ಬ್ರೇಕಿಂಗ್ ನ್ಯೂಸ್
15-07-24 04:21 pm Mangalore Correspondent ಕರಾವಳಿ
ಮಂಗಳೂರು, ಜುಲೈ.15: ಬಡವರ ಮನೆಯ ಮಕ್ಕಳು ತಮ್ಮ ಆಯ್ಕೆಯ ಪದವಿ ಶಿಕ್ಷಣ ಪಡೆಯಬೇಕಾದರೆ ಸರಕಾರಿ ಶಾಲೆ, ಕಾಲೇಜುಗಳು ಉಳಿಯಬೇಕು, ಬಲಗೊಳ್ಳಬೇಕು. ಹಣಕಾಸು, ಅನುದಾನದ ಕೊರತೆಯನ್ನು ಮುಂದಿಟ್ಟು ಕೊಣಾಜೆ, ಬನ್ನಡ್ಕ, ನೆಲ್ಯಾಡಿ ಸಹಿತ ನಾಲ್ಕು ಕಾಲೇಜು ಮುಚ್ಚಲು ಹೊರಟಿರುವುದು ನೆಪ ಮಾತ್ರ. ವಿವಿ ಆಡಳಿತದ ನಡೆಯನ್ನು ನಾಗರೀಕ ಸಮಾಜ ತೀವ್ರವಾಗಿ ವಿರೋಧಿಸಿದೆ. ವಿವಿಯಲ್ಲಿ ಆರ್ಥಿಕ ಮುಗ್ಗಟ್ಟಿಗೆ ವಿವಿ ಆಡಳಿತದ ಭ್ರಷ್ಟಾಚಾರವನ್ನು ಕಂಡು ಕಣ್ಣುಮುಚ್ಚಿ ಕುಳಿತ ಜನಪ್ರತಿನಿಧಿಗಳೇ ನೇರ ಕಾರಣ. ಈಗ ಪರಿಸ್ಥಿತಿ ಕೈ ಮೀರಿದ್ದು ವಿ.ವಿ. ಘಟಕ ಕಾಲೇಜುಗಳನ್ನು ರಾಜ್ಯ ಸರಕಾರವೇ ತನ್ನ ಅಧೀನಕ್ಕೆ ಪಡೆದು ನಡೆಸಲಿ. ದ.ಕ. ಜಿಲ್ಲೆಯಲ್ಲಂತು ಖಾಸಗಿ ಶಿಕ್ಷಣ ಲಾಬಿಯದ್ದೇ ಏಕಸ್ವಾಮ್ಯ. ಧಣಿಕರ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪೂರೈಸೋದಕ್ಕೋಸ್ಕರವೇ ಬ್ರೋಕರ್ ಗಳು ತುಂಬಿ ಹೋಗಿದ್ದಾರೆ. ಇವರು ನಡೆಸುವ ಖಾಸಗಿ ಕಾಲೇಜುಗಳ ಲಾಬಿಯ ದಾಳಿಗೆ ಸರಕಾರಿ ಶಾಲೆ, ಕಾಲೇಜುಗಳು ಬಲಿಯಾಗುತ್ತಿವೆ ಎಂದು ಹೋರಾಟಗಾರ, ಯುವಜನ ಮುಖಂಡ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಕೊಣಾಜೆಯ ಮಂಗಳೂರು ವಿ.ವಿ ಕ್ಯಾಂಪಸ್ ಮುಂಭಾಗದಲ್ಲಿ ಕೊಣಾಜೆ ಸಹಿತ ಮಂಗಳೂರು ವಿವಿ ಘಟಕ ಕಾಲೇಜುಗಳಾದ ಬನ್ನಡ್ಕ, ನೆಲ್ಯಾಡಿ, ಮಂಗಳೂರು ಸಂಧ್ಯಾ ಕಾಲೇಜುಗಳನ್ನು ಉಳಿಸಲು, ಬಲಪಡಿಸಲು ಒತ್ತಾಯಿಸಿ ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಜನಾಗ್ರಹ ಧರಣಿಯನ್ನು ಉದ್ಘಾಟಿಸಿ ಮಾತಾಡಿದರು.



ಸಾಮಾಜಿಕ ಕಾರ್ಯಕರ್ತ ನಝೀರ್ ಉಳ್ಳಾಲ ಮಾತನಾಡಿ, ಶಿಕ್ಷಣದ ಮಾಫಿಯಾ ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಶ್ರೀನಿವಾಸ್ ಮಲ್ಯರು ಅಂದು ಪ್ರಾರಂಭಿಸಿದ ಇಂಜಿನಿಯರಿಂಗ್ ಕಾಲೇಜು ಬಿಟ್ಟರೆ ಈವರೆಗೆ ಒಂದೇ ಒಂದು ಉನ್ನತ ಶಿಕ್ಷಣ ಕಲಿಸುವ ಕಾಲೇಜನ್ನು ದ.ಕ. ಜಿಲ್ಲೆಯಲ್ಲಿ ತೆರೆಯಲು ನಮ್ಮನ್ನಾಳುವ ಸರಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.
ಕಾರ್ಮಿಕ ಮುಖಂಡ ಬಿ ಶೇಖರ್ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಬಡವರ ಮನೆಯ ಮಕ್ಕಳಿಗೆ ಖಾಸಗಿ ಕಾಲೇಜುಗಳು ವಿಧಿಸುವ ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿವಿಯಂತಹ ಸರಕಾರಿ ಕಾಲೇಜುಗಳು ಉಳಿಯಲೇ ಬೇಕು. ಅವುಗಳ ಉಳಿಗಾಗಿ ನಾವೆಲ್ಲಾ ಸಮಾನ ಮನಸ್ಕರು ಜೊತೆಗೂಡಿ ಹೋರಾಟಗಳನ್ನು ತೀವ್ರಗೊಳಿಸಬೇಕಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಅಝೀಝ್ ಮಲಾರ್, ಪ್ರಾಂತ ರೈತ ಸಂಘ ಮುಖಂಡ ಕೆ. ಯಾದವ ಶೆಟ್ಟಿ, ಕಾರ್ಮಿಕ ಮುಖಂಡರಾದ ಎಚ್.ವಿ ರಾವ್, ಬಿ.ಎಮ್ ಭಟ್, ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲ್ಯಾನ್, ಸುನೀಲ್ ಕುಮಾರ್ ಬಜಾಲ್, ಜಯಂತ ನಾಯ್ಕ್, ಹಿರಿಯ ದಲಿತ ಮುಖಂಡ ಎಂ. ದೇವದಾಸ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಜಗತ್ಪಾಲ್ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನಾ ಧರಣಿಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ನವೀನ್ ಕೊಂಚಾಡಿ, ಸೋಶಿಯಲ್ ಫಾರೂಕ್, ಅಬ್ದುಲ್ ಖಾದರ್, ಶೇಖರ್ ಕುತ್ತಾರ್, ಜನಾರ್ಧನ ಕುತ್ತಾರ್, ಶಾಹುಲ್ ಹಮೀದ್, ಅಶ್ರಫ್ ಹರೇಕಳ, ರಫೀಕ್ ಹರೇಕಳ, ತಯ್ಯೂಬ್ ಬೆಂಗರೆ, ಪುನೀತ್ ಉರ್ವಸ್ಟೋರ್, ಜಗದೀಶ್ ಬಜಾಲ್, ಅಲ್ತಾಫ್ ದೇರಳಕಟ್ಟೆ, ರಜಾಕ್ ಮೊಂಟೆಪದವು, ರಜಾಕ್ ಮುಡಿಪು, ಭರತ್ ಕುತ್ತಾರ್, ವಿಲಾಸಿನಿ ತೊಕ್ಕೊಟ್ಟು, ಆಶಾ ಬೋಳೂರು, ಭರತ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.
ಧರಣಿ ಸ್ಥಳಕ್ಕೆ ಉಪ ಕುಲಪತಿ, ರಿಜಿಸ್ಟ್ರಾರ್ ಭೇಟಿ
ವಿವಿಯ ಉಪ ಕುಲಪತಿ ಡಾ.ಪಿ.ಎಲ್ ಧರ್ಮ, ರಿಜಿಸ್ಟ್ರಾರ್ ರಾಜು ಮೊಗವೀರ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಮಂಗಳೂರು ವಿವಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ, ಕಾಲೇಜುಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಪಾವತಿಸುತ್ತಿರುವುದು, ಉಪನ್ಯಾಸಕರಿಗೆ ವೇತನ ಪಾವತಿಸಲು ಆಗದಿರುವ ಸ್ಥಿತಿಗಳನ್ನು ಹಂಚಿಕೊಂಡರು. ಸರಕಾರ ಘಟಕ ಪದವಿ ಕಾಲೇಜುಗಳನ್ನು ಅಧೀನಕ್ಕೆ ಪಡೆದು ನಡೆಸಬೇಕು ಎಂಬುದು ವಿ ವಿಯ ನಿಲುವು, ಅದನ್ನು ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
Private college lobby government colleges like Mangalore University in trouble slams DYFI
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm