ಬ್ರೇಕಿಂಗ್ ನ್ಯೂಸ್
31-03-21 07:32 pm By ಸ.ರಘುನಾಥ್ ನ್ಯೂಸ್ View
ಮಾಡಬೇಕಾದ ಕಸರತ್ತುಗಳನ್ನು ಮಾಡಿ ನರಸಿಂಗರಾಯ ಮತ್ತವನ ಗೆಳೆಯರು ಕೆಂಪರಾಜನು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶ್ವಿಯಾದರು. ಆದರೆ ಪೈಲ್ವಾನ್ ಸಿದ್ಧಪ್ಪನ ಗೆಲುವಿನ ತಕ್ಕಡಿಯ ಮುಳ್ಳು ಅತ್ತಿತ್ತ ಆಡುತ್ತಲೇ ಇತ್ತು. ಗ್ರಾಮ ಪಂಚಾಯತಿ ಗದ್ದುಗೆ ಹಿಡಿಯಲು ಅವನ ಗೆಲುವು ಅನಿವಾರ್ಯವಾಗಿತ್ತು. ಎದುರು ಪಾರ್ಟಿಯ ಕಡೆಯಿಂದ ಹೆಂಡ, ಹಣ ಹರಿದಿತ್ತು. ಜೊತೆಗೆ ದಿನ ಬಿಟ್ಟು ದಿನ ಕಡತೂರಿನ ಮನೆಗಳಲ್ಲಿ ಫಾರಂ ಕೋಳಿಗಳಿಗೆ ಮಸಾಲೆ ಅರೆಯುತ್ತಿತ್ತು.
ಖರ್ಚಿಗೆ ಹಣ, ಜೈಕಾರಕ್ಕೆ ಹೆಂಡ, ನಾಲಿಗೆಗೆ ಚಿಕನ್ ಲೆಗ್ ಪೀಸು.. ಇವೇ ಸಿದ್ಧಪ್ಪನ ಗೆಲುವನ್ನು ಡೋಲಾಯಮಾನ ಸ್ಥಿತಿಯಲ್ಲಿಟ್ಟಿದ್ದವು. ಒಂದು ಹಂತದಲ್ಲಿ ಸಿದ್ಧಪ್ಪ, ನಾನು ಚುನಾವಣೆಗೆ ನಿಂತಿದ್ದು ಮೂರ್ಖತನವಾಯಿತೇನೋ, ಮರ್ಯಾದೆಯಿಂದಿದ್ದೆ. ಅದನ್ನು ಕಳೆದುಕೊಳ್ಳುವೆನೇನೋ ಎಂದು ಆತಂಕದಲ್ಲಿ ನುಡಿದಿದ್ದ. ನರಸಿಂಗರಾಯನಲ್ಲಿಯೂ ಇದೇ ಆತಂಕ. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಸುಮ್ಮನೆಯೂ ಇರುವಂತಿರಲಿಲ್ಲ. ಏಕೆಂದರೆ ಸಿದ್ಧಪ್ಪ ಚುನಾವಣೆಗೆ ನಿಲ್ಲಲು ಅವನೇ ಮುಖ್ಯ ಪ್ರೇರಕನಾಗಿದ್ದ.
ಚುನಾವಣೆ ರಾಜಕೀಯದಲ್ಲಿ ಪಳಗಿದವರ ಸಲಹೆ-ಸಹಕಾರಿಲ್ಲದೆ ಕೆಲಸವಾಗದು ಅನ್ನಿಸಿತು. ಗೆಳೆಯರೊಡನೆ ಇದನ್ನೇ ಆಡಿದ. ಮಾತು ಬೀರಪ್ಪ, ದುಗ್ಗಪ್ಪ, ಮುನೆಂಕಟೇಗೌಡ, ಅಪ್ಪಯ್ಯ, ಮುನೆಕ್ಕನವರೆಗೂ ಹೋಗಿ ಚರ್ಚೆಗೆ ಬಂದಿತು. ಎಲ್ಲರಿಗೂ ಆಪದ್ಬಾಂಧವನಾಗಿ ಕಂಡವನು ಗೋವಿಂದಪ್ಪ.
ಮನೆಗೆ ಬಂದ ಗುಂಪನ್ನು ಕಂಡ ಗೋವಿಂದಪ್ಪ, ಏನೋ ಗ್ರಹಚಾರ ಬಂತು ಅಂದುಕೊಂಡ. ಎಂಎಲ್ಎ ಗರಡಿಯಲ್ಲಿ ಪಳಗಿದ್ದವನು ನಗೆತಂದುಕೊಂಡು, 'ದೊಡ್ಡೋರೆಲ್ಲ ಬಂದವರೆ. ಕಾಪಿ, ನೀರು ಮಡಗು' ಎಂದು ಎಲ್ಲರಿಗೂ ಕೇಳಿಸುವಂತೆ ಹೆಂಡತಿಗೆ ಹೇಳಿದ. ವಿಷಯ ಕೇಳಿಸಿಕೊಂಡ ಮೇಲೆ, ಎಂಎಲ್ಎ ರೀತಿಯಲ್ಲೇ ತೊಡೆಯ ಮೇಲೆ ಎಡಗೈ ಆಡಿಸುತ್ತ, ಸಿದ್ಧಪ್ಪನಿಗೆ ಎಗೆನೆಸ್ಟಾಗಿ ನಿಂತಿರೊ ಪೆರುಮಾಳಪ್ಪ ಎಮ್ಮೆಲ್ಯೆ ಮನುಷ್ಯ. ನಾನೇನು ಮಾಡಾಕಾಗುತ್ತೆ? ಪಾರ್ಟಿ ದ್ರೋಹ ಆಗುತ್ತೆ ಅಂದು, ಈ ಹುನ್ನಾರೆಲ್ಲ ನಿಂದೋ ಅನ್ನವಂತೆ ನರಸಿಂಗರಾಯನತ್ತ ನೋಡಿದ. ಅವನು ಮೌನವಾಗಿ ಕೆನ್ನೆ ಬಡಿದುಕೊಂಡ. ನಂಬೋಕಾಗಲ್ಲ ಅಂದ. ನಮ್ಮನ್ನಾ? ಅಂದ ದುಗ್ಗಪ್ಪ. ಅಲ್ಲೋ ಮಹಾರಾಜ. ಏನೋ ಮಾತು ಬಂತು ಅಂದ. ಸಿದ್ಧಪ್ಪನು ಗೆದ್ರೆ ನಿನ್ನಳೀನು ಪ್ರೆಸಿಡೆಂಟಾಗ್ತಾನೆ. ಅದನ್ನು ತಪ್ಪಿಸ್ತಿಯೇನು? ಎಂದು ಗೆಲುವಿನ ದಾಳವಗಿ ಮಾತು ಎಂದು ಮನೆಂಕಟೇಗೌಡ ಮರ್ಮಕ್ಕೆ ಹೊಡೆದ. ಅಲ್ಲಿ ಕೆಂಪರಾಜನೂ ಇದ್ದುದು ಗೋವಿಂದಪ್ಪನನ್ನು ಇಕ್ಕಟ್ಟಿಗೆ ಹಾಕಿತು. ಈಗ ನೀನು ಸಹಾಯ ಮಾಡಿದರೆ ಮುಂದೆ ನಮ್ಮ ಸಪೋರ್ಟು ನಿನ್ನ ಎಂಲ್ಯೇಗೇ ಎಂದು ಪಿಲ್ಲಣ್ಣ ಅನಿರೀಕ್ಷಿತವಾಗಿ ಘೋಷಿಸಿಬಿಟ್ಟ.
ಸಂದರ್ಭವರಿತವರು ಮೌನ ಸಮ್ಮತಿಯೆಂಬಂತೆ ಕುಳಿತರು. ಆಂ, ಊಂ ಅಂದ ಗೋವಿಂದಪ್ಪ, ದುಡ್ಡು ಬಂದಿರೋದು ನನ್ನ ಕೈಗೆ. ಕೆಲವರಿಗೆ ಕೊಡ್ತಿನಿ, ಕೆಲವರಿಗೆ ಕೊಡೊಲ್ಲ. ದುಡ್ಡು ಕೊಡದೋರ ಓಟುಗಳನ್ನು ನಿಮ್ಮ ಕಡೆ ಮಾಡ್ಕೊಳ್ಳೊ ಕೆಲಸ ನಿಮ್ದು. ಆದರೆ ಇದು ಗುಟ್ಟಾಗಿರಬೇಕು ಅಂದ. ಅಷ್ಟು ಮಾಡು ಮಾರಾಯ ಸಾಕು. ಉಳಿದದ್ದು ನಾವು ನೊಡಿಕೊಳ್ತೇವೆ ಅಂದ ನರಸಿಂಗರಾಯ.
ಒಳ್ಳೆ ತೀರ್ಮಾನ ನೋಡು ಎಂದು ಇಷ್ಟು ಜನರ ಮುಂದೆ ನಾರಾಯಣಕ್ಕ ಹೇಳಿದ್ದು ಗೋವಿಂದಪ್ಪನಿಗೆ ಹಿತವಾಗಿತ್ತು. ತಂತ್ರ ಫಲಿಸಿತು. ಸಿದ್ಧಪ್ಪನೂ ಗೆದ್ದ, ಕೆಂಪರಾಜ ಪಂಚಾಯತಿ ಅಧ್ಯಕ್ಷನಾದ. ಆದರೆ ಗೋವಿಂದಪ್ಪ ಗುಟ್ಟಾಗಿರಬೇಕೆಂದುಕೊಂಡಿದ್ದು ಗುಟ್ಟಾಗಿರಲಿಲ್ಲ. ಸಿದ್ಧಪ್ಪನ ವಿರುದ್ಧ ಸೋತ ಪೆರುಮಾಳಪ್ಪ ಎಮ್ಮೆಲ್ಯೆಗೆ ದೂರುಕೊಟ್ಟ ಅದಕ್ಕೆ ಪ್ರತಿಯಾಗಿ ಗೋವಿಂದಪ್ಪ, ಪಿಲ್ಲಣ್ಣನ ಮಾತನ್ನು ಬಾಣವಾಗಿಸಿ ಎಮ್ಮೆಲ್ಯೆಯ ಎದೆಗೆ ಹೊಡೆದ. ಅದು ನೇರ ತಲುಪಿತು.
ಪೆರುಮಾಳಪ್ಪನದು ಪ್ರಭಾವಿ ಜಾತಿಯಲ್ಲವಾದ್ದರಿಂದ ಅವನ ದೂರನ್ನು ಕಡೆಗಣಿಸಿ, ತನ್ನ ರಾಜಕೀಯ ವರಸೆ ಬಳಸಿ ಅವನನ್ನು ತಣ್ಣಗಾಗಿಸಿದ. ಅವನಲ್ಲಿ ಉಳಿದಿದ್ದ ಅಸಮಾಧಾನವನ್ನು ಹೋಗಲಾಡಿಸಲು ಅಂದು ಅವನನ್ನು ಜೊತೆಯಲ್ಲಿ ಊಟಕ್ಕೆ ಕೂರಿಕೊಂಡು ಸೆಲ್ಫಿ ತೆಗೆಸಿಕೊಂಡು ನಕ್ಕ ನಗೆಯ ಅರ್ಥ ಗೋವಿಂದಪ್ಪನಿಗೆ ತಿಳಿಯಿತು. ಪೆರುಮಾಳಪ್ಪ ಆ ಫೋಟೋವನ್ನು ವೈರಲ್ ಮಾಡಿ ಬೀಗುತ್ತ, ತಾನು ಬಕರಾ ಆದುದನ್ನು ತಿಳಿಯಲೇ ಇಲ್ಲ.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm