ಬ್ರೇಕಿಂಗ್ ನ್ಯೂಸ್
22-09-26 02:57 pm HK News Staffer ಕ್ರೈಂ
ಮಂಗಳೂರು, ಸೆ.22: ಪೆರ್ನೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಆರೋಪದಡಿ ಬಂಧಿತಳಾಗಿರುವ ನೂರುನ್ನಿಸಾ ಪ್ರಕರಣದಲ್ಲಿ ಹಲವು ಹೊಸ ಅಂಶಗಳು ಬೆಳಕಿಗೆ ಬಂದಿವೆ. ಘಟನೆಗೂ ಮುನ್ನ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬಸ್ಥರು ಹೇಳಿದ್ದು, ಹೆದರಿಕೆ, ಭಯ, ಆತಂಕ ಹಾಗೂ ಒಂಟಿತನದ ಬಗ್ಗೆ ಪತಿ ಸಿನಾನ್ ಬಳಿ ಆಕೆ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಆದರೆ ಈ ವರ್ತನೆಯ ಆಧಾರದಲ್ಲಿ ನೂರುನ್ನಿಸಾಗೆ ಮಾನಸಿಕ ಖಿನ್ನತೆ ಅಥವಾ ಯಾವುದೇ ನಿರ್ದಿಷ್ಟ ಮಾನಸಿಕ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲು ಸದ್ಯಕ್ಕೆ ಯಾವುದೇ ದೃಢವಾದ ವೈದ್ಯಕೀಯ ಮಾಹಿತಿ ಲಭ್ಯವಿಲ್ಲ. ಮಕ್ಕಳನ್ನು ಬಾವಿಗೆ ಎಸೆದಿರುವುದಕ್ಕೆ ನಿಖರ ಕಾರಣವೂ ಇನ್ನೂ ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ನಾದಿನಿ ನಮಾಜ್ಗೆ ತೆರಳಿದ್ದ ವೇಳೆ ಘಟನೆ
ಸೆಪ್ಟೆಂಬರ್ 19ರಂದು ಶನಿವಾರ ಮಧ್ಯಾಹ್ನ ನಾದಿನಿ ನಮಾಜ್ಗೆ ತೆರಳಿದ್ದ ಸಂದರ್ಭದಲ್ಲಿ ನೂರುನ್ನಿಸಾ, ನಾದಿನಿಯ ಮೂರು ವರ್ಷದ ಮಗು ರಭಿಹನನ್ನು ಬಾವಿಗೆ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ. ಬಳಿಕ ತನ್ನ ಮೂರು ವರ್ಷದ ಮಗು ಆಲಿಯಾಳನ್ನೂ ಬಾವಿಗೆ ಎಸೆದಿದ್ದಾಳೆ ಎನ್ನಲಾಗಿದೆ. ಮೂರನೇ ಮಗುವನ್ನು ಬಾವಿಗೆ ಎಸೆಯಲು ಮುಂದಾದಾಗ ನಾದಿನಿ ಮಧ್ಯಪ್ರವೇಶಿಸಿ ತಡೆದಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ನೂರುನ್ನಿಸಾ ತನ್ನ ಪತಿ ಸಿನಾನ್ ಹಾಗೂ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ ಎನ್ನಲಾಗಿದೆ. ಪೊಲೀಸರ ಎದುರೂ ತಾನು ಮಕ್ಕಳನ್ನು ಬಾವಿಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಕೃತ್ಯಕ್ಕೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರಿಗೆ ಆಕೆ ಸ್ಪಷ್ಟ ಉತ್ತರ ನೀಡಿಲ್ಲ ಎನ್ನಲಾಗಿದೆ.
ಐದು ವರ್ಷಗಳ ಹಿಂದೆ ಸಿನಾನ್ ಅವರನ್ನು ವಿವಾಹವಾಗಿದ್ದ ನೂರುನ್ನಿಸಾ, ಪತಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ತನ್ನ ಮಕ್ಕಳೊಂದಿಗೆ ಮಾತ್ರವಲ್ಲದೆ ನಾದಿನಿಯ ಮೂವರು ಮಕ್ಕಳೊಂದಿಗೂ ಆತ್ಮೀಯವಾಗಿದ್ದರು ಎನ್ನಲಾಗಿದೆ.
ಆದರೆ ಘಟನೆಗೂ ಒಂದು ವಾರದ ಹಿಂದೆ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಪತಿ ಸಿನಾನ್ ಬಳಿ ಭಯ, ಆತಂಕ ಹಾಗೂ ಒಂಟಿತನದ ಬಗ್ಗೆ ಹೇಳಿಕೊಂಡಿದ್ದರೂ, ಮನೆಯವರೊಂದಿಗೆ ಎಂದಿನಂತೆ ಖುಷಿಯಾಗಿ ಮತ್ತು ಆಪ್ತವಾಗಿ ವರ್ತಿಸುತ್ತಿದ್ದಳು ಎನ್ನಲಾಗಿದೆ. ಘಟನೆಗೂ ಮುನ್ನ ನೂರುನ್ನಿಸಾ ಹಾಗೂ ಪತಿ ಸಿನಾನ್ ನಡುವೆ ಫೋನ್ನಲ್ಲಿ ಜಗಳ ನಡೆದಿತ್ತು ಎಂಬ ಮಾಹಿತಿ ಇದೆ. ವೈವಾಹಿಕ ಕಲಹದ ಬಳಿಕ ಕೋಪಗೊಂಡು ನೂರುನ್ನಿಸಾ ಮಕ್ಕಳನ್ನು ಬಾವಿಗೆ ಎಸೆದಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು.
ಘಟನೆಯಲ್ಲಿ ನಾದಿನಿಯ ಮೂರು ವರ್ಷದ ಮಗು ರಭಿಹ ಮೃತಪಟ್ಟಿದ್ದು, ನೂರುನ್ನಿಸಾಳ ಮಗು ಆಲಿಯಾ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೂರುನ್ನಿಸಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಬಂಧಿತಳಾಗಿರುವ ನೂರುನ್ನಿಸಾಳನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೀಗ ಘಟನೆಗೂ ಮುನ್ನ ಆಕೆಯ ವರ್ತನೆಯಲ್ಲಿ ಕಂಡುಬಂದ ಬದಲಾವಣೆ, ಪತಿಗೆ ಆಕೆ ಹೇಳಿಕೊಂಡಿದ್ದ ಭಯ-ಆತಂಕ ಹಾಗೂ ಮಕ್ಕಳನ್ನು ಬಾವಿಗೆ ಎಸೆದ ಸಂದರ್ಭದ ಪರಿಸ್ಥಿತಿಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
23-09-26 05:14 pm
HK News Staffer
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 05:12 pm
HK News Staffer
ರೌಡಿಶೀಟರ್ ಜೊತೆಗೆ ಹುಟ್ಟುಹಬ್ಬ ಪಾರ್ಟಿಯಲ್ಲಿ ಕುಡಿದ...
23-09-26 05:10 pm
ಸೈಬರ್ ಕ್ರೈಮ್ ಪೊಲೀಸರೆಂದು ಹೇಳಿ ವೈದ್ಯರಿಂದಲೇ 1.19...
23-09-26 09:32 am
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm