನ ಆಗುತ್ತಿರುವುದೇನು ಎಂದು ಪ್ರಶ್ನಿಸಿದರು.
ಇದರ ಬಗ್ಗೆ ಹೇಳುತ್ತಿರುವ ಬಿಜೆಪಿ ಮುಖಂಡರು ಶಾಲೆಗೆ ಹೋಗಿದ್ದಾರೆಯೇ ಅಂತ ನೋಡಬೇಕು. ಲೋಕಸಭೆ ಕಡತ ತಂದು ನೋಡಿದರೆ ಏನು ಹೇಳಿದ್ದಾರೆ ಅಂತ ಗೊತ್ತಾಗುತ್ತದೆ. ರಾಹುಲ್ ಗಾಂಧಿ ಮಾತಾಡಿದ್ದರಲ್ಲಿ ತಪ್ಪು ಇಲ್ಲವೆಂದು ಜಗದ್ಗುರು ಶಂಕರಾಚಾರ್ಯರೇ ಹೇಳಿದ್ದಾರೆ. ಸತ್ಯವನ್ನು ತಿಳ್ಕೊಂಡು ಮಾತಾಡಬೇಕು ಅಂತಲೂ ಮಾಧ್ಯಮಕ್ಕೆ ಹಿತವಚನ ಹೇಳಿದ್ದಾರೆ. ಇವರಿಗೆ ಬೇರೆ ಯಾರೋ ವಿಶ್ವಗುರು ಇರಬಹುದು. ಶಂಕರಾಚಾರ್ಯರಿಗಿಂತಲೂ ಅವರೇ ಎತ್ತರದಲ್ಲಿದ್ದಾರೆಯೇ ಗೊತ್ತಿಲ್ಲ. ನಮಗೆ ಜಗದ್ಗುರು ಶಂಕರಾಚಾರ್ಯರೇ ಎತ್ತರದಲ್ಲಿದ್ದಾರೆ ಅಂತ ನಂಬುಗೆ ಎಂದರು ರಮಾನಾಥ ರೈ. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಶಶಿಧರ್ ಹೆಗ್ಡೆ, ಸುರೇಂದ್ರ ಕಂಬಳಿ, ಬೇಬಿ ಕುಂದರ್, ಪಿಯೂಷ್ ರೋಡ್ರಿಗಸ್, ನವೀನ್ ಡಿಸೋಜ, ಜಯಶೀಲ ಅಡ್ಯಂತಾಯ ಇದ್ದರು.
Former minister Ramanath Rai criticised the BJP for misusing and misguiding public over Congress leader and leader of opposition in the Lok Sabha, Rahul Gandhi's parliamentary speech.The BJP is trying to defame Indira Gandhi for imposing the Emergency, but during the Emergency, no civilians were harmed in the district, and many developmental programmes were initiated. After three years, Indira Gandhi lifted the Emergency."
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am