ಬ್ರೇಕಿಂಗ್ ನ್ಯೂಸ್
05-06-23 10:13 pm Mangalore Correspondent ಕರಾವಳಿ
ಮಂಗಳೂರು, ಜೂನ್ 5: ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಹಲ್ಲೆಗೀಡಾದ ಯುವಕರ ಪೈಕಿ ಒಬ್ಬನ ಸೋದರ ಪೊಲೀಸ್ ಕಮಿಷನರ್ ಗೆ ದೂರು ಕೊಟ್ಟು ಹೇಳಿಕೆ ಪಡೆಯುವ ಸಂದರ್ಭದಲ್ಲಿ ಉಳ್ಳಾಲ ಎಸ್ಐ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ.
ಹಲ್ಲೆಗೀಡಾದ ಯುವಕರನ್ನು ಹೇಳಿಕೆ ಪಡೆಯುವುದಕ್ಕಾಗಿ ಘಟನೆ ನಡೆದ ಮಾರನೇ ದಿನ ಠಾಣೆಗೆ ಕರೆಸಲಾಗಿತ್ತು. ಈ ವೇಳೆ, ಆಶಿಕ್ ಎನ್ನುವಾತನ ಸೋದರ ಮಹಮ್ಮದ್ ಎಂಬಾತ ಜೊತೆಗೆ ಬಂದಿದ್ದು, ಇದೇ ರೀತಿ ಹೇಳಿಕೆ ನೀಡುವಂತೆ ಸೂಚಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಆಕ್ಷೇಪಿಸಿದ ಎಸ್ಐ ಸಂತೋಷ್, ನೀನು ಆ ಜಾಗದಲ್ಲಿ ಇರಲಿಲ್ಲ ಅಲ್ವಾ.. ನೀನು ಹೇಳಿದ ಹಾಗೆ ಬರೆಯಬೇಕು ಎಂದು ಹೇಳಿದರೆ ಹೇಗೆ.. ನೀನು ಹೊರಗೆ ಹೋಗು. ಅಲ್ಲಿದ್ದ ಯುವಕರು ಹೇಳಿದ ರೀತಿಯಲ್ಲಿ ಬರೆದುಕೊಳ್ತೇವೆ ಎಂದಿದ್ದಾರೆ.
ಇದನ್ನು ವಿರೋಧಿಸಿದ್ದ ಆ ವ್ಯಕ್ತಿ, ಪೊಲೀಸರಿಗೆ ನೋಡಿಕೊಳ್ತೇನೆ ಎಂದು ಹೇಳಿ ಹೊರಬಂದಿದ್ದನಂತೆ. ಇದೇ ವಿಚಾರದಲ್ಲಿ ಪೊಲೀಸ್ ಕಮಿಷನರ್ ಗೆ ದೂರು ಕೊಟ್ಟಿದ್ದು, ಹೇಳಿಕೆ ಪಡೆಯುವ ಸಂದರ್ಭದಲ್ಲಿ ಖಾಲಿ ಕಾಗದಕ್ಕೆ ಸಹಿ ಮಾಡಿಸಿದ್ದಾರೆ, ನಾವು ಹೇಳಿದ ರೀತಿಯಲ್ಲಿ ಹೇಳಿಕೆ ದಾಖಲು ಮಾಡಿಲ್ಲ. ವಿದ್ಯಾರ್ಥಿನಿಯರನ್ನು ಠಾಣೆಯಲ್ಲಿ ಕುಳ್ಳಿರಿಸಿ ಕಾಯುವಂತೆ ಮಾಡಿದ್ದಾರೆಂದು ಆರೋಪಿಸಿದ್ದಾನೆ. ದೂರಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್ ಅವರಿಗೆ ವಹಿಸಿದ್ದಾರೆ.
ಉಳ್ಳಾಲ ಪೊಲೀಸರಲ್ಲಿ ಈ ಬಗ್ಗೆ ಮಾಹಿತಿ ಕೇಳಿದಾಗ, ಯಾವುದೇ ಖಾಲಿ ಕಾಗದಕ್ಕೆ ಸಹಿ ಪಡೆದಿಲ್ಲ. ಹೇಳಿಕೆ ಪಡೆಯುವ ಸಂದರ್ಭದಲ್ಲಿ ಸೋದರ ಬಂದು ಆಕ್ಷೇಪಿಸಿದ್ದಕ್ಕೆ ಜೋರು ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಕಾಸರಗೋಡು ಮೂಲದ ಮೂವರು ಯುವಕರಿಗೆ ಹಿಂದು ಸಂಘಟನೆಯ ಯುವಕರು ಹಲ್ಲೆ ನಡೆಸಿದ್ದರು. ಹಿಂದು ಯುವತಿಯರ ಜೊತೆಗೆ ಬೀಚ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಯುವಕರ ಕಡೆಯವರು ಸ್ಪಷ್ಟನೆ ನೀಡುತ್ತಿದ್ದಾರೆ. ಪ್ರಕರಣ ಸಂಬಂಧಿಸಿ ಎಂಟು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
Mangalore Moral Policing, victims allege of beaten up by Ullal Police Inspector, Kuldeep Jain orders for enquiry on this matter. The victim also has alleged that the Inapector has taken his signature on blank paper. Commissioner Kuldeep has ordered a probe through DCP.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am