ಬ್ರೇಕಿಂಗ್ ನ್ಯೂಸ್
09-07-24 05:30 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರು ಕಾಂಗ್ರೆಸ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಪಾಳಕ್ಕೆ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ. ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್. ಯೋಗ್ಯತೆ ಇಲ್ಲದ ಮನುಷ್ಯ. ತಾಕತ್ತಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈಮಾಡಿ ನೋಡಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಶಾಸಕರು ರಾಹುಲ್ ಗಾಂಧಿ ಮಾತನಾಡಿರೋದನ್ನು ಅಪಾರ್ಥ ಮಾಡುತ್ತಿದ್ದಾರೆ. ಹಿಂದುಗಳ ಬಗ್ಗೆ ಯಾವುದೇ ಮಾತು ಆಡಿಲ್ಲ. ಹಿಂದುಗಳು ಯಾರನ್ನೂ ದ್ವೇಷ ಮಾಡಲ್ಲ ಎಂದಿದ್ದಾರೆ. ಆದರೆ ಭರತ್ ಶೆಟ್ಟಿ ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ರಾಹುಲ್ ಗಾಂಧಿ ಅವರಿಗೆ ಕಪಾಳಕ್ಕೆ ಹೊಡಿಬೇಕು ಎಂದು ಹೇಳಿದ್ದಾನೆ.

ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್. ಅವನು ಯೋಗ್ಯತೆ ಇಲ್ಲದ ಮನುಷ್ಯ. ಅವನು ಮೊದಲು ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಮಾಡಲಿ. ತಾಕತ್ತು ಇದ್ರೆ ಅವ ಗಂಡು ಮಗ ಆಗಿದ್ರೆ ಕಾರ್ಯಕರ್ತನ ಮೇಲೆ ಕೈ ಹಾಕಲಿ. ಆಮೇಲೆ ಜಿಲ್ಲೆಯಲ್ಲಿ ಏನು ಆಗುತ್ತೆ ಎಂದು ನಾನು ನೋಡ್ತೇನೆ.
ಬೆಳ್ತಂಗಡಿ ಶಾಸಕನೊಬ್ಬ ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗ್ತಾನೆ. ಭರತ್ ಶೆಟ್ಟಿ ವಿರೋಧ ಪಕ್ಷದ ನಾಯಕನಿಗೆ ಕಪಾಳಕ್ಕೆ ಹೊಡಿಬೇಕು ಅಂತಾನೆ. ಅವನ ಮೇಲೆ ಪೊಲೀಸರು ಸುಮೋಟೊ ಕೇಸ್ ಹಾಕಬೇಕು. ರಾಹುಲ್ ಗಾಂಧಿ ಹುಚ್ಚ ಎಂದು ಹೇಳಿದವನನ್ನು ಹಾಗೇ ಬಿಡಬಾರದು. ಇಂತಹ ಮಾತುಗಳನ್ನು ನಾವು ಸಹಿಸಲು ಸಾಧ್ಯವಿಲ್ಲ. ನಾವು ಸಣ್ಣಪುಟ್ಟ ಮಾತನಾಡಿದ್ರೆ ದೊಡ್ಡ ರಂಪಾಟ ಮಾಡುತ್ತಾರೆ. ಇಂಥವರನ್ನು ಹಾಗೆಯೇ ಬಿಡಬಾರದು. ಇವರಿಗೆ ಸಾಮಾನ್ಯ ಜನರನ್ನು ಪ್ರಚೋದಿಸುವುದೇ ಕೆಲಸ ಎಂದು ಕಿಡಿಕಾರಿದರು.
ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಡಾ.ವೈ.ಭರತ್ ಶೆಟ್ಟಿ, ಹಿಂದುಗಳ ವಿರುದ್ಧ ಅವಾಚ್ಯ ಮಾತನಾಡಿರುವ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ ಎಂದಿದ್ದರು. ಸಂಸತ್ ನಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದ ವೇಳೆ ಈ ಮಾತು ಆಡಿದ್ದಾರೆ.
Former minister Ramanath Rai criticized MLA Bharath Shetty during a press meet held at the Congress office in Mallikatte on Tuesday, July 9, over his slap remark about leader of opposition in the Lok Sabha, Rahul Gandhi.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm