ಬ್ರೇಕಿಂಗ್ ನ್ಯೂಸ್
25-11-21 06:42 pm HK news Desk ನ್ಯೂಸ್ View
ಮಂಗಳೂರು, ನ.25: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ. ಬೆಳ್ತಂಗಡಿಯ ಲಾಯ್ಲದಲ್ಲಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದಾಗ, ಹೆಗಲು ಕೊಟ್ಟ ವಿಚಾರ ಜಾಲತಾಣದಲ್ಲಿ ತೀವ್ರ ಟೀಕೆ- ಟಿಪ್ಪಣಿಗೆ ಗುರಿಯಾಗಿದೆ. ಅಲ್ಲದೆ, ಅನ್ಯ ಸಮುದಾಯದ ವ್ಯಕ್ತಿ ದೇವರ ಪಲ್ಲಕ್ಕಿಯನ್ನು ಹೊತ್ತಿದ್ದಕ್ಕೆ ಜಿಎಸ್ ಬಿ ಸಮುದಾಯದ ಧಾರ್ಮಿಕ ಮುಖಂಡರು ಗರಂ ಆಗಿದ್ದು, ಪಲ್ಲಕ್ಕಿ ಶುದ್ಧೀಕರಣ ಮಾಡಿ, ಅದಕ್ಕೆ ಕಾರಣವಾದ ಯುವಕರಲ್ಲಿ ತಪ್ಪು ಕಾಣಿಕೆ ಹಾಕಿಸಿದ್ದಾರೆ ಎನ್ನುವ ವಿಚಾರವೂ ಭಾರೀ ಚರ್ಚೆಗೆ ಕಾರಣವಾಗಿದೆ.
ನ.19ರ ಕಾರ್ತಿಕ ಹುಣ್ಣಿಮೆ ದಿನದಂದು ಜಿಎಸ್ ಬಿ ಸಮುದಾಯಕ್ಕೆ ಸೇರಿದ ಲಾಯ್ಲ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ ನಡೆದಿತ್ತು. ಪಲ್ಲಕ್ಕಿ ಮೆರವಣಿಗೆ ಆರಂಭಗೊಳ್ಳುವ ಸಂದರ್ಭದಲ್ಲಿ ಶಾಸಕ ಹರೀಶ ಪೂಂಜ ಕೂಡ ಅಲ್ಲಿಗೆ ಬಂದಿದ್ದು ಅಲ್ಲಿದ್ದ ಕೆಲವು ಯುವಕರ ಸಲಹೆಯಂತೆ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು. ಮರುದಿನ ಹರೀಶ್ ಪೂಂಜ ಪಲ್ಲಕ್ಕಿ ಹೊತ್ತ ವಿಡಿಯೋವನ್ನು ಅವರ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಎಸ್ ಬಿ ಸಮುದಾಯದ ಸಂಪ್ರದಾಯಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಪಲ್ಲಕ್ಕಿಗೆ ಎಲ್ಲರೂ ಹೆಗಲು ಕೊಡುವ ಸಂಪ್ರದಾಯ ಇಲ್ಲ. ಅದಕ್ಕೆಂದೇ ನಿಗದಿತ ಜನರನ್ನು ನೇಮಕ ಮಾಡಲಾಗುತ್ತದೆ. ಅವರು ವ್ರತದಲ್ಲಿದ್ದು ದೇವರ ಪಲ್ಲಕ್ಕಿಯನ್ನು ಹೊರುತ್ತಾರೆ ಎನ್ನುವ ಮಾತುಗಳು ಜಿಎಸ್ ಬಿ ಸಮುದಾಯದ ಕಡೆಯಿಂದ ಬಂದಿದೆ. ಶಾಸಕರು ಗೃಹಪ್ರವೇಶ, ಮದುವೆ, ಮುಂಜಿ ಹೀಗೆ ಎಲ್ಲೆಲ್ಲೋ ಸುತ್ತಾಡಿ ಸಂಜೆ ಹೊತ್ತಿಗೆ ಮನೆಗೆ ತೆರಳುವ ಸಂದರ್ಭದಲ್ಲಿ ಉತ್ಸವಕ್ಕೆ ಬಂದಿದ್ದು ಅಂಥ ಸಂದರ್ಭದಲ್ಲಿ ಪಲ್ಲಕ್ಕಿ ಹೊತ್ತು ಅಪವಿತ್ರ ಮಾಡಿದ್ದಾರೆ ಎಂಬ ಟೀಕೆ ಜಾಲತಾಣದಲ್ಲಿ ಬಂದಿದೆ.
ಹರೀಶ್ ಪೂಂಜಾ ಪಲ್ಲಕ್ಕಿ ಹೊರುವಂತೆ ಇಬ್ಬರು ಜಿಎಸ್ ಬಿ ಸಮುದಾಯದ ಯುವಕರು ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ಮಣಿದು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ಯುವಕರಿಬ್ಬರನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಪವಿತ್ರ ವ್ಯಕ್ತಿ ದೇವರನ್ನು ಹೊತ್ತ ಮುಟ್ಟಿದ್ದಕ್ಕೆ ಪಲ್ಲಕ್ಕಿಯನ್ನು ಶುದ್ಧೀಕರಣ ಮಾಡಿದ್ದಾಗಿ ಹೇಳಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಜಾಲತಾಣದಲ್ಲಿ ಪರ- ವಿರೋಧ ಟೀಕೆಗಳು ತೀವ್ರವಾಗಿ ಕೇಳಿಬಂದಿವೆ. ಹಂಸಲೇಖ ವಿಚಾರದಲ್ಲಿ ಉರಿದು ಬಿದ್ದ ಬಲಪಂಥೀಯರು ಈ ಬಾರಿ ಯಾಕೆ ಶಾಸಕರನ್ನು ತರಾಟೆ ಮಾಡಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಶಾಸಕರು ಮುಟ್ಟಿದ್ದು ಮೈಲಿಗೆ ಆಗಲಿಲ್ಲವೇ ಎಂದು ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಮತ್ತೊಂದು ಕಡೆ, ಜಿಎಸ್ ಬಿ ಸಮುದಾಯದ ನಡೆಯನ್ನೂ ವ್ಯಾಪಕವಾಗಿ ಟೀಕಿಸಲಾಗಿದೆ. ಪಲ್ಲಕ್ಕಿಗೆ ಹೆಗಲು ನೀಡಿದ ಮಾತ್ರಕ್ಕೆ ವೆಂಕಟರಮಣ ದೇವರಿಗೆ ಮೈಲಿಗೆ ಆಯಿತೇ..? ಇದರಿಂದ ಶುದ್ಧೀಕರಣ ನಡೆಸಿದ್ದು ನಿಮ್ಮ ಯಾವ ರೀತಿಯ ಅಸ್ಪೃಶ್ಯತೆ ಎಂದು ಹಲವರು ಪ್ರಶ್ನಿಸಿದ್ದಾರೆ. ಟೀಕೆ- ಟಿಪ್ಪಣಿ ಕೇಳಿಬರುತ್ತಲೇ ಹರೀಶ್ ಪೂಂಜಾ ಖಾತೆಯಲ್ಲಿದ್ದ ವಿಡಿಯೋ ಡಿಲೀಟ್ ಆಗಿತ್ತು. ಆದರೆ, ವಿಡಿಯೋ ಮಾತ್ರ ಭಾರೀ ವೈರಲ್ ಆಗಿದ್ದು ಶಾಸಕರು ಸಿಕ್ಕಸಿಕ್ಕಲ್ಲಿ ಪೋಸು ಕೊಟ್ಟಿದ್ದೇ ಟೀಕೆಗೆ ಗುರಿಯಾಯ್ತು ಎಂದು ಟೀಕಿಸುತ್ತಿದ್ದಾರೆ.
Mangalore Harish Poonja giving hand to Palki goes viral in GSB community. News view by HK.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm