ಬ್ರೇಕಿಂಗ್ ನ್ಯೂಸ್
17-07-24 11:11 pm Mangaluru Correspondent ಕರಾವಳಿ
ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರ ಮಧ್ಯೆ ಜುಲೈ 18 ಮತ್ತು 19ರಂದು ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ನೀಡಿರುವುದರಿಂದ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಜುಲೈ 18ರಂದು ಶಾಲೆ ಮತ್ತು ಕಾಲೇಜಿಗೆ ರಜೆ ನೀಡಲಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಮಾಡಿದ್ದು, ಮಂಗಳೂರು, ಉಳ್ಳಾಲ, ಮೂಲ್ಕಿ- ಮೂಡುಬಿದ್ರೆ ತಾಲೂಕಿಗೆ ರಜೆ ನೀಡಿಲ್ಲ. ಗ್ರಾಮಾಂತರ ಪ್ರದೇಶದ ತಾಲೂಕುಗಳಿಗೆ ರಜೆ ನೀಡಿದ್ದಾಗಿ ತಿಳಿಸಿದ್ದಾರೆ. ಇದಲ್ಲದೆ, ಶಾಲೆಗೆ ಬರದ ಮಕ್ಕಳನ್ನು ಕಡ್ಡಾಯ ಹಾಜರಾತಿ ಮಾಡುವಂತಿಲ್ಲ. ಮಕ್ಕಳು, ಹೆತ್ತವರು ನದಿ ದಡಗಳಲ್ಲಿ ಜಾಗ್ರತೆ ಇರಬೇಕು. ಮೀನುಗಾರರು ನದಿ, ಸಮುದ್ರಕ್ಕೆ ತೆರಳಬಾರದು ಎಂದೂ ಮುನ್ನೆಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಜುಲೈ 18ರಂದು ಜಿಲ್ಲೆಯಲ್ಲಿ ರಜೆ ನೀಡಲಾಗಿದೆ ಎಂದು ಫೇಕ್ ಲೆಟರ್ ವೈರಲ್ ಆಗಿತ್ತು. ಇದರ ಬಗ್ಗೆ ಸಿಟ್ಟಾದ ಜಿಲ್ಲಾಧಿಕಾರಿ, ಅಂತಹ ಫೇಕ್ ಪತ್ರವನ್ನು ಸೃಷ್ಟಿಸಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೆ, ಇಂತಹ ಫೇಕ್ ಲೆಟರನ್ನು ವೈರಲ್ ಮಾಡಿದರೂ ಕ್ರಮ ಜರುಗಿಸುವುದಾಗಿ ಹೇಳಿದ್ದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ರಜೆ ಇತ್ತು. ಸೋಮವಾರ, ಮಂಗಳವಾರ ಮಳೆಯಿಂದ ರಜೆ ಇದ್ದರೆ, ಬುಧವಾರ ಮೊಹರಂ ಪ್ರಯುಕ್ತ ರಜೆ ಇತ್ತು. ಜುಲೈ 18ರಂದು ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ರಜೆ ನೀಡಲಾಗಿದೆ.
No holiday for schools in Mangalore and moodbidri on July 18, only holiday for rural areas says DC. Dakshina Kannada district is experiencing continuous rains, in the midst of which a red alert has been issued by the meteorological department on July 18 and 19. Schools and colleges have been closed on July 18 in Puttur, Bantwala, Belthangadi, Sulya and Kadaba taluks.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
28-03-26 04:06 pm
HK News Staffer
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
29-03-26 11:11 am
HK News Staffer
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
ಮಂಗಳೂರು ವಿವಿಯಿಂದ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ,...
27-03-26 03:38 pm
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
28-03-26 07:21 pm
HK News Staffer
ಕೋರ್ಟ್, ಶಾಲೆಗಳಿಗೆ ಬಾಂಬ್ ಬೆದರಿಕೆ ; ಮೈಸೂರಿನಲ್ಲೇ...
28-03-26 06:13 pm
ಹಣ ದುರ್ಬಳಕೆ ಆರೋಪದ ಒತ್ತಡಕ್ಕೆ ಮಹಿಳಾ ಸಹಕಾರ ಸಂಘದ...
28-03-26 02:56 pm
Tablet Arif Murder, Mangalore: ಜಾನ್ ಅಬ್ರಹಾಂ ಮ...
27-03-26 10:02 pm
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm