ಬ್ರೇಕಿಂಗ್ ನ್ಯೂಸ್
20-03-26 09:49 pm HK News Staffer ಸಿನಿಮಾ
ಬೆಂಗಳೂರು, ಮಾರ್ಚ್ 20: ಕಾಂತಾರ ಸಿನಿಮಾದಿಂದ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ನಟ ರಿಷಬ್ ಶೆಟ್ಟಿ ಯುಗಾದಿ ದಿನವೇ ಹೊಸ ಸುದ್ದಿ ಕೊಟ್ಟಿದ್ದಾರೆ. ‘ಚಾಪ್ಟರ್ 2’ ಎಂದು ಪೋಸ್ಟ್ ಮಾಡಿ ಅಚ್ಚರಿ ಸೃಷ್ಟಿಸಿದ್ದಾರೆ. ಇದೇ ವೇಳೆ, ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಿಂದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಅನ್ಫಾಲೋ ಮಾಡಿ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ.
ಕಾಂತಾರ ಮೊದಲ ಚಿತ್ರ ಬಂದ ಬಳಿಕ 'ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಿದ್ದು ಭಾರೀ ಹೆಸರು ಮತ್ತು ಗಳಿಕೆಯನ್ನೂ ಮಾಡಿತ್ತು. ಇದೀಗ ರಿಷಬ್ ಅವರು ಯುಗಾದಿ ದಿನವೇ ‘ಚಾಪ್ಟರ್ 2’ ಎಂದು ರಿಷಬ್ ಘೋಷಣೆ ಮಾಡಿದ್ದಲ್ಲದೆ ತನ್ನದೇ ಬ್ಯಾನರಿನಡಿ ಸಿನಿಮಾ ಮಾಡುತ್ತಾರೆಯೇ ಎಂಬ ಶಂಕೆಗೀಡು ಮಾಡಿದ್ದಾರೆ.
ಇಲ್ಲಿ ರಿಷಬ್ ‘ಚಾಪ್ಟರ್ 2’ ಘೋಷಣೆ ಮಾಡಿದ್ದಕ್ಕಿಂತಲೂ ಹೊಂಬಾಳೆ ಫಿಲಂಸನ್ನು ಅನ್ ಫಾಲೋ ಮಾಡಿದ್ದು ಹೆಚ್ಚು ಚರ್ಚೆ ಹುಟ್ಟುಹಾಕಿದೆ. ಯಾಕಂದ್ರೆ, ‘ಕಾಂತಾರ’ ಚಿತ್ರ ರಿಷಬ್ ಶೆಟ್ಟಿಯದ್ದಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದು ನಿರ್ಮಾಣ ಹೊಣೆ ಹೊತ್ತ ಹೊಂಬಾಳೆ ಫಿಲ್ಮ್ಸ್ ತಂಡ. ಆದರೆ, ಇದೀಗ ‘ಚಾಪ್ಟರ್ 2’ ಅಂತ ಸುಳಿವು ಕೊಟ್ಟು ಹೊಂಬಾಳೆ ತಂಡವನ್ನು ಅನ್ ಫಾಲೋ ಮಾಡಿದ್ದು ಹೊಸ ಚಿತ್ರಕ್ಕೆ ನಿರ್ಮಾಣದ ಹೊಣೆಯನ್ನು ಬೇರೆಯವರಿಗೆ ಕೊಡುತ್ತಾರಾ, ತಾವೇ ಮಾಡುತ್ತಾರೆಯೇ ಎಂಬ ಸಂಶಯ ಹುಟ್ಟಿಸಿದೆ.
ಆದರೆ ಪೋಸ್ಟ್ ನಲ್ಲಿ ಎಲ್ಲಿಯೂ ‘ಕಾಂತಾರ: ಚಾಪ್ಟರ್ 2’ ಎಂದು ಹೇಳಿಲ್ಲ. ಆದರೆ ಕಾಂತಾರ ಚಿತ್ರದ್ದೇ ಚಾಪ್ಟರ್ 2 ಎನ್ನುವ ಮಾತನ್ನು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ವೇಳೆ, ರಿಷಬ್ ಅವರು ಇನ್ಸ್ಟಾದಲ್ಲಿ ‘ಕಾಂತಾರ’ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಖಾತೆಗಳನ್ನು ಅನ್ಫಾಲೋ ಮಾಡಿದ್ದಾರೆ. ಹೀಗಾಗಿ ರಿಷಬ್ ಯಾವ ಅರ್ಥದಲ್ಲಿ ಈ ಟಾಂಗ್ ಕೊಟ್ಟಿದ್ದಾರೆಂದು ಗೊಂದಲವೂ ಸೃಷ್ಟಿಯಾಗಿದೆ.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm