ಬ್ರೇಕಿಂಗ್ ನ್ಯೂಸ್
27-04-23 04:56 pm Mangaluru Correspondent ಕರಾವಳಿ
ಉಳ್ಳಾಲ, ಎ.27: ನಿನ್ನೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾಗಿದ್ದ ಕಾರ್ ಡೀಲರ್ ಮೃತದೇಹ ಸೋಮೇಶ್ವರದ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್(49) ನಿನ್ನೆ ಮಧ್ಯಾಹ್ನದ ವೇಳೆ ಸೋಮೇಶ್ವರದ ರುದ್ರಪಾದೆಯಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳೀಯ ಮೀನುಗಾರರು, ಈಜುಗಾರರಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಂದು ಮಧ್ಯಾಹ್ನ ಉಚ್ಚಿಲ ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದಿದ್ದ ಜೋಡಿಯೊಂದು ನೀರಾಟಕ್ಕಿಳಿದಾಗ ಯುವಕನ ಕಾಲಿಗೆ ವಸಂತ್ ಅವರ ಮೃತದೇಹ ಸಿಕ್ಕಿಕೊಂಡಿದೆ. ಭಯಗೊಂಡ ಯುವಕನು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ನಿವೃತ್ತ ಯೋಧ ಜಗನ್ನಾಥ್ ಕೋಟೆಕಾರ್ ಎಂಬವರು ನೀರಿಗಿಳಿದು ಮೃತ ದೇಹವನ್ನ ಮೇಲಕ್ಕೆತ್ತಿದ್ದಾರೆ.
ಆತ್ಮಹತ್ಯೆ ಶಂಕೆ; ಕಾರಣ ನಿಗೂಢ
ಮೂಲತಃ ಉಳ್ಳಾಲ ಬಸ್ತಿಪಡ್ಪು ನಿವಾಸಿಯಾದ ವಸಂತ್ ಅಮೀನ್ ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಒಂದಸ್ತಿನ ಸುಂದರವಾದ ಮನೆ ನಿರ್ಮಿಸಿದ್ದರು. ಹಣಕಾಸಿನಲ್ಲಿ ವಸಂತ್ ಅವರಿಗೆ ಯಾವುದೇ ಮುಗ್ಗಟ್ಟು ಇರಲಿಲ್ಲವೆಂದು ಸ್ನೇಹಿತರಲ್ಲದೆ ನೆರೆಯ ಮನೆಯವರು ಹೇಳುತ್ತಾರೆ. ಎರಡು ತಿಂಗಳ ಹಿಂದಷ್ಟೆ ಮೃತ ವಸಂತ್ ಅವರು ಎರಡು ಲಕ್ಷದ ಚಿನ್ನಾಭರಣವನ್ನೂ ಖರೀದಿಸಿದ್ದರಂತೆ. ವಸಂತ್ ಅವರ ಏಕೈಕ ಮಗಳು ಜಿಯಾ SSLC ಪರೀಕ್ಷೆ ಬರೆದಿದ್ದು ಪಿಯು ತರಗತಿ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಳು. ನಿನ್ನೆ ಬೆಳಗ್ಗೆ ಮನೆಯಿಂದ ಹೊರಟ ವಸಂತ್ ಅವರು ಕಾರನ್ನ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಿಲ್ಲಿಸಿ ರುದ್ರಪಾದೆಯಲ್ಲಿ ತನ್ನ ಸೊತ್ತುಗಳನ್ನ ಇರಿಸಿ ನಾಪತ್ತೆಯಾಗಿದ್ದರು.
ವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಪಾಲುದಾರಿಕೆಯಲ್ಲಿ ಕಾರ್ ಡೀಲಿಂಗ್ ಕಚೇರಿ ಹೊಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ವಸಂತ್ ಅವರು ತನ್ನ ಸ್ನೇಹಿತರಲ್ಲಿ ವಿಪರೀತ ಹೊಟ್ಟೆ ನೋವೆಂದು ಹೇಳುತ್ತಿದ್ದರಂತೆ. ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರು ಪತ್ನಿ ನೀತಾ, ಮಗಳು ಜಿಯಾಳನ್ನು ಅಗಲಿದ್ದಾರೆ
Mangalore Ullal Missing Car dealer body found at Someshwar Beach. The deceased has been identified as Vasant Amin (49). Couple who were swimming in the beach suddenly were shocked to see the body.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm