ಬ್ರೇಕಿಂಗ್ ನ್ಯೂಸ್
14-10-20 11:34 am Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 14: ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಮಂಗಳೂರಿನ ಮಾಂಸದ ಮಾರುಕಟ್ಟೆಗಳಿಗೆ ದಿಢೀರ್ ದಾಳಿ ನಡೆಸಿದ್ದಾರೆ.
ಉರ್ವಾ, ಉರ್ವಾ ಸ್ಟೋರ್ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಮಾಂಸದ ಮಾರುಕಟ್ಟೆಗಳಲ್ಲಿ ದಿನವಹಿ ವ್ಯಾಪಾರವಾಗುವ ಮಾಂಸದ ಪ್ರಮಾಣ, ಕಡಿಯುವ ಕುರಿ, ಆಗಳ ಕುರಿತು ರಶೀದಿ ಇಟ್ಟುಕೊಳ್ಳದಿರುವ ವಿಚಾರದ ಬಗ್ಗೆ ಮೇಯರ್ ವ್ಯಾಪಾರಿಗಳನ್ನು ತರಾಟೆಗೆತ್ತಿಕೊಂಡರು. ಎಲ್ಲಿಂದ ಕುರಿ, ಆಡುಗಳನ್ನು ತರುತ್ತೀರಿ, ಎಷ್ಟು ಕಡಿಯುತ್ತೀರಿ ಮತ್ತು ಮಾಂಸದ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಕಂಪ್ಯೂಟರೈಸ್ಡ್ ಬಿಲ್ ಇಟ್ಟುಕೊಳ್ಳಬೇಕು. ಈ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ದಿನವೂ ಚೆಕ್ ಮಾಡಬೇಕು ಎಂದು ಸೂಚನೆ ನೀಡಿದರು.
ದಾಳಿ ವೇಳೆ, ದಿನದ ಮಾಂಸ ಪತ್ತೆಯಾಗಿಲ್ಲ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ. ಇದೇ ವೇಳೆ, ಕುದ್ರೋಳಿ ಕಸಾಯಿಖಾನೆಗೂ ಮೇಯರ್ ಭೇಟಿ ನೀಡಿದ್ದಾರೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ಡೈಲಿ ಆಡು, ಕುರಿ, ದನಗಳನ್ನು ಕಡಿಯಲಾಗುತ್ತದೆ ಎನ್ನುವ ಮಾಹಿತಿಯೇ ಇರಲಿಲ್ಲ. ಅದರ ಬಗ್ಗೆ ರಶೀದಿ ಕೇಳಿದ್ದಕ್ಕೆ ಅಲ್ಲಿನ ಸಿಬಂದಿಗಳು ಕೈಯಲ್ಲಿ ಬರೆದ ಚೀಟಿಗಳನ್ನು ಮುಂದಿಟ್ಟರು. ರಶೀದಿ, ಬಿಲ್ ಪುಸ್ತಕ ಇಟ್ಟುಕೊಳ್ಳದ ವ್ಯಾಪಾರಿಗಳ ವಿರುದ್ಧ ಗರಂ ಆದ ಮೇಯರ್, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.
ದಿನವೂ ದನ, ಆಡುಗಳನ್ನು ಕಡಿಯುವ ವೇಳೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿರಬೇಕು. ಅಧಿಕಾರಿಗಳ ಅನುಮತಿಯ ಬಳಿಕವೇ ವಧೆ ಮಾಡಬೇಕೆಂದು ನಿಯಮ ಇದೆ. ಆರೋಗ್ಯ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.
Mangaluru City Corporation (MCC) officials, including mayor Diwakara raided the slaughterhouse under the limits of MCC as there were allegations that beef meat is being mixed with mutton here on Wednesday 14th, October 2020.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm