ಬ್ರೇಕಿಂಗ್ ನ್ಯೂಸ್
30-06-22 11:16 pm Mangaluru Correspondent ಕರಾವಳಿ
ಮಂಗಳೂರು, ಜೂನ್ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಸುರಿದ ಮಳೆ ಕೆಲವು ಭಾಗದಲ್ಲಿ ವಿಸ್ಮಯಗಳನ್ನೇ ಸೃಷ್ಟಿಸಿದೆ. ಸರಿಯಾಗಿ ಮಳೆಯಾಗದೆ, ನದಿಯಲ್ಲೂ ನೀರು ತುಂಬಿಕೊಂಡಿಲ್ಲ. ಮಳೆಯನ್ನೇ ನಂಬಿ ಕೃಷಿ ಮಾಡೋರು ಮಳೆ ಇಲ್ಲ ಎಂದ್ಕೊಂಡು ತಲೆಗೆ ಕೈಹೊತ್ತು ಕುಳಿತಿದ್ದರು. ಅಂಥದ್ರಲ್ಲಿ ಒಂದೇ ದಿನ ಮೇಘ ಸ್ಫೋಟದ ರೀತಿ ಮಳೆಯಾಗಿದ್ದು, ಮಂಗಳೂರಿನ ಹಲವೆಡೆ ಅವಾಂತರವನ್ನೇ ಸೃಷ್ಟಿಸಿದೆ.
ನಗರ ಹೊರವಲಯದ ವಳಚ್ಚಿಲ್, ಅಡ್ಯಾರ್ ಪದವಿನಲ್ಲಿ ಹಿಂದೆ ಯಾವತ್ತೂ ಜನರು ಈ ಪರಿಯ ನೀರನ್ನು ನೋಡಿಲ್ವಂತೆ. ಇವತ್ತು ಬೆಳಗ್ಗೆದ್ದು ನೋಡಿದರೆ, ರಸ್ತೆಯ ಪೂರ್ತಿ ನೀರಿನ ಪ್ರವಾಹವೇ ಎದುರಾಗಿತ್ತು. ವಳಚ್ಚಿಲ್ ಪ್ರದೇಶದಲ್ಲಿ ಕೆಲವು ಮನೆಗಳಿಗೂ ನೀರು ನುಗ್ಗಿತ್ತು. ಗುಡ್ಡದ ಮೇಲಿನ ಲೆವಲ್ ಪ್ರದೇಶವಾಗಿರುವ ವಳಚ್ಚಿಲ್, ಅಡ್ಯಾರ್ ಪದವಿನಲ್ಲಿ ಎಷ್ಟು ಮಳೆ ಬಂದರೂ, ಅದು ಹರಿದು ಹೋಗಲು ಕ್ಷಣಾರ್ಧ ಸಾಕು. ಆದರೆ, ರಾತ್ರಿಯಿಂದ ನಿರಂತರ ಸುರಿದ ಮಳೆ ನೀರು ಹರಿದು ಹೋಗದೇ ಅಲ್ಲಿಯೇ ನಿಂತಿತ್ತೋ ಅನ್ನುವ ರೀತಿ ಭಾಸವಾಗಿತ್ತು.






ವಳಚ್ಚಿಲ್ ಭಾಗದ ಜನರು ಯಾವತ್ತೂ ಈ ಪರಿಯ ಮಳೆಯನ್ನು, ಮಳೆನೀರನ್ನು ನೋಡಿರಲಿಲ್ಲ. ವಳಚ್ಚಿಲ್ ಕಡೆಯಿಂದ ಕೆಳಗಿನ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆಯ ಅಡ್ಡಲಾಗಿ ಸಣ್ಣ ಸೇತುವೆ ಒಂದಿದೆ. ಆ ಸೇತುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕುತ್ತಿದ್ದರು. ಅಡ್ಯಾರ್ ಪಂಚಾಯತ್ ಆಡಳಿತ ಈ ಬಗ್ಗೆ ಯಾವುದೇ ಕ್ರಮವನ್ನೂ ವಹಿಸಿರಲಿಲ್ಲ. ಇದೇ ಕಾರಣಕ್ಕೆ ಮೊದಲು ಸೇತುವೆಯಲ್ಲಿ ನೀರು ಬ್ಲಾಕ್ ಆಗಿತ್ತು ಅನ್ನುವ ಮಾತನ್ನು ಸ್ಥಳೀಯರು ಹೇಳುತ್ತಾರೆ. ಆನಂತರ, ನೀರು ಸರಾಗವಾಗಿ ಹರಿಯುತ್ತಿದ್ದರೂ, ಆ ಸೇತುವೆ ಸಾಲದೆ ನೀರು ರಸ್ತೆಯನ್ನು ಆವರಿಸಿಕೊಂಡಿತ್ತು. ರಸ್ತೆಯ ಮೂಲಕವೇ ಕೆಳಗೆ ಹರಿದು ಬಂದಿದ್ದ ನೀರು ಪಡೀಲ್, ಕಣ್ಣೂರಿಗೂ ಬಂದಿತ್ತು ಎನ್ನಲಾಗುತ್ತಿದೆ.
ಇದೇ ಮೊದಲ ಬಾರಿಗೆ ಪಡೀಲ್- ಕಣ್ಣೂರಿನಲ್ಲಿ ನೆರೆ ಉಂಟಾಗಿತ್ತು. ಸಾಮಾನ್ಯವಾಗಿ ನೇತ್ರಾವತಿ ನದಿಯಲ್ಲಿ ನೀರು ಉಕ್ಕೇರಿ ಕೆಲವೊಮ್ಮೆ ತೀರ ಪ್ರದೇಶದಲ್ಲಿ ನೀರು ಆವರಿಸಿಕೊಳ್ಳುತ್ತಿತ್ತು. ಆದರೆ, ಈ ಬಾರಿ ನೇತ್ರಾವತಿಯಲ್ಲಿ ನೀರು ಹೆಚ್ಚಿಲ್ಲದಿದ್ದರೂ, ಪಡೀಲ್, ಕಣ್ಣೂರು, ಅಡ್ಯಾರಿನಲ್ಲಿ ಹೆದ್ದಾರಿ ಉದ್ದಕ್ಕೂ ನೀರು ನಿಂತು ವಾಹನ ಸವಾರರನ್ನು ಹೈರಾಣು ಮಾಡಿತ್ತು. ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಮುಂದೆ ಇದೇ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ನೀರು ನಿಂತು, ಆಸ್ಪತ್ರೆಗೂ ನುಗ್ಗಿತ್ತು. ಎಲ್ಲಿ ನೋಡಿದರಲ್ಲಿ ಪಡೀಲ್ ಭಾಗದಲ್ಲಿ ನೀರಿನ ಕೆರೆಯೇ ಉಂಟಾಗಿತ್ತು.



ಮಂಗಳೂರು ಆಸುಪಾಸು ಮೇಘಸ್ಫೋಟ ?
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಎರಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಸುರಿದ ಮಳೆ ಆಯಾ ಭಾಗದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿತ್ತು. ಒಂದೇ ಏರಿಯಾದಲ್ಲಿ ಮೇಘ ಸ್ಫೋಟದ ರೀತಿ ಭೀಕರ ಮಳೆಯಾಗುವುದು, ಅದರಿಂದಾಗಿ ಆ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗುವುದಕ್ಕೆ ಕಾರಣವಾಗುತ್ತಿದೆ. ಬಂಟ್ವಾಳ ತಾಲೂಕಿನ ವೀರಕಂಭ ಎನ್ನುವ ಗ್ರಾಮದಲ್ಲಿ ಒಂದೇ ದಿನ 140 ಮಿಲ್ಲಿ ಮೀಟರ್ ಮಳೆಯಾಗಿದೆ ಎನ್ನುವ ಅಂಕಿ ಅಂಶ ಇದೆ. ಇದೇ ರೀತಿ ಅಡ್ಯಾರ್ ಪದವು, ವಳಚ್ಚಿಲ್ ಭಾಗದಲ್ಲಿ ಅದಕ್ಕಿಂತ ಹೆಚ್ಚು ಮಳೆಯಾಗಿರುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ಕಾರಣ ಆಗಿಂದಾಗ್ಗೆ ಭಾರೀ ಮಳೆಯಾಗುವುದು, ಅದರಿಂದ ತೀವ್ರ ನಾಶ-ನಷ್ಟಕ್ಕೆ ಕಾರಣವಾಗುವ ರೀತಿಯ ಮಳೆ ನಗರ ಪ್ರದೇಶದಲ್ಲಿ ವೈಪರೀತ್ಯಗಳನ್ನು ಸೃಷ್ಟಿಸುತ್ತಿದೆ. ಈ ರೀತಿಯ ವಿದ್ಯಮಾನ ದೇಶದ ಹಲವೆಡೆ ನಗರ ಪ್ರದೇಶಗಳಲ್ಲಿ ಆಗುತ್ತಿರುವುದು ಹೊಸ ಬೆಳವಣಿಗೆ.
Heavy rains in Mangalore, traffic blocked in Valachil after heavy water flow. Movement of traffic was affected by accumulation of water at Pumpwell Junction, near Mahakalipadpu railway underpass and other main roads in Mangaluru.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 10:10 pm
Mangalore Correspondent
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm