ಬ್ರೇಕಿಂಗ್ ನ್ಯೂಸ್
15-07-23 07:20 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ದೇಹದ ಪ್ರತಿಯೊಂದು ಅಂಗವು ಬಹಳ ಪ್ರಧಾನವಾದುವು. ದೇವರು ಅಚ್ಚುಕಟ್ಟಾಗಿ ಒಂದೊಂದು ಅಂಗವನ್ನು ರಚಿಸಿದ್ದಾನೆ. ಅವುಗಳಲ್ಲಿ ಕಣ್ಣುಗಳು ಕೂಡ ಒಂದು. ದೃಷ್ಟಿ ವ್ಯವಸ್ಥೆಯ ಅಂಗವಾಗಿರುವ ಕಣ್ಣುಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ.
ಹದಿಹರೆಯದರಲ್ಲಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ವಿಷಾದನೀಯ. ಇದಕ್ಕೆ ನೇರವಾದ ಕಾರಣ ನಾವು ಅನುಸರಿಸುವ ಕಳಪೆ ಜೀವನಶೈಲಿ ಎನ್ನಬಹುದು. ತಾಜಾ ಹಣ್ಣು-ತರಕಾರಿಗಳ ಬದಲಾಗಿ ಪಿಜ್ಜಾ, ಬರ್ಗರ್ ಎಂದೆಲ್ಲಾ ತಿಂದು ರೋಗಗಳನ್ನು ಬರ ಮಾಡಿಕೊಳ್ಳುತ್ತಿದ್ದೇವೆ. ವಾಸ್ತವವಾಗಿ, ಕೆಲವೊಂದು ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಅವುಗಳು ಸಂಭಾವ್ಯ ಕಣ್ಣಿನ ಪೊರೆ, ಮಂದ ದೃಷ್ಟಿ ಸೇರಿದಂತೆ ಅನೇಕ ಅಪಾಯಗಳನ್ನು ತಪ್ಪಿಸುತ್ತವೆ.
ಮೀನು
ನೀವು ಮಾಂಸಾಹಾರಿಗಳಾಗಿದ್ದರೆ ಬಹುಶಃ ಮೀನುಗಳು ನಿಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಸಾಲ್ಮನ್ ಜಾತಿಯ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ಆರೋಗ್ಯಕರವಾದ ಕೊಬ್ಬಾಗಿದ್ದು ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾದ ಆರೋಗ್ಯ, ದೃಷ್ಟಿ ಬೆಳವಣಿಗೆಗೆ ಉತ್ತಮವಾಗಿದೆ.
ಇನ್ನು, ಸಾಲ್ಮನ್ ಮೀನುಗಳು ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ ಎನ್ನಲಾಗುತ್ತದೆ. ಒಣ ಕಣ್ಣಿನ ಪರಿಹಾರಕ್ಕೆ ಮೀನಿನ ಎಣ್ಣೆಯನ್ನು ಕೂಡ ಬಳಸಬಹುದು.
ಮೊಟ್ಟೆಗಳು
ಸಸ್ಯಾಹಾರಿಗಳು ಹಾಗು ಮಾಂಸಾಹಾರಿಗಳು ಆರೋಗ್ಯಕ್ಕಾಗಿ ಮೊಟ್ಟೆಗಳನ್ನು ತಮ್ಮ ಡಯಟ್ನಲ್ಲಿ ಸೇರಿಸುತ್ತಾರೆ. ಇದೊಂದು ಪ್ರೋಟೀನ್ ಫುಡ್ ಆಗಿದ್ದು, ಯಥೇಚ್ಚವಾದ ವಿಟಮಿನ್ ಎ, ಲುಟೀನ್, ಜಿಯಾಕ್ಸಾಂಥಿನ್ ಮತ್ತು ಸತು ಸೇರಿದಂತೆ ಸಾಕಷ್ಟು ಅಂಶಗಳನ್ನು ಹೊಂದಿದೆ.
ಇವು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಂತಹ ಗಂಭೀರ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ಬಾದಾಮಿ
ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಕಣ್ಣುಗಳ ಆರೋಗ್ಯವನ್ನು ಕಾಪಾಡಲು, ಬುದ್ದಿ ಶಕ್ತಿ ಹೆಚ್ಚಿಸಲು ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ವಿಟಮಿನ್ ಇ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಮ್ಯಾಕ್ಸುಲರ್ ಡಿಜೆನರೇಶನ್ ಹಾಗು ಕಣ್ಣಿನ ಪೊರೆಗಳನ್ನು ಪ್ರತಿಬಂಧಿಸಬಹುದು.
ದಿನದ ಯಾವುದೇ ಸಮಯದಲ್ಲಿಯಾದರೂ ಬಾದಾಮಿಯನ್ನು ಕುರುಕಲು ತಿಂಡಿಯಂತೆ ಸೇವಿಸಬಹುದು. ಬಾದಾಮಿ ಬೀಜಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಕಾರಣ, ನಿಯಮಿತವಾಗಿ ಸೇವಿಸಿ ಎಂದು ಸಲಹೆ ನೀಡಲಾಗಿದೆ.
ಕ್ಯಾರೆಟ್
ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂಬ ವಿಷಯ ನಿಮಗೆ ಈಗಾಗಲೇ ತಿಳಿದಿದೆ. ಇದರಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಶ್ರೀಮಂತವಾಗಿದೆ. ಸಂಭಾವ್ಯ ಕಣ್ಣಿನ ಸೋಂಕುಗಳು ಸೇರಿದಂತೆ ಇತರ ಗಂಭೀರ ಕಣ್ಣಿನ ಪರಿಸ್ಥಿತಿಯನ್ನು ತಡೆಯುತ್ತದೆ.
ಕ್ಯಾರೆಟ್ಗಳನ್ನು ಹಸಿಯಾಗಿ, ಸೂಪ್, ಚಾಟ್, ಸಲಾಡ್ಗಳಲ್ಲಿ ಸೇರಿಸಿ ತಿನ್ನಬಹುದು.
ಕಿತ್ತಳೆ ಹಣ್ಣು
ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಇದು ಸಿಟ್ರಸ್ ಜಾತಿಗೆ ಸೇರುತ್ತವೆ. ವಿಟಮಿನ್ ಸಿ ಯಥೇಚ್ಛವಾಗಿರುವ ಈ ಹಣ್ಣು ಆರೋಗ್ಯಕರ ಕಣ್ಣಿಗೆ ಅದ್ಭುತವಾದ ಆಹಾರವಾಗಿದೆ.
ಕಿತ್ತಳೆ ಕಣ್ಣುಗಳಲ್ಲಿ ಆರೋಗ್ಯಕರ ರಕ್ತನಾಳಗಳಿಗೆ ಕೊಡುಗೆ ನೀಡುತ್ತದೆ. ಕಣ್ಣಿನ ಪೊರೆಗಳ ಬೆಳವಣಿಗೆಯನ್ನು ಎದುರಿಸಬಹುದು. ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಯೆಯನ್ನು ದೂರ ಮಾಡಬಹುದು.
ಕಣ್ಣಿನ ಆರೋಗ್ಯಕ್ಕೆ ಸಲಹೆಗಳು
ಕನಿಷ್ಟ 2 ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ವೈದ್ಯರನ್ನು ಭೇಟಿ ಮಾಡುವುದು
ಸನ್ಗ್ಲಾಸ್ ಧರಿಸುವುದು
ಧೂಮಪಾನವನ್ನು ತಪ್ಪಿಸುವುದು
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು
amazing food for eye problems.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm