ಬ್ರೇಕಿಂಗ್ ನ್ಯೂಸ್
06-07-24 04:26 pm Mangalore Correspondent ಕರಾವಳಿ
ಮಂಗಳೂರು, ಜುಲೈ 6: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾವೊಬ್ಬ ಒಳ್ಳೆ ಈಜು ಪಟು ಎಂಬುದನ್ನು ಮಂಗಳೂರಿನಲ್ಲಿ ಸಾಬೀತು ಪಡಿಸಿದ್ದಾರೆ. ಪ್ರವಾಸ ಕಾರ್ಯಕ್ರಮ ನಿಮಿತ್ತ ಜುಲೈ 5ರ ಶುಕ್ರವಾರ ಮಂಗಳೂರಿಗೆ ಬಂದು ಸರ್ಕಿಟ್ ಹೌಸ್ ನಲ್ಲಿ ಉಳಿದುಕೊಂಡಿದ್ದ ದಿನೇಶ್ ಗುಂಡೂರಾವ್ ಇಂದು ಬೆಳಗ್ಗೆ 6 ಗಂಟೆಗೆ ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳಕ್ಕೆ ಭೇಟಿಯಿತ್ತು ಸ್ವತಃ ಈಜಾಡಿದ್ದಾರೆ.
ಕಳೆದ ವರ್ಷ ಈಜುಕೊಳ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಆಗಮಿಸಿರಲಿಲ್ಲ. ಉದ್ಘಾಟನೆಯನ್ನು ತಾವು ಈಜಾಡುವ ಮೂಲಕವೇ ಮಾಡುವುದಾಗಿ ಅದಕ್ಕೂ ಹಿಂದೆ ಹೇಳಿದ್ದರು. ಕಾರ್ಯ ನಿಮಿತ್ತ ಬಾರದೇ ಇದ್ದ ದಿನೇಶ್ ಗುಂಡೂರಾವ್ ಶನಿವಾರ ಬೆಳಗ್ಗೆ ಸಮಯದ ಸದುಪಯೋಗ ಮಾಡಿದ್ದಾರೆ. ಕಾಂಗ್ರೆಸ್ ಪ್ರಮುಖರ ಜೊತೆಗೆ ಬೆಳಗ್ಗೆ ನೇರವಾಗಿ ಈಜು ಕೊಳಕ್ಕೆ ತೆರಳಿದ ಸಚಿವರು ಈಜುಕೊಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಈಜು ಪಟುಗಳಿಗೆ ಪ್ರತ್ಯೇಕ ಲಾಕ್ ರೂಮ್ ಇರದೇ ಇರುವುದನ್ನು ನೋಡಿ, ತಕ್ಷಣ ಅದಕ್ಕೊಂದು ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ, ಈಜು ಕೊಳದ ಎದುರಿನ ಮೈದಾನವನ್ನು ಇಂಟರ್ಲಾಕ್ ಹಾಕಿಸಿ, ಮಕ್ಕಳ ಆಟಕ್ಕೆ ತಕ್ಕುದಾಗುವಂತೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಮೈದಾನದ ಸುತ್ತ ಫುಡ್ ಕೋರ್ಟ್ ಸ್ಥಾಪನೆಗೂ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈಜು ಕೊಳ ಕಟ್ಟಡದ ವೀಕ್ಷಣೆಯ ಬಳಿಕ ಸುಮಾರು 45 ನಿಮಿಷಗಳ ಕಾಲ ನೀರಿಗಿಳಿದು ಈಜಾಡಿದ್ದಾರೆ. ದಿನೇಶ್ ಗುಂಡೂರಾವ್ ಮೊದಲಿನಿಂದಲೂ ಈಜಾಡುವ ಅಭ್ಯಾಸ ಇಟ್ಟುಕೊಂಡಿದ್ದು, ಸಮಯ ಸಿಕ್ಕಾಗೆಲ್ಲ ಈಜುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಎಮ್ಮೆಕೆರೆ ಈಜು ಕೊಳವನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತಕ್ಕಂತೆ ರೂಪಿಸಲಾಗಿದ್ದು, ನೂರು ಮೀಟರ್ ಉದ್ದದ ಪೂಲ್ ನಲ್ಲಿ 54ರ ಹರೆಯದ ಗುಂಡೂರಾವ್ ಸರಾಗವಾಗಿ ವೃತ್ತಿಪರ ಈಜು ಪಟುಗಳನ್ನು ನಾಚಿಸುವ ರೀತಿ ಈಜಾಡಿದ್ದಾರೆ.
ಹುಟ್ಟಿದ್ದು ಕೊಡಗಿನ ಕುಶಾಲನಗರವಾದರೂ, ದಿನೇಶ್ ಗುಂಡೂರಾವ್ ಬೆಳೆದಿದ್ದು ಬೆಂಗಳೂರಿನಲ್ಲಿ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಮಗನಾಗಿದ್ದರೂ ಹಮ್ಮು ಬಿಮ್ಮು ಇಟ್ಟುಕೊಳ್ಳದೆ ಸಾದಾ ಸೀದಾ ಎನ್ನುವ ರೀತಿಯ ಅಪರೂಪದ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಬಿಇ ಪದವೀಧರನಾಗಿದ್ದು, ತನ್ನ 30ರ ಹರೆಯದಲ್ಲೇ ಅಂದರೆ, 1999ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಆನಂತರ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಆರನೇ ಬಾರಿ ಶಾಸಕರಾಗಿ, ಆರೋಗ್ಯ ಖಾತೆ ಸಚಿವ ಸ್ಥಾನ ನಿಭಾಯಿಸುತ್ತಿದ್ದಾರೆ.
Mangalore minister Dinesh Gundu Rao swimming video goes viral. Appreciates about the standards of swimming pool at Yemmekere Swimming Pool.
26-08-25 06:06 pm
Bangalore Correspondent
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm