ಬ್ರೇಕಿಂಗ್ ನ್ಯೂಸ್
05-07-24 12:11 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಕಮಿಷನರ್ ಕಚೇರಿಗೆ ಸುದ್ದಿಗೋಷ್ಟಿಗೆ ಬಂದಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಯುದ್ಧ ಗೆದ್ದ ಸಂಭ್ರಮದಲ್ಲಿದ್ದರು. ಸುಳಿವೇ ಇಲ್ಲದೆ ದರೋಡೆ ಮಾಡಿ ಗೋಣಿ ಚೀಲದಲ್ಲಿ ಹಣ ಎತ್ತಿಕೊಂಡು ಹೋಗಿದ್ದಾರೆಂದು ತಿಳಿದಿದ್ದ ಉಳಾಯಿಬೆಟ್ಟು ಪ್ರಕರಣದಲ್ಲಿ ಹತ್ತು ಮಂದಿಯನ್ನು ಸದ್ದಿಲ್ಲದೆ ಹೆಡೆಮುರಿ ಕಟ್ಟಿದ್ದರು. ಆದರೆ, ಇದಕ್ಕಾಗಿ 50ಕ್ಕೂ ಹೆಚ್ಚು ಪೊಲೀಸರು ಹಗಲಿರುಳೆನ್ನದೆ ಶ್ರಮ ಹಾಕಿದ್ದಾರೆ ಎನ್ನೋದು ತಿಳಿದುಬಂದ ಮಾಹಿತಿ.
ಜೂನ್ 21ರಂದು ಸರಿರಾತ್ರಿಯಾಗುವ ಮೊದಲೇ ಎಂಟು ಗಂಟೆಗೆ ಹೊತ್ತಿಗೆ ಕಲ್ಲುಕೋರೆ ಉದ್ಯಮಿ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ ಅವರ ಉಳಾಯಿಬೆಟ್ಟಿನ ಮನೆಯಲ್ಲಿ ದರೋಡೆ ನಡೆದಿತ್ತು. ಮುಖಕ್ಕೆ ಮಾಸ್ಕ್, ಮುಸುಕು ಹಾಕ್ಕೊಂಡಿದ್ದ 9 ಮಂದಿಯಿದ್ದ ತಂಡ ನೇರವಾಗಿ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆಗೈದು ಚೂರಿಯಿಂದ ತಿವಿದು ಮನೆಯೆಲ್ಲ ಜಾಲಾಡಿದ್ದರು. ಮನೆಯವರನ್ನು ಕಟ್ಟಿ ಹಾಕಿ ಅರ್ಧ ಗಂಟೆ ಕಾಲ ಹುಡುಕಾಡಿ ಕೈಗೆ ಸಿಕ್ಕ ನಗದು, ಚಿನ್ನಾಭರಣವನ್ನು ಎತ್ತಿಕೊಂಡು ಹೋಗಿದ್ದರು. ಬೆಡ್, ಕಪಾಟು ಸೇರಿದಂತೆ ಎಲ್ಲವನ್ನೂ ಅಡಿಮೇಲು ಮಾಡಿದ್ದರು. ಮನೆಯ ಅಂಗಳದಲ್ಲಿದ್ದ ಕೋಟ್ಯಾನ್ ಅವರ ಫಾರ್ಚುನರ್ ಕಾರಿನಲ್ಲೇ ಆರೋಪಿಗಳು ತೆರಳಿದ್ದರೂ, ಅದನ್ನು ಅನತಿ ದೂರದಲ್ಲಿ ಬಿಟ್ಟು ಅಲ್ಲಿಂದ ತಾವು ಬಂದಿದ್ದ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು. ಮನೆಯ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ದಾಖಲಾಗಿದ್ದರೂ, ಅದರಲ್ಲೇನೂ ಹೆಚ್ಚಿನ ಸುಳಿವು ಸಿಕ್ಕಿರಲಿಲ್ಲ.
ಸಿಸಿಟಿವಿ ಹಿಂದೆ ಬಿದ್ದಿದ್ದ ಪೊಲೀಸರು
ಬಂಟ್ವಾಳ ಮಾರ್ಗದಲ್ಲಿ ಇನ್ನೋವಾ ವಾಹನ ಕೆಲ ಹೊತ್ತಿನಲ್ಲೇ ತೆರಳಿದ್ದು ಕಂಡುಬಂದಿದ್ದರಿಂದ ಪೊಲೀಸ್ ತಂಡ ಆ ಕಡೆಯ ಮಾರ್ಗದಲ್ಲೂ ಹುಡುಕಾಟ ನಡೆಸಿತ್ತು. ಅದೇ ಹೊತ್ತಿಗೆ, ಆಸುಪಾಸಿನ 20 ಕಿಮೀ ವ್ಯಾಪ್ತಿಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಎರಡು ಇನ್ನೋವಾ ಕಾರು ತಲಪಾಡಿ ಮೂಲಕ ಪಾಸ್ ಆಗಿರುವುದು ಪತ್ತೆಯಾಗಿತ್ತು. ಬೇರೆ ಬೇರೆ ಕಡೆಯ ಸಿಸಿಟಿವಿ ಚೆಕ್ಕಿಂಗಲ್ಲಿ, ಆ ಎರಡು ಇನ್ನೋವಾ ಕಾರುಗಳೇ ಪೊಲೀಸರ ಶಂಕೆ ಗಟ್ಟಿ ಮಾಡಿಸಿತ್ತು. ಇದೇ ಹೊತ್ತಿಗೆ ಮತ್ತೊಂದು ಪೊಲೀಸರ ತಂಡ ಪದ್ಮನಾಭ ಕೋಟ್ಯಾನ್ ಮತ್ತು ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲಸಗಾರರ ಮೊಬೈಲ್ ಟ್ರೇಸ್ ಮಾಡಿತ್ತು. ಕೋಟ್ಯಾನ್ ಜೊತೆಗೆ ಯಾವತ್ತೂ ಇರುತ್ತಿದ್ದ ಚಾಲಕ ವಸಂತ ಕುಮಾರ್ ದರೋಡೆ ನಡೆದ ದಿನವೂ ಆನಂತರ ಬಂದು ಪೊಲೀಸರ ಜೊತೆಗೆ ಸೇರಿಕೊಂಡಿದ್ದ. ಪೊಲೀಸರು ಮನೆಯಲ್ಲಿ ಬಂದು ತಪಾಸಣೆ ಮಾಡಿದಾಗಲೂ, ಮರುದಿನ ಬಂದು ತನಿಖೆ ನಡೆಸುತ್ತಿದ್ದಾಗಲೂ ಜೊತೆಗಿರುತ್ತಿದ್ದ.
ಪೊಲೀಸರು ತಪಾಸಣೆ ವೇಳೆ ಚಾಲಕ ವಸಂತ ಕುಮಾರ್ ಮತ್ತು ಆತ ಸಂಪರ್ಕಿಸುತ್ತಿದ್ದ ಮೊಬೈಲ್ ನಂಬರುಗಳ ಮೇಲೆ ತನಿಖೆ ನಡೆಸಿದ್ದರು. ಶಂಕೆ ಬರುತ್ತಲೇ ಆತನನ್ನು ಎತ್ತಾಕಿದ್ದ ಪೊಲೀಸರು ಟ್ರೀಟ್ಮೆಂಟ್ ಆರಂಭಿಸಿದ್ದರು. ನೀರುಮಾರ್ಗದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ರೇಮಂಡ್ ಡಿಸೋಜ, ಬಜ್ಪೆಯಲ್ಲಿ ಬೇಕರಿ ನಡೆಸುತ್ತಿದ್ದ ರಮೇಶ್ ಪೂಜಾರಿ, ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪೈವಳಿಕೆ ಮೂಲದ ಬಾಲಕೃಷ್ಣ ಶೆಟ್ಟಿ ನಡುವೆ ಹೆಚ್ಚು ಒಡನಾಟ ಇರುವುದು ಕಂಡುಬಂದಿತ್ತು. ಇವರೊಳಗಿನ ಲಿಂಕ್ ಮೇಲೆ ಪೊಲೀಸರು ವರ್ಕೌಟ್ ಮಾಡುತ್ತಲೇ ದರೋಡೆ ಸಂಚು ಬಯಲಾಗಿತ್ತು. ಇವರನ್ನು ಎತ್ತಾಕಿದ್ರೂ ದರೋಡೆಗೈದು ನಗದು ಹೊತ್ತೊಯ್ದಿದ್ದ ತೆರಳಿದ್ದ ತಂಡ ಬೇರೆಯೇ ಆಗಿತ್ತು.
ತೃಶ್ಶೂರು ಮೂಲದ ತಂಡ ಇದರ ಹಿಂದಿರೋದು ತಿಳಿದು ಮಂಗಳೂರಿನ ಹತ್ತು ಮಂದಿಯಷ್ಟು ಪೊಲೀಸರು ಅಲ್ಲಿಗೆ ತೆರಳಿದ್ದರು. ಏಳೆಂಟು ದಿನಗಳ ಕಾಲ ತೃಶ್ಶೂರಿನಲ್ಲೇ ಉಳಿದುಕೊಂಡು ಸ್ಥಳೀಯ ಪೊಲೀಸರ ನೆರವು ಪಡೆದು ಆರೋಪಿಗಳ ಬೆನ್ನು ಹತ್ತಿದ್ದರು. ದರೋಡೆ ತಂಡದ ಜಾಡು ಸಿಗುತ್ತಲೇ ಮೂರು ತಂಡಗಳಲ್ಲಾಗಿ ಹೊರಟಿದ್ದ ಪೊಲೀಸರು ಜೊತೆಯಾಗಿದ್ದರು. ತೃಶ್ಶೂರು ಮತ್ತು ತಿರುವನಂತಪುರ ಮೂಲದ ಹತ್ತು ಮಂದಿಯ ತಂಡ ಕೃತ್ಯ ಎಸಗಿದವರಾಗಿದ್ದು, ಆ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್ ಬಾಬು, ಜಾಕಿರ್ ಯಾನೆ ಶಾಕೀರ್, ವಿನೋಜ್, ಸಜೀಶ್, ಶಿಜೋ ದೇವಸ್ಸಿ, ಬಿಜು ಎಂಬವರು ಸಿಕ್ಕಿಬಿದ್ದಿದ್ದಾರೆ. ಆದರೆ ಇವರಲ್ಲಿ ಹೆಚ್ಚಿನ ಪ್ರಮಾಣದ ನಗದು ಸಿಕ್ಕಿಲ್ಲ ಎನ್ನಲಾಗುತ್ತಿದೆ. ಇನ್ನೂ ಐವರು ತಲೆಮರೆಸಿಕೊಂಡಿದ್ದು, ಎಷ್ಟು ನಗದು ಹಣ ಮತ್ತು ಚಿನ್ನಾಭರಣ ಹೊತ್ತೊಯ್ದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅವರೆಲ್ಲ ಸಿಕ್ಕ ನಂತರವೇ ಸರಿಯಾದ ಮಾಹಿತಿ ಸಿಗಬೇಕು ಅಂತಾರೆ ಪೊಲೀಸರು.
ಆರು ತಿಂಗಳ ಹಿಂದೆಯೇ ಸ್ಕೆಚ್
ಕಲ್ಲುಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಕಾಂಗ್ರೆಸ್ ಮುಖಂಡರಾಗಿದ್ದು ಪಕ್ಷದ ನಾಯಕರ ಜೊತೆಗೆ ಆಪ್ತ ಒಡನಾಟ ಇಟ್ಟುಕೊಂಡಿದ್ದವರು. ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಕೆಲವರಿಗೆ ಹಣಕಾಸು ನೆರವನ್ನೂ ನೀಡಿದ್ದರು ಎನ್ನಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇನಾಯತ್ ಆಲಿ, ಬಂಟ್ವಾಳದ ಹುಲಿ ರಮಾನಾಥ ರೈ ಜೊತೆಗೂ ಹತ್ತಿರದ ನಂಟಿನಲ್ಲಿದ್ದವರು. ಚುನಾವಣೆ ಸಂದರ್ಭದಲ್ಲಿ ಪದ್ಮನಾಭ ಕೋಟ್ಯಾನ್ ಕೈಯಲ್ಲಿ ಭಾರೀ ನಗದು ಚಲಾವಣೆ ಆಗುತ್ತಿದೆಯೆಂಬ ಮಾಹಿತಿ ಜೊತೆಗಿದ್ದ ಚಾಲಕ ವಸಂತನಿಗೆ ತಿಳಿದಿತ್ತು. ಇದೇ ಕಾರಣಕ್ಕೆ ವಸಂತ ತನ್ನ ಆಪ್ತರ ಜೊತೆಗೆ ಕೋಟ್ಯಾನ್ ಮನೆಯಲ್ಲಿ ಕೋಟೆಗಟ್ಟಲೆ ನಗದು ಹಣ ಇರುವ ಬಗ್ಗೆ ಹೇಳಿಕೊಂಡಿದ್ದ. ವಿಚಾರ ಅರಿತ ರೇಮಂಡ್ ಡಿಸೋಜ ಕೋಟಿಗಟ್ಟಲೆ ದುಡ್ಡನ್ನು ಹೊಡೆದು ಐಷಾರಾಮಿ ಜೀವನದ ಪ್ಲಾನ್ ಹಾಕಿದ್ದ. ಇದಕ್ಕೆ ಉಪ್ಪು ಖಾರ ಹಾಕಿದ್ದು ರಮೇಶ್ ಪೂಜಾರಿ ಮತ್ತು ಬಾಲಕೃಷ್ಣ ಶೆಟ್ಟಿ.
ನೂರು ಕೋಟಿ ದೋಚಲು ಭಾರೀ ಪ್ಲಾನ್
ಬಾಲಕೃಷ್ಣ ಶೆಟ್ಟಿ ಬಸ್ ಇನ್ನಿತರ ವಾಹನಗಳಲ್ಲಿ ಚಾಲಕನಾಗಿ ತೆರಳುತ್ತಿದ್ದುದರಿಂದ ಕೇರಳ, ಕರ್ನಾಟಕದಲ್ಲಿ ಕನೆಕ್ಟಿವಿಟಿ ಇತ್ತು. ಸ್ಕೆಚ್ ಹಾಕಿದ್ರೆ ಏನಿಲ್ಲ ಅಂದ್ರೂ ನೂರು ಕೋಟಿ ದುಡ್ಡು ಖಚಿತ ಎಂದು ರೇಮಂಡ್ ಡಿಸೋಜ ಪುಂಗಿ ಊದಿದ್ದ. ಬಾಲಕೃಷ್ಣ ಶೆಟ್ಟಿ ನೂರು ಕೋಟಿಯೆಂದು ಹೇಳಿದ್ದನ್ನೇ ನಂಬಿದ್ದ ತೃಶ್ಶೂರಿನ ಮಾಪಿಳ್ಳೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹೇಳತೊಡಗಿದಾಗ ಅದು ಮುನ್ನೂರು ಕೋಟಿಯಾಗಿತ್ತು. ಹೀಗಾಗಿ ಕನಿಷ್ಠ ನೂರಿನ್ನೂರು ಕೋಟಿ ನಗದು ಲೂಟಿ ಮಾಡಲು ಎಷ್ಟು ಗೋಣಿ ಬೇಕು ಎಂದೂ ಲೆಕ್ಕ ಹಾಕಿದ್ದರು. ಹತ್ತು ಮಂದಿಯಲ್ಲೂ ಗೋಣಿ ಇರಬೇಕು, ಸಿಕ್ಕ ಸಿಕ್ಕಲ್ಲಿ ತುಂಬಿಸಬೇಕು ಎಂದು ಯೋಜನೆ ಹಾಕಿದ್ದರು. ಇದಕ್ಕಾಗಿ ಆ ಮನೆಯ ಇಂಚಿಂಚು ಮಾಹಿತಿಯನ್ನೂ ಕಲೆಹಾಕಿದ್ದ ತಂಡ ಹಲವು ಬಾರಿ ಕೋಟ್ಯಾನ್ ಮನೆಯ ಆಳ ಅಗಲವನ್ನು ತಿಳಿದು ಹೋಗಿತ್ತು. ರಾತ್ರಿ ವೇಳೆ ನರಪಿಳ್ಳೆಯೂ ಬಾರದ 30 ಎಕ್ರೆ ಎಸ್ಟೇಟಿನ ನಟ್ಟ ನಡುವಿರುವ ಮನೆ ಎಂಬುದನ್ನು ಲೆಕ್ಕ ಹಾಕಿದ್ದ ತಂಡ ಜೂನ್ 18ರಂದು ಬಂದಿದ್ದರೂ, ಕೊನೆಕ್ಷಣದಲ್ಲಿ ಪ್ಲಾನ್ ಬದಲಿಸಿತ್ತು. ಆ ಮನೆಯಲ್ಲಿ ಸಿಸಿಟಿವಿ ಇರುವುದನ್ನೂ ತಿಳಿದಿದ್ದ ಆಗಂತುಕರು ಮುಖಕ್ಕೆ ಮಾಸ್ಕ್, ಮುಸುಕನ್ನೂ ಹಾಕಿದ್ದರು. ಜೂನ್ 21ರಂದು ಕೃತ್ಯ ಮುಗಿಸಿ ಹಿಂತಿರುಗುವ ಭರದಲ್ಲಿ ಸಿಸಿಟಿವಿ ಡಿವಿಆರ್ ಬದಲು ಅಲ್ಲಿದ್ದ ಮಾಡೆಮ್ ಕಿಟ್ ಅನ್ನೇ ಕಿತ್ತುಕೊಂಡು ಒಯ್ದಿದ್ದರು.
ದಿಕ್ಕು ತಪ್ಪಿಸಲು ನೋಡಿದ್ದೇ ಪ್ಲಾನ್ ಕೆಡಿಸಿತ್ತು
ಶಾಕಿರ್ ಅಷ್ಟಿಷ್ಟು ಹಿಂದಿ ತಿಳಿದುಕೊಂಡಿದ್ದರಿಂದ ಆತ ಮಾತ್ರ ಹೆಚ್ಚಾಗಿ ಮಾತನಾಡಿಕೊಂಡಿದ್ದ. ಇತರರಿಗೆ ಸೂಚನೆಗಳನ್ನು ನೀಡುತ್ತಾ ಪೊಲೀಸರ ದಿಕ್ಕು ತಪ್ಪಿಸಲು ಬೆಂಗಳೂರಿನ ಅಥವಾ ಮಹಾರಾಷ್ಟ್ರ ಮೂಲದ ತಂಡದ ರೀತಿ ಬಿಂಬಿಸಿಕೊಂಡಿದ್ದರು. ಪದ್ಮನಾಭ ಕೋಟ್ಯಾನ್ ಬಳಿ ಹಣದ ಗಂಟು ಎಲ್ಲಿದೆ ಎಂದು ಕೇಳುತ್ತಾ ಹಲ್ಲೆ ನಡೆಸಿದ್ದರು. ಬಹಳಷ್ಟು ನಗದು ಹಣ ದೋಚಿದ್ದಾರೆ ಎಂದು ಹೇಳಲಾಗಿದ್ದರೂ, ಪದ್ಮನಾಭ ಕೋಟ್ಯಾನ್ ಕಳವಾಗಿದ್ದು ಬರೀ ಹತ್ತು ಲಕ್ಷ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ಈ ಪೈಕಿ 9 ಲಕ್ಷವನ್ನು ಪೊಲೀಸರು ಈಗಲೇ ತೋರಿಸಿದ್ದಾರೆ. ಅಲ್ಲದೆ, ಕೇರಳ ನೋಂದಣಿಯ ಎರಡು ಇನ್ನೋವಾ ಕಾರುಗಳನ್ನೂ ವಶಕ್ಕೆ ಪಡೆದು ತಂದಿರಿಸಿದ್ದಾರೆ. ಕಳವಾದ ಚಿನ್ನಾಭರಣದ ಬಗ್ಗೆ ಮಾಹಿತಿ ನೀಡಿಲ್ಲ. ಐಟಿ, ಇಡಿ ಮೇಲಿನ ಭಯದಿಂದಲೋ ಏನೋ, ಉದ್ಯಮಿ ಕೋಟ್ಯಾನ್ ಕೂಡ ಕಳ್ಳರು ಕಿತ್ತುಕೊಂಡು ಹೋಗಿರುವ ಒಟ್ಟು ಆಸ್ತಿಯ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ ಸುಳಿವೇ ಇಲ್ಲದ ಕೇಸನ್ನು ಪೊಲೀಸರು ಎರಡು ವಾರ ಕಳೆಯುವಷ್ಟರಲ್ಲಿ ಭೇದಿಸಿದ್ದು ನಿಜಕ್ಕೂ ಭೇಷ್ ಎನ್ನಬೇಕಾದ ಕೆಲಸ.
Mangalore Ulaibettu dacoity case, how did the mangalore police nab the criminals in the clueless case. Read the intresting crime story by Headline Karnataka. : The police have reportedly arrested ten persons in connection with the case of armed robbery at businessman Padmanabha Kotian’s house in Ulaibettu Permanki, Mangaluru.
26-08-25 06:06 pm
Bangalore Correspondent
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm