ಬ್ರೇಕಿಂಗ್ ನ್ಯೂಸ್
16-07-24 02:42 pm Mangalore Correspondent ಕರಾವಳಿ
ಪುತ್ತೂರು, ಜುಲೈ.16: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರ ನದಿಯಲ್ಲಿ ನಿನ್ನೆ ರಾತ್ರಿ ಆನೆ ಮರಿಯೊಂದರ ಮೃತದೇಹ ತೇಲಿಬಂದಿದ್ದು ಕುತೂಹಲ ಸೃಷ್ಟಿಯಾಗಿದೆ.
ರಾತ್ರಿ ವೇಳೆ ಸ್ಥಳೀಯ ಸಿಬಂದಿ ನದಿಯಲ್ಲಿ ನೀರಿನ ಪ್ರಮಾಣ ನೋಡಲು ಸೇತುವೆ ಬಳಿ ಹೋಗಿದ್ದಾಗ ಆನೆ ಮರಿ ಕೊಚ್ಚಿ ಹೋಗುತ್ತಿರುವುದು ಕಂಡುಬಂದಿದೆ. ಸೋಮವಾರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು ಅಲ್ಲಿನ ಶೌಚಾಲಯ ಮತ್ತಿತರ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ಇದು ಕುಮಾರಧಾರ ನದಿ ತುಂಬಿ ಹರಿಯುತ್ತಿರುವುದಕ್ಕೆ ಸಾಕ್ಷಿಯಾಗಿತ್ತು.
ರಾತ್ರಿ ವೇಳೆ ಆಗತಾನೇ ಹೆರಿಗೆಯಾದಂತಿದ್ದ ಆನೆ ಮರಿ ನದಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಗೆ ಹೆಣ್ಣು ಕಾಡಾನೆ ಪ್ರಸವಕ್ಕೀಡಾಗಿ ಮರಿಯನ್ನು ಜೊತೆಗೆ ಒಯ್ಯಲಾಗದ ಸ್ಥಿತಿಯಾಗಿತ್ತೇ ಅನ್ನುವ ಪ್ರಶ್ನೆ ಎದುರಾಗಿದೆ. ಆನೆ ಮರಿಯ ದೇಹ ಬಿಳಿಯಾಗಿದ್ದು ನೀರಿನಲ್ಲಿ ತೇಲಿಕೊಂಡು ಬಂದಿದೆ. ಸತ್ತು ಒಂದೆರಡು ದಿನ ಆದಬಳಿಕವೇ ನೀರಿನಲ್ಲಿ ತೇಲುವುದರಿಂದ ತಾಯಿ ಕಾಡಾನೆ ಬಗ್ಗೆಯೂ ಆತಂಕ ಇದೆ. ಘಟ್ಟಗಳಲ್ಲಿ ಧುಮ್ಮಿಕ್ಕುವ ನದಿಗಳನ್ನು ದಾಟುವಾಗಲೋ ಏನೋ ಆನೆ ಮರಿ ನೀರುಪಾಲಾಗಿರುವ ಸಾಧ್ಯತೆಯಿದೆ.
ರಾತ್ರಿ ವೇಳೆ ಆನೆ ಮರಿಯ ಮೃತದೇಹವನ್ನು ನೀರಿನಿಂದ ಮೇಲೆತ್ತುವುದು ಸಾಧ್ಯವಾಗಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬಂದಿ ಆನೆ ಮರಿಗಾಗಿ ಹುಡುಕಾಟ ನಡೆಸಿದ್ದಾರೆ.
Baby elephant dies after heavy rains in Subramanya Mangalore.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm